For Quick Alerts
ALLOW NOTIFICATIONS  
For Daily Alerts

ಸಿಹಿ ಸಿಹಿಯಾದ ಜಿಲೇಬಿ-ಬಾಯಲ್ಲಿ ನೀರೂರಿಸುತ್ತಿದೆ!

By Jaya subramanya
|

ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಅದರಲ್ಲೂ ಜಿಲೇಬಿ ತನ್ನ ಆಕರ್ಷಕ ಹಳದಿ ಬಣ್ಣ ಮತ್ತು ಅದರಲ್ಲಿ ತೇಲುವ ಸಕ್ಕರೆ ಪಾಕದಿಂದ ಬಾಯಿಯ ರುಚಿಯನ್ನು ದುಪ್ಪಟ್ಟು ಹೆಚ್ಚಿಸುತ್ತದೆ. ಹೇಳಿ ಕೇಳಿ ಇದು ಹಬ್ಬದ ಸೀಸನ್. ಈ ಸಮಯದಲ್ಲಿ ಸಿಹಿಯನ್ನು ನಾವು ತಯಾರಿಸಲೇಬೇಕಾಗುತ್ತದೆ. ಆಗ ಮಾತ್ರವೇ ಹಬ್ಬಕ್ಕೆ ಕಳೆ ಬರಲು ಸಾಧ್ಯ ಅಲ್ಲವೇ..? ಅಲ್ಲದೇ ಇನ್ನೇನು ಒಂದೆರಡು ದಿನಗಳಲ್ಲಿ ನವರಾತ್ರಿ ಹಬ್ಬ ಬರಲಿದೆ, ಇಂತಹ ಸಡಗರದ ಹಬ್ಬಕ್ಕೆ ಗರಿಗರಿಯಾದ ಜಿಲೇಬಿ ಏಕೆ ತಯಾರಿಸಬಾರದು?

Jalebi Sweet Recipe

ಬನ್ನಿ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ರುಚಿಯಾದ ಕುರುಮ್ ಕುರುಮ್ ರುಚಿಯುಳ್ಳ ಬಿಸಿ ಬಿಸಿ ಜಿಲೇಬಿ ಸಿಹಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಪ್ರಮಾಣ - 5
*ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು
*ಸಿದ್ಧತಾ ಸಮಯ - 30 ನಿಮಿಷಗಳು

ಸಾಮಾಗ್ರಿಗಳು:
*ಶುದ್ಧಿಕರಿಸಿದ ಮೈದಾ ಹಿಟ್ಟು (ರಿಫೈಂಡ್ ಫ್ಲೋರ್) - 1 ಕಪ್
*ಮೊಸರು - 1/2 ಕಪ್
*ಆರೆಂಜ್ ಫುಡ್ ಕಲರ್ - 1/4 ನೇ ಚಮಚ
*ಸಕ್ಕರೆ - 1 ಕಪ್
*ನೀರು - 1 ಕಪ್
*ಕೇಸರಿ ದಳಗಳು - 5 ರಿಂದ 6
*ರಾಬ್ರಿ ಮತ್ತು ಪಿಸ್ತಾ ಅಲಂಕಾರಕ್ಕಾಗಿ

ವಿಧಾನ:
1. ದೊಡ್ಡ ಪಾತ್ರೆಯಲ್ಲಿ ರಿಫೈಂಡ್ ಫ್ಲೋರ್, ಆರೆಂಜ್ ಫುಡ್ ಕಲರ್ ಮತ್ತು ಸಾಕಷ್ಟು ನೀರನ್ನು ತೆಗೆದುಕೊಂಡು ಮೃದುವಾದ ನೀರು ನೀರಾಗಿರುವ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬೆಚ್ಚಗಿನ ಸ್ಥಳದಲ್ಲಿ ಇದನ್ನು 8 ರಿಂದ 9 ಗಂಟೆಗಳ ಕಾಲ ಇರಿಸಿ.


2. ನೀರಿನಲ್ಲಿ ಸಕ್ಕರೆ ಮತ್ತು ಕೇಸರಿ ದಳವನ್ನು ಕರಗಿಸಿಕೊಂಡು ಸಕ್ಕರೆ ದ್ರಾವಣವನ್ನು ಸಿದ್ಧಮಾಡಿ. ಆದಷ್ಟು ಉರಿ ಕಡಿಮೆಯಲ್ಲಿರಲಿ ನಂತರ ಉರಿಯನ್ನು ಜಾಸ್ತಿಮಾಡುತ್ತಾ ದ್ರಾವಣವನ್ನು ದಪ್ಪಗಾಗಿಸಿ
3. ಜಲೇಬಿ ಬಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿಕೊಳ್ಳಿ, ಮೂಲೆಗಳನ್ನು ಮಡಚಿ ಗಂಟುಕಟ್ಟಿಕೊಳ್ಳಿ
4. ಎಣ್ಣೆ/ತುಪ್ಪದಲ್ಲಿ ವೃತ್ತಾಕಾರದ ಜಿಲೇಬಿಗಳನ್ನು ತಯಾರಿಸಿ, ಇದು ಚಿನ್ನದ ಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ
5. ನಂತರ ಅದನ್ನು ಸಕ್ಕರೆ ದ್ರಾವಣದಲ್ಲಿ 2-3 ನಿಮಿಷಗಳ ಕಾಲ ಅದ್ದಿ ತೆಗೆಯಿರಿ. ಸಕ್ಕರೆ ದ್ರಾವಣದಿಂದ ಅದನ್ನು ಹೊರತೆಗೆದು ತಟ್ಟೆಯಲ್ಲಿರಿಸಿ.
ನಂತರ ರಾಬ್ರಿ ಅಥವಾ ಪಿಸ್ತಾದಿಂದ ಜಿಲೇಬಿಯನ್ನು ಅಲಂಕರಿಸಿ.
English summary

Navratri Special: Jalebi Sweet Recipe

Jalebis are always a favourite dessert to many of us. Well, why not, as it can be prepared quickly, and not to mention that lip-smacking taste. Also, we give you another reason as to why, just why, you should prepare this dessert. And that is – Navratri! Yes, we have just another few days to celebrate the most colourful festival, Navratri. The festival of Navratri is celebrated for 9 days and each day is dedicated to a form of goddess.
X
Desktop Bottom Promotion