For Quick Alerts
ALLOW NOTIFICATIONS  
For Daily Alerts

ಮಿಕ್ಸ್ಡ್ ಫ್ರೂಟ್ ಜಾಮ್ ಮಾಡುವ ವಿಧಾನ

|

ಜಾಮ್ ಅನ್ನು ಅನೇಕ ರುಚಿಯಲ್ಲಿ ತಿನ್ನಬಹುದು. ಇದನ್ನು ಅಂಗಡಿಯಿಂದ ಕೊಳ್ಳುವ ಬದಲು ಫ್ರೆಶ್ ಜಾಮ್ ಅನ್ನು ಸುಲಭದಲ್ಲಿ ನೀವೇ ತಯಾರಿಸಬಹುದು.

ಜಾಮ್ ಮಕ್ಕಳಿಗೆ ಮಾತ್ರವಲ್ಲ, ಬ್ರೆಡ್ ಜೊತೆ ಹಾಕಿ ತಿನ್ನಲು ದೊಡ್ಡವರಿಗೂ ಇಷ್ಟವಾಗುವುದು. ಒಂದೇ ಬಗೆಯ ಹಣ್ಣಿನಿಂದ ಮಾತ್ರವಲ್ಲ 4-5 ಬಗೆಯ ಹಣ್ಣುಗಳನ್ನು ಜೊತೆಗೆ ಹಾಕಿ ಜಾಮ್ ತಯಾರಿಸಬಹುದು.

ಇಲ್ಲಿ ನಾವು ಮಿಕ್ಸ್ಡ್ ಫ್ರೂಟ್ ಜಾಮ್ ರೆಸಿಪಿ ನೀಡಿದ್ದೇವೆ ನೋಡಿ:

Mixed Fruit Jam Recipe

ಬೇಕಾಗುವ ಸಾಮಾಗ್ರಿಗಳು
ಸೇಬು 5-6
ಪಪ್ಪಾಯಿ 1
ಸ್ಟ್ರಾಬೆರಿ 4-5
ದ್ರಾಕ್ಷಿ 1 ಕೆಜಿ
ಬಾಳೆ ಹಣ್ಣು 3
ಪೈನಾಪಲ್ 1(ಚಿಕ್ಕ ಗಾತ್ರದ್ದು)
ಒಂದೂವರೆ ಚಮಚ ನಿಂಬೆರಸ
ಸಿಟ್ರಿಕ್ ಆಸಿಡ್ 6-7 ಚಮಚ (ಫುಡ್ ಮಾರ್ಕೆಟ್ ನಲ್ಲಿ ದೊರೆಯುತ್ತದೆ)
ಸಕ್ಕರೆ ಅರ್ಧ ಕೆಜಿ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಸೇಬು, ಪೈನಾಪಲ್ ಮತ್ತು ಪ್ಪಪ್ಆಯಿಯ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ.

* ಸ್ವಲ್ಪ ನೀರು ಹಾಕಿ ಸೇಬು, ಪೈನಾಪಲ್, ದ್ರಾಕ್ಷಿ, ಪೈನಾಪಲ್ ಬೇಯಿಸಿ.

* ನಂತರ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ.

* ಬೇಯಿಸಿ ಹಣ್ಣಿಗೆ, ನಿಂಬೆ ರಸ ಹಿಂಡಿ, ಬಾಳೆ ಹಣ್ಣು, ಸ್ಟ್ರಾಬೆರಿ ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ.

* ಈಗ ಒಂದು ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ, ನಂತರ ಸಕ್ಕರೆ, ಸ್ವಲ್ಪ ಉಪ್ಪು ಹಾಕಿ ಸೌಟ್ ನಿಂದ ತಿರುಗಿಸುತ್ತಾ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ. ನಂತರ ಸಿಟ್ರಿಕ್ ಆಸಿಡ್ ಸೇರಿಸಿ ಮತ್ತೂ ಎರಡು ನಿಮಿಷ ತಿರುಗಿಸಿ.

* ನಂತರ ಮಿಶ್ರಣವನ್ನು ಪಾತ್ರೆಗೆ ಹಾಕಿ. ಆಗ ಮಿಶ್ರಣ ಹರಿಯುವ ರೀತಿಯಲ್ಲಿ ಇರಬಾರದು, ಗಟ್ಟಿಯಾಗಿರಬೇಕು.
ನಂತರ ಗಾಳಿಯಾಡದ ಡಬ್ಬದಲ್ಲಿ ತುಂಬಿದರೆ ಮಿಕ್ಸ್ಡ್ ಫ್ರೂಟ್ ಜಾಮ್ ರೆಡಿ.

English summary

Mixed Fruit Jam Recipe | Variety Of Jam Recipe | ಮಿಶ್ರ ಹಣ್ಣುಗಳ ಜಾಮ್ ರೆಸಿಪಿ | ಅನೇಕ ಬಗೆಯ ಜಾಮ್ ರೆಸಿಪಿ

Mixed fruit jam is one of the most popular mixed fruit recipes. Use fresh fruits whole for this jam recipe. You can use fruits of your choice for this easy jam recipe.
X
Desktop Bottom Promotion