For Quick Alerts
ALLOW NOTIFICATIONS  
For Daily Alerts

ಮಲೈ ಚಮ್ ಚಮ್- ಸಿಹಿ ತಿಂಡಿ

|

ಮಲೈ ಚುಮ್ ಚುಮ್ ಸಿಹಿ ತಿಂಡಿ. ಇದನ್ನು ಚೀಸ್ ನಿಂದ ತಯಾರಿಸಲಾಗುವುದು. ಈ ಮಲೈ ಸ್ವೀಟ್ ಅನ್ನು ಬೇರೆ ಬೇರೆ ಬಣ್ಣದಲ್ಲಿ ತಯಾರಿಸಲಾಗುವುದು. ಇಲ್ಲಿ ನಾವು ಕೇಸರಿ ಹಾಕಿ ತಯಾರಿಸುವ ಕಂದು ಬಣ್ಣದ ಮಲೈ ತಿಂಡಿಯ ರೆಸಿಪಿ ನೀಡಲಾಗಿದೆ.

ಈ ಬೆಂಗಾಲಿ ತಿಂಡಿಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

Malai Chum Chum Sweet Dish

ಬೇಕಾಗುವ ಸಾಮಾಗ್ರಿಗಳು
ಪನ್ನೀರ್ 2 ಕಪ್
ಸಕ್ಕರೆ 2 ಕಪ್
ನೀರು 4-5 ಕಪ್
ಕೇಸರಿ ಅರ್ಧ ಚಮಚ

ಇತರ ಸಾಮಾಗ್ರಿಗಳು

ಹಾಲು 2-3 ಕಪ್
ಸಕ್ಕರೆ 2 ಕಪ್
ಏಲಕ್ಕಿ 1 ಚಮಚ

ಅಲಂಕಾರಕ್ಕೆ
ಗೋಡಂಬಿ ಸ್ವಲ್ಪ (ಚಿಕ್ಕದಾಗಿ ಕತ್ತರಿಸಿದ್ದು)
ಸ್ವಲ್ಪ ಕೇಸರಿ

ತಯಾರಿಸುವ ವಿಧಾನ

* ಒಂದು ಬಟ್ಟಲಿನಲ್ಲಿ ಪನ್ನೀರ್ ಹಾಕಿ ಅದು ಮೃದುವಾಗುವವರೆಗೆ ಕಲೆಸಿ. ಪನ್ನೀರ್ ಸ್ವಲ್ಪ ಗಟ್ಟಿಯಾಗಿದ್ದರೆಸ್ವಲ್ಪ ಬಿಸಿ ನೀರನ್ನು ಸೇರಿಸಿ ಕಲೆಸಿ.

* ಈಗ ಸಮ ಭಾಗಗಳಾಗಿ ತೆಗೆದುಕೊಂಡು ಅದರಿಂದ ಉಂಡೆ ಕಟ್ಟಿ. ನಂತರ ಅವುಗಳನ್ನು ಮೊಟ್ಟೆಯ ಆಕಾರದಲ್ಲಿ ಮಾಡಿ ತಟ್ಟೆಯಲ್ಲಿಡಿ.

* ನಂತರ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಬೇಕು. ಅದು ಕುದಿಯಲಾರಂಭಿಸಿದಾಗ ಸಕ್ಕರೆ ಮತ್ತು ಕೇಸರಿ ಹಾಕಿ ತಿರುಗಿಸಿ ಸಕ್ಕರೆ ಪಾಕ ಮಾಡಿ.

* ಈಗ ಮೊಟ್ಟೆಯ ಆಕಾರದಲ್ಲಿ ತಟ್ಟಿದ ಪನ್ನೀರ್ ಅನ್ನು ಸಕ್ಕರೆ ಪಾಕಕ್ಕೆ ಹಾಕಿ. ಆಗ ಪನ್ನೀರ್ ಸಕ್ಕರೆ ನೀರನ್ನು ಹೀರಿಕೊಂಡು ಸ್ವಲ್ಪ ದಪ್ಪಗಾಗುತ್ತದೆ. ಪನ್ನೀರ್ ಸ್ವಲ್ಪ ಸ್ಪಾಂಜ್ ರೀತಿಯಲ್ಲಿ ಆದಾಗ ಗ್ಯಾಸ್ ಆಫ್ ಮಾಡಿ.

* ಈಗ ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ. ಹಾಲನ್ನು ತಿರುಗಿಸುತ್ತಾ ಬಿಸಿ ಮಾಡಿ. ಹೀಗೆ ಮಾಡಿದರೆ ಹಾಲು ಪಾತ್ರೆಗೆ ಅಂಟುವುದಿಲ್ಲ. ಹಾಲು ಗಟ್ಟಿಯಾಗುವವರೆಗೆ ಕುದಿಸಿ. ನಂತರ ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ , ಕೇಸರಿ, ಬಾದಾಮಿ ಹಾಕಿ 2 ನಿಮಿಷ ಕುದಿಸಿ ಉರಿಯಿಂದ ತೆಗಯರಿ.

* ಈಗ ಮೊಟ್ಟೆಯಾಕಾರದ ಪನ್ನೀರ್ ಅನ್ನು ಕತ್ತರಿಸಿ, ಅದರೊಳಗೆ ಹಾಲಿನ ಮಿಶ್ರಣ ತುಂಬಿದರೆ ಮಲೈ ಚಮ್ ಚಮ್ ರೆಡಿ.

English summary

Malai Chum Chum Sweet Dish | Variety Of Sweets | ಮಲೈ ಚುಮ್ ಚುಮ್ ಸಿಹಿ ತಿಂಡಿ | ಅನೇಕ ಬಗೆಯ ಸಿಹಿ ತಿಂಡಿ

Chum chum is a spongy Indian sweet dish. The chum chum or chom chom is made with homemade cheese or paneer. Have you ever tried malai chum chum? The Bengali sweet dish is stuffed with malai (cream).
X
Desktop Bottom Promotion