For Quick Alerts
ALLOW NOTIFICATIONS  
For Daily Alerts

ಅಮ್ಮನಿಗೆ ಸ್ಪೆಷಲ್ ಅಡುಗೆ ಮಾಡಲು ನೀವು ರೆಡಿನಾ?

|

ಮೇ. 12 ವಿಶ್ವ ಅಮ್ಮಂದಿರ ದಿನ. ಅಮ್ಮ ಎಂಬ ಪದವನ್ನು ಅನುಭವಿಸಲು ಮಾತ್ರ ಸಾಧ್ಯ, ವರ್ಣಿಸಲು ಅಸಾಧ್ಯ. ಅವಳ ಪ್ರೀತಿ, ತ್ಯಾಗಕ್ಕೆ ಸಮಾನ ಪದಗಳನ್ನು ಹುಡುಕುವುದಾದರೂ ಹೇಗೆ? ನಮ್ಮ ಹುಟ್ಟು ಹಬ್ಬದಂದು, ಹಬ್ಬ- ಹರಿ ದಿನದಂದು ತನ್ನ ಗಂಡ-ಮಕ್ಕಳಿಗಾಗಿ ಎಷ್ಟೆಲ್ಲಾ ಭಕ್ಷ್ಯ ಬೋಜನ ಮಾಡಿ ಹಾಕುತ್ತಾಳೆ.

For a change ಅಮ್ಮಂದಿರ ದಿನದಂದು ಅವಳು ಇದುವರೆಗೆ ಮಾಡಿರದ ಅಡುಗೆ ಮಾಡಿ "ನನ್ನ ಅಮ್ಮನಿಗಾಗಿ" ಎಂದು ಅವಳ ಮುಂದೆ ಹಿಡಿದು ನೋಡಿ ಅವಳು ತುಂಬಾ ಸಂತೋಷಪಡುತ್ತಾಳೆ. "ಅಮ್ಮನಿಗಾಗಿ ಏನಾದರೂ ವಿಶೇಷ ಅಡುಗೆ ಮಾಡಬೇಕೆಂಬ ಮನಸ್ಸಿದೆ, ಆದರೆ ಕಿಚನ್ ಕಡೆ ತಲೆ ಹಾಕಿದವಳಲ್ಲ/ನಲ್ಲ ಏನು ಮಾಡಲಿ" ಎಂಬ ಚಿಂತೆ ನಿಮಗಿದ್ದರೆ ಮೊದಲು ಚಿಂತೆ ಬಿಡಿ. ಏಕೆಂದರೆ ಇಲ್ಲಿ ನಾವು ಸವಿ ರುಚಿಯ ಗುಲಾಬಿ ಫಿರ್ನಿ ರೆಸಿಪಿ ನೀಡಿದ್ದೇವೆ. ಬಹಳ ಸರಳವಾದ ಈ ರೆಸಿಪಿಯನ್ನು ಅಡುಗೆ ಬರದವರೂ ಅಚ್ಚು ಕಟ್ಟಾಗಿ, ರುಚಿಕರವಾಗಿ ಮಾಡಬಹುದು. ಆದ್ದರಿಂದ ಅಮ್ಮನಿಗೆ ಸ್ಪೆಷಲ್ ಅಡುಗೆ ಮಾಡಲು ನೀವು ರೆಡಿನಾ?

Mother's Day Special

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ ಅರ್ಧ ಕಪ್
ಹಾಲು ಒಂದು ಲೀಟರ್ (41/2 ಕಪ್)
ಸಕ್ಕರೆ ಅರ್ಧ ಕಪ್
ರೋಸ್ ಸಿರಪ್ 4 ಚಮಚ
ಏಲಕ್ಕಿ 1
ಪಿಸ್ತಾ 1 ಚಮಚ
ನೀರು ಅರ್ಧ ಕಪ್
ಗುಲಾಬಿ ದಳಗಳು( ಅಲಂಕಾರಕ್ಕೆ)

ತಯಾರಿಸುವ ವಿಧಾನ:

* ಬಾಸುಮತಿ ಅಕ್ಕಿಯನ್ನು 1 ಗಂಟೆಗಳ ಕಾಲ ನೆನೆಹಾಕಿ, ನಂತರ ನುಣ್ಣಗೆ ರುಬ್ಬಿ. ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಹಾಲನ್ನು ಕಾಯಿಸಿ, ನಂತರ ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಸಕ್ಕರೆ ಸಂಪೂರ್ಣ ಕರಗುವವರೆಗೆ ಕಾಯಿಸಿ. ಹೀಗೆ ಕಾಯಿಸುವಾಗ ಹಾಲನ್ನು ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಬೇಕು.

* ಈಗ ರೋಸ್ ಸಿರಪ್ ಸೇರಿಸಿ ಮತ್ತೆ 2 ನಿಮಿಷ ಸೌಟ್ ನಿಂದ ತಿರುಗಿಸುತ್ತಾ ಹಾಲನ್ನು ಕಾಯಿಸಿ.

*ಈಗ ನುಣ್ಣನೆ ರುಬ್ಬಿದ ಅಕ್ಕಿ ಪೇಸ್ಟ್ ಅನ್ನು ಕುದಿಯುತ್ತಿರುವ ಹಾಲಿಗೆ ಹಾಕಿ, ಅಕ್ಕಿ ಹಿಟ್ಟು ಗಟ್ಟಿಯಾಗದಿರಲು ಚೆನ್ನಾಗಿ ಸೌಟ್ ನಿಂದ ತಿರುಗಿಸಿ. ಈಗ ಉರಿಯನ್ನು ಕಮ್ಮಿ ಮಾಡಿ ಮತ್ತೆ 10 ನಿಮಿಷ ಮಿಶ್ರಣವನ್ನು ಚೆನ್ನಾಗಿ ತಿರುಗಿಸಿ. ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಹೀಗೆ ಬೇಯಿಸುವಾಗ ಸೌಟ್ ನಿಂದ ತಿರುಗಿಸುತ್ತಾ ಇರಿ. ನಂತರ ಗ್ಯಾಸ್ ಆಫ್ ಮಾಡಿ ಏಲಕ್ಕಿ, ಪಿಸ್ತಾ ಹಾಕಿ ಚೆನ್ನಾಗಿ ತಿರುಗಿಸಿ. ನಂತರ ರೂಂನ ಉಷ್ಣತೆಗೆ ತಣ್ಣಗಾಗಲು ಇಡಿ. ಆಗಾಗ ಸವಟ್ ನಿಂದ ತಿರುಗಿಸುತ್ತಾ ಇರಿ.

* ಮಿಶ್ರಣ ತಣ್ಣಗಾದ ಮೇಲೆ ಅದನ್ನು ಒಂದು ಬಟ್ಟಲಿಗೆ ಹಾಕಿ ಒಂದು ಗಂಟೆ ಕಾಲ ಫ್ರಿಜ್ ನಲ್ಲಿಡಿ.

* ನಂತರ ಗುಲಾಬಿ ದಳಗಳಿಂದ ಅಲಂಕರಿಸಿದರೆ ಸವಿರುಚಿಯ ಗುಲಾಬಿ ಫಿರ್ನಿ ರೆಡಿ.

English summary

Mother's Day Special: Gulabi Firni | ವಿಶ್ವ ಅಮ್ಮಂದಿರ ದಿನಕ್ಕೆ ಸ್ಪೆಷಲ್- ಗುಲಾಬಿ ಫಿರ್ನಿ

Firni is actually a part of the Mughlai cuisine. Traditionally, firni is a plain, creamy dessert served with almonds and pistachios in earthenware pots. But we have added a little twist by adding rose syrup to further enhance the taste of this exotic Indian dessert recipe. 
X
Desktop Bottom Promotion