For Quick Alerts
ALLOW NOTIFICATIONS  
For Daily Alerts

ಯುಗಾದಿ ವಿಶೇಷ: ಹಬ್ಬದ ಗಮ್ಮತ್ತಿಗೆ ಬಿಸಿ ಬಿಸಿ 'ಒಬ್ಬಟ್ಟು'

ಒಬ್ಬಟ್ಟನ್ನು ಸುಲಭವಾಗಿ ತಯಾರಿಸುವ ಕ್ರಮವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದು ಇದರ ರುಚಿ ನಿಮ್ಮ ಅತಿಥಿಗಳನ್ನು ಖಂಡಿತಾ ಸಂತೃಪ್ತಿಪಡಿಸಲಿದೆ.ಒಬ್ಬಟ್ಟಿನಲ್ಲಿ ಬೆಲ್ಲವನ್ನುಉಪಯೋಗಿಸಲಾಗಿರುವುದರಿಂದ ಇದು ಸಕ್ಕರೆಯ ಯಾವುದೇ ಹಾನಿಕಾರಕ ಹೊಂದಿಲ್ಲ

By Manu
|

ಯುಗಾದಿ ಹಬ್ಬದ ಸವಿಯನ್ನು ಹೆಚ್ಚಿಸಲು ಎಲ್ಲರ ಮನೆಯಲ್ಲಿ ಮಾಡುವ ಸಿಹಿತಿಂಡಿಯೇ ಒಬ್ಬಟ್ಟು. ಇದು ಸುಲಭವಾಗಿ ಮಾಡಲು ಸಾಧ್ಯವಿರುವ ತಿಂಡಿಯಾಗಿದ್ದು ದಕ್ಷಿಣ ಭಾರತದ ಎಲ್ಲಾ ಕಡೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಯುಗಾದಿಯಲ್ಲಿ ನಿಮ್ಮ ಮನೆಯಲ್ಲಿ ಒಬ್ಬಟ್ಟಿಲ್ಲದಿದ್ದರೆ ಹೇಗೆ? ಆದರೆ ತಯಾರಿಸುವ ವಿಧಾನ ಗೊತ್ತಿಲ್ಲವೇ? ಈಗ ಚಿಂತೆ ಬೇಡ.

ಒಬ್ಬಟ್ಟನ್ನು ಸುಲಭವಾಗಿ ತಯಾರಿಸುವ ಕ್ರಮವನ್ನು ಇಂದು ನಿಮಗೆ ಪ್ರಸ್ತುತಪಡಿಸುತ್ತಿದ್ದು ಇದರ ರುಚಿ ನಿಮ್ಮ ಅತಿಥಿಗಳನ್ನು ಖಂಡಿತಾ ಸಂತೃಪ್ತಿಪಡಿಸಲಿದೆ. ಒಬ್ಬಟ್ಟಿನಲ್ಲಿ ಬೆಲ್ಲವನ್ನು ಉಪಯೋಗಿಸಲಾಗಿರುವುದರಿಂದ ಇದು ಸಕ್ಕರೆಯ ಯಾವುದೇ ಹಾನಿಕಾರಕ ಪರಿಣಾಮವನ್ನು ಹೊಂದಿಲ್ಲ. ಅಲ್ಲದೇ ಇದರಲ್ಲಿ ಹೆಚ್ಚು ಕ್ಯಾಲೋರಿಗಳೂ ಇಲ್ಲ. ಆದ್ದರಿಂದ ಸ್ಥೂಲಕಾಯ ಆವರಿಸುತ್ತದೆ ಎಂಬ ಭಯವಿಲ್ಲದೇ ಎಲ್ಲರೂ ಸವಿಯಬಹುದಾದ ಸಿಹಿತಿಂಡಿಯಾಗಿದೆ. ಇದನ್ನು ಕೊಂಚವೇ ಹುರಿದಿರುವ ಕಾರಣ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

Obbattu recipe

ಅಗತ್ಯವಿರುವ ಸಾಮಾಗ್ರಿಗಳು
*1-1/2 ಕಪ್ ಮೈದಾ
*1 ಕಪ್ ಕಡ್ಲೆಬೇಳೆ
*1 ಕಪ್ ಬೆಲ್ಲ (ಕಪ್ಪು ಅಥವಾ ಕಂದು ಬೆಲ್ಲವೇ ಉತ್ತಮ)
*1 ಚಿಕ್ಕ ಚಮಚ ರವೆ
*1 ಚಿಕ್ಕ ಚಮಚ ಏಲಕ್ಕಿ
*1 ಚಿಕ್ಕ ಚಮಚ ಎಣ್ಣೆ
*ಅರಿಶಿನ ಪುಡಿ-ಚಿಟಿಕೆಯಷ್ಟು
*ಉಪ್ಪು-ರುಚಿಗನುಸಾರ ಯುಗಾದಿ ಗಮ್ಮತ್ತಿಗೆ ಬಿಸಿ ಬಿಸಿ ಹೂರಣದ ಹೋಳಿಗೆ

ತಯಾರಿಕಾ ವಿಧಾನ:
* ಕಡ್ಲೆಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಿ.
* ಬೇಳೆ ಬೆಂದ ಬಳಿಕ ನೀರನ್ನು ಬಸಿಯಿರಿ.
* ಈಗ ಈ ಬೇಳೆಗೆ ಬೆಲ್ಲವನ್ನು ಕುಟ್ಟಿ ಪುಡಿ ಮಾಡಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷಗಳ ಕಾಲ ಬೇಯಿಸಿ.
* ಬಳಿಕ ಇದನ್ನು ಹೊರತೆಗೆದು ಮಿಕ್ಸಿಯಲ್ಲಿ ನೀರಿಲ್ಲದೇ ಕಡೆಯಿರಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.
* ಮೈದಾಹಿಟ್ಟನ್ನು ರವೆ, ಅರಿಶಿನ ಉಪ್ಪಿನೊಂದಿಗೆ ಕಲಸಿ ಚಪಾತಿಹಿಟ್ಟಿನ ಹದಕ್ಕೆ ತನ್ನಿ. ಕೊಂಚವೇ ಎಣ್ಣೆ ಮಿಶ್ರಣ ಮಾಡಿ ನಾದಿ ಹತ್ತು ನಿಮಿಷ ಹಾಗೇ ಬಿಡಿ.
* ಈಗ ನಾದಿದ ಹಿಟ್ಟಿನಿಂದ ಪುಟ್ಟ ಉಂಡೆಯೊಂದನ್ನು ಮಾಡಿಕೊಂಡು ಕೈಗಳಿಂದಲೇ ಚಪಾತಿಯಂತೆ ಲಟ್ಟಿಸಿ ಇದರ ನಡುವೆ ಬೆಲ್ಲ, ಕಡ್ಲೆಬೇಳೆಯ ಚಿಕ್ಕ ಮುದ್ದೆಯೊಂದನ್ನು ಇರಿಸಿ. ಬಳಿಕ ಚಪಾತಿಯ ಅಂಚುಗಳನ್ನು ಈ ಮುದ್ದೆಯನ್ನು ಆವರಿಸುವಂತೆ ಮುಚ್ಚಿ ಎಲ್ಲಾ ತುದಿಗಳನ್ನು ಒಂದೆಡೆ ಸೇರಿಸಿ ಭದ್ರಪಡಿಸಿ.
* ಈಗ ಪ್ಲಾಸ್ಟಿಕ್ ಹಾಳೆಯೊಂದಕ್ಕೆ ಕೊಂಚ ಎಣ್ಣೆ ಸವರಿ ಈ ಉಂಡೆಯನ್ನು ನಯವಾಗಿ, ಒಡೆಯದಂತೆ ಚಪಾತಿಯಂತೆ ಲಟ್ಟಿಸಿ. ಬಳಿಕ ಬಿಸಿಯಾದ ಕಾವಲಿಯ ಮೇಲೆ ಆಗಾಗ ಪಲ್ಲಟಿಸುತ್ತಾ ಸುಮಾರು ಕಂದುಬಣ್ಣ ಬರುವಷ್ಟು ಬಿಸಿಮಾಡಿ. ಬಿಸಿಬಿಸಿ ಒಬ್ಬಟ್ಟನ್ನು ಮನೆಯವರಿಗೆ ಮತ್ತು ಅತಿಥಿಗಳಿಗೆ ಬಡಿಸಿ, ಮೆಚ್ಚುಗೆ ಪಡೆಯಿರಿ.

English summary

Obbattu Recipe: Famous ugadi dessert

Obbattu is a famous Ugadi dessert. Indian dessert recipes are very simple and easy to prepare. Obbattu is an essential festival recipe and it's known as a popular south Indian dish. This Ugadi planning to prepare an Indian dessert recipe then obbattu is the best choice. This festival recipe has variety of flavours to suit your taste buds. Since Obbattu is a jaggery dish, the sweetener is not of very high calorie. Indian dessert recipes are known to be fattening, but this dish is roasted, so you will not put on excess weight.
X
Desktop Bottom Promotion