For Quick Alerts
ALLOW NOTIFICATIONS  
For Daily Alerts

ನೆಲಗಡಲೆಯ ಹಲ್ವಾ-ನವರಾತ್ರಿ ರೆಸಿಪಿ

|

ಎಲ್ಲೆಲ್ಲಿಯೂ ಈಗ ನವರಾತ್ರಿ ಹಬ್ಬದ ಸಡಗರ, ಮನೆಯ ಅಡುಗೆ ಮನೆಯಲ್ಲಿ ಸಿಹಿ ತಿಂಡಿಗಳದ್ದೇ ಕಾರುಬಾರು. ವಿಧ-ವಿಧದ ಪಾಯಸ ಮತ್ತು ಸಿಹಿ ತಿಂಡಿಗಳನ್ನು ತಯಾರಿಸಲಾಗುವುದು. ನವರಾತ್ರಿ ಹಬ್ಬಕ್ಕೆ ಹಲವಾರು ಬಗೆಯ ಸಿಹಿ ತಿಂಡಿಗಳ ಜೊತೆ ನೆಲಗಡಲೆಯ ಹಲ್ವಾವನ್ನು ತಯಾರಿಸಬಯಸುವುದಾದರೆ ಸರಳ ರೆಸಿಪಿ ನೋಡಿ ಇಲ್ಲಿದೆ.

ರೆಸಿಪಿ ತುಂಬಾ ಸರಳವಾಗಿದ್ದು ಮಾಡುವ ವಿಧಾನ ನೋಡೋಣ ಬನ್ನಿ:

Peanut Burfi Recipe – An Easy Sweet Dish

ಬೇಕಾಗುವ ಸಾಮಾಗ್ರಿಗಳು
ಒಂದೂವರೆ ಕಪ್ ನೆಲ ಕಡಲೆ
ಅರ್ಧ ಕಪ್ ತೆಂಗಿನ ತುರಿ
ಎರಡೂವರೆ ಕಪ್ ಸಕ್ಕರೆ
ಅರ್ಧ ಕಪ್ ಸಕ್ಕರೆ
1 ಕಪ್ ಹಾಲು

ಮಾಡುವ ವಿಧಾನ:

* ನೆಲಗಡಲೆಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ.

* ನಂತರ ತುರಿದ ತೆಂಗಿನ ಕಾಯಿ ಮತ್ತು ನೆಲಗಡಲೆಯನ್ನು ರುಬ್ಬಿ(ಪೇಸ್ಟ್ ಗಟ್ಟಿಯಾಗಿರಲಿ).

* ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲು ಹಾಕಿ ಹಾಲು ಮಂದವಾಗುವವರೆಗೆ ಕುದಿಸಿ.

* ಪ್ಯಾನ್ ನಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದ ಮೇಲೆ ರುಬ್ಬಿದ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಕುದಿಸಿ ಹಾಲು ಹಾಕಿ ಕಡಿಮೆ ಉರಿಯಲ್ಲಿ ಕುದಿಸಿ, ತುಪ್ಪ ಮೇಲ್ಭಾಗದಲ್ಲಿ ತೇಲುವವರೆಗೆ ಕುದಿಸಿ.

* ನಂತರ ಪ್ಲೇಟ್ ಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣವನ್ನು ಸುರಿದು ತಣ್ಣಗಾದ ಮೇಲೆ ಕತ್ತರಿಸಿದರೆ ನೆಲಗಡಲೆಯ ಹಲ್ವಾ ರೆಡಿ.

English summary

Peanut Burfi Recipe – An Easy Sweet Dish

The peanut burfi recipe is made of very less ingredients and is extremely tasty. Take a look at how to go about with the peanut burfi recipe.
X
Desktop Bottom Promotion