For Quick Alerts
ALLOW NOTIFICATIONS  
For Daily Alerts

ಈ ಕುಲ್ಫಿಯನ್ನು ಒಂದು ವಾರದವರೆಗೆ ಇಡಬಹುದು!

|

ತುಂತುರು ಮಳೆಯಲ್ಲಿ ಕುಲ್ಫೀ ತಿನ್ನಲು ಮಜವಾದರೆ, ಬೇಸಿಗೆಯಲ್ಲಿ ಕುಲ್ಫಿ ಹಿತಾನುಭವ ನೀಡುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಪಟ್ಟು ತಿನ್ನುವ ಈ ಕುಲ್ಫಿಯನ್ನು ಮನೆಯಲ್ಲಿಯೆ ತಯಾರಿಸಬಹುದು.

ರುಚಿಕರವಾದ ಪಿಸ್ತಾ-ಕೇಸರಿ ಕುಲ್ಫಿ ಇಷ್ಟಪಡುವವರಿಗೆ ಅದನ್ನು ಸುಲಭವಾಗಿ ತಯಾರಿಸುವ ವಿಧಾನ ನೋಡಿ ಇಲ್ಲಿದೆ.

Pista kulfi recipe

ಬೇಕಾಗುವ ಸಾಮಾಗ್ರಿಗಳು
ಅರ್ಧ ಲೀಟರ್ ಗಟ್ಟಿ ಹಾಲು
ಅರ್ಧ ಕಪ್ ಕಾಯಿಸಿದ ಗಟ್ಟಿ ಹಾಲು (1 ಕಪ್ ಹಾಲು ಕಾಯಿಸಿ ಅರ್ಧ ಕಪ್ ಮಾಡಿದ್ದು)
1/4 ಕಪ್ ಹಾಲಿನ ಪುಡಿ
ಅರ್ಧ ಚಮಚ ಕೇಸರಿ
ಸಿಹಿಗೆ ತಕ್ಕ ಸಕ್ಕರೆ
ಸ್ವಲ್ಪ ಕತ್ತರಿಸಿದ ಪಿಸ್ತಾ

ತಯಾರಿಸುವ ವಿಧಾನ

* ಸ್ವಲ್ಪ ದೊಡ್ಡ ಪಾತ್ರೆಯಲ್ಲಿ ಹಾಲು, ಕಾಯಿಸಿ ಅರ್ಧದಷ್ಟು ಮಾಡಿದ ಹಾಲು, ಹಾಲಿನ ಪುಡಿ ಹಾಕಿ ಕುದಿಸಿ. ಈಗ ಕೇಸರಿಯನ್ನು ಸೇರಿಸಿ, ಈಗ ಸಕ್ಕರೆಯನ್ನು ಸೇರಿಸಿ, ಕಡಿಮೆ ಉರಿಯಲ್ಲಿ 10 ನಿಮಿಷದವರೆಗೆ ಸೌಟ್ ನಿಂದ ತಿರುಗಿಸುತ್ತಾ ಕಾಯಿಸಿ.

* ಇದನ್ನು ಈಗ ಕುಲ್ಫಿ ಮೌಲ್ಡ್ಸ್ ಗೆ ಹಾಕಿ ಫ್ರಿಜ್ ನಲ್ಲಿ 6 ಗಂಟೆಗಳ ಕಾಲ ಇಟ್ಟರೆ ಕುಲ್ಫಿ ರೆಡಿ. ಹೀಗೆ ತಯಾರಿಸಿದ ಕುಲ್ಫಿಯನ್ನು 1 ವಾರಗಳ ಕಾಲ ಇಡಬಹುದು.

English summary

Pista kulfi recipe, Variety Of Kulfi Recipe, ಪಿಸ್ತಾ ಕುಲ್ಫಿ ರೆಸಿಪಿ, ಅನೇಕ ಬಗೆಯ ಕುಲ್ಫಿ ರೆಸಿಪಿ

Today, we introduce the all time favourite “Pista kulfi recipe” that is relished by kids and the aged in summer.
X
Desktop Bottom Promotion