ನವರಾತ್ರಿ ವಿಶೇಷ: ಅನಾನಸ್ ಕೇಸರಿಬಾತ್ ಬೊಂಬಾಟ್ ರುಚಿ!

By: Hemanth
Subscribe to Boldsky

ಈಗ ಎಲ್ಲಿ ನೋಡಿದರೂ ನವರಾತ್ರಿಯ ಸಂಭ್ರಮ. ಯಾವುದೇ ದೇವಸ್ಥಾನ, ಮಂದಿರಕ್ಕೆ ಹೋದರೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಅದರಲ್ಲೂ ಬಂಗಾಳೀಯರು ಈಗ ದುರ್ಗಾ ಪೂಜೆಯನ್ನು ಎದುರು ನೋಡುತ್ತಾ ಇದ್ದಾರೆ. ದುರ್ಗಾ ಪೂಜೆಯು ಮಹಾಸಪ್ತಮಿ ಬೋಧೋನ್‌ನಂದು ಆರಂಭವಾಗಲಿದೆ. ದುರ್ಗಾಪೂಜೆಯನ್ನು ದೇಶದ ವಿವಿಧೆಡೆಗಳಲ್ಲಿ ತುಂಬಾ ಸಂಭ್ರಮದಿಂದ ಆಚರಿಸಲಾಗುತ್ತದೆ.

ಅದರಲ್ಲೂ ಪಶ್ಚಿಮಬಂಗಾಳದಲ್ಲಿ ದುರ್ಗಾಪೂಜೆಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಲಾಗುತ್ತದೆ. ನವರಾತ್ರಿ ವೇಳೆ ವಿವಿಧ ರೀತಿಯ ಅಲಂಕಾರ, ಬಣ್ಣಬಣ್ಣದ ದೀಪಗಳು, ಹೀಗೆ ಹಲವಾರು ರೀತಿಯ ವಿಶೇಷಗಳನ್ನು ಕಾಣಬಹುದಾಗಿದೆ. ಬಂಗಾಳಿಗಳು ಎಲ್ಲೇ ಇದ್ದರೂ ದುರ್ಗಾ ಪೂಜೆಯನ್ನು ತಪ್ಪದೆ ಆಚರಿಸುತ್ತಾರೆ.

Pineapple Kesari Bath Recipe
 

ಅಷ್ಟೇ ಅಲ್ಲದೆ ದುರ್ಗಾ ಪೂಜೆಗೆ ಅವರು ವಿಶೇಷವಾದ ಕೆಲವೊಂದು ಅಡುಗೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿಜಯ ದಶಮಿಯಂದು ವಿವಿಧ ರೀತಿಯ ಸಿಹಿ ತಿಂಡಿತಿನಿಸುಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸುತ್ತೇವೆ.... ಹಾಗಾಗಿ ಈ ಬಾರಿ ಬೋಲ್ಡ್ ಸ್ಕೈ ತಂಡ ಅನಾನಸು ಕೇಸರಿಬಾತ್ ಮಾಡುವ ವಿಧಾನವನ್ನು ಪರಿಚಯಿಸುತ್ತಿದೆ, ಮಾಡುವ ವಿಧಾನಕ್ಕಾಗಿ ಮುಂದೆ ಓದಿ... 

 

ನಾಲ್ಕು ಜನರಿಗೆ ಆಗುಷ್ಟು
ತಯಾರಿಸಲು ಬೇಕಾಗುವ ಸಮಯ- 5 ನಿಮಿಷ
ಅಡುಗೆಗೆ ಸಮಯ- 20 ನಿಮಿಷ   ಸ್ವಾದದ ಘಮಲನ್ನು ಹೆಚ್ಚಿಸುವ ಕೇಸರಿ ಬಾತ್ ರೆಸಿಪಿ

ಬೇಕಾಗುವ ಸಾಮಗ್ರಿಗಳು
*ಅನಾಸಿನ ಪ್ಯೂರಿ- ಒಂದು ಕಪ್
*ಬೆಣ್ಣೆ- ಒಂದು ಚಮಚ
*ಸಕ್ಕರೆ- ಒಂದು ಚಮಚ
*ಕೊಬ್ಬು ಕಡಿಮೆಯಿರುವ ಹಾಲು-1 ಕಪ್
*ರವೆ-ಒಂದು ಕಪ್
*ಸಕ್ಕರೆ ಪರ್ಯಾಯ-3 ಚಮಚ
*ಏಲಕ್ಕಿ ಹುಡಿ-½ ಚಮಚ
*ಕೇಸರಿ-ಕೆಲವು ಎಸಲು(ಹಾಲಿನಲ್ಲಿ ಮುಳುಗಿಸಿಡಬೇಕು)    ಹತ್ತೇ ನಿಮಿಷದಲ್ಲಿ ರೆಡಿ ರವೆ ಕೇಸರಿಬಾತ್

ಮಾಡುವ ವಿಧಾನ
1. ತಳ ಆಳವಿರುವ ತವಾ ತೆಗೆದುಕೊಂಡು ಅದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ.

Pineapple Kesari Bath Recipe

2. ಇನ್ನು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ.
3. ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರಲಿ. ಇದಕ್ಕೆ ಸಮಯ ಬೇಕಾಗುತ್ತದೆ. ತಾಳ್ಮೆಯಿರಲಿ.
Pineapple Kesari Bath Recipe

4. ಈಗ ರವೆಗೆ ಕಡಿಮೆ ಕೊಬ್ಬು ಇರುವ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ.
5.ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಬದಲಿಯನ್ನು ಹಾಕಿ. ಇದು ಸರಿಯಾಗಿ ಮಿಶ್ರಣವಾಗುವ ತನಕ ತಿರುಗಿಸಿ.
6.ಈಗ ಇದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಮಧ್ಯಮ ಬೆಂಕಿಯೊಂದಿಗೆ ಇದನ್ನು ಕುದಿಸಿ.
Pineapple Kesari Bath Recipe

7.ಈಗ ಕೇಸರಿ ಹಾಕಿದ ಹಾಲನ್ನು ಇದಕ್ಕೆ ಸೇರಿಸಿ. ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಲು ಬಿಡಿ.
8.ಈಗ ಅನಾನಸು ಕೇಸರಿಬಾತ್ ತಯಾರಾಗಿದೆ. ಇದನ್ನು ಗಾಜಿನ ಪಿಂಗಾಣಿಗೆ ಹಾಕಿಡಿ. ಅದನ್ನು ಪ್ಲೇಟ್‌ನಿಂದ ಮುಚ್ಚಿಡಿ ಮತ್ತು ಪಿಂಗಾಣಿಯನ್ನು ತಿರುಗಿಸಿ.
Pineapple Kesari Bath Recipe

9.ಈಗ ನಿಧಾನವಾಗಿ ಪಿಂಗಾಣಿಯನ್ನು ತೆಗೆಯಿರಿ. ಫಮಫಮಿಸುವ ಕೇಸರಿಬಾತ್ ರೆಡಿ! ಇನ್ನು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಇದನ್ನು ಅಲಂಕರಿಸಬಹುದು.
Pineapple Kesari Bath Recipe
 

Story first published: Tuesday, October 4, 2016, 12:49 [IST]
English summary

Pineapple Kesari Bath Recipe For Durga Puja

Navratri has already started and the Bengalis are easgerly waiting for the Durga Puja, which is going to commence from the 'Mahasaptami' with 'Bodhon'. Durga Puja is the biggest festival that is celebrated in different parts of the country, especially in West Bengal, where people have fun together and worship Goddess Durga with all their devotion.
Please Wait while comments are loading...
Subscribe Newsletter