For Quick Alerts
ALLOW NOTIFICATIONS  
For Daily Alerts

ಖೀರ್ ಸ್ವೀಟ್ ಕುರ್ಮಾ-ಮೊಘಲಾಯಿ ರೆಸಿಪಿ

|

ಖೀರ್ ಅಥವಾ ಶೀರ್ ಕುರ್ಮಾ ಮೊಘಲಾಯಿ ಶೈಲಿಯಲ್ಲಿ ತಯಾರಿಸುವ ಪಾಯಸವಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಶ್ಯಾವಿಗೆ ಪಾಯಸದಲ್ಲಿ ಖರ್ಜೂರ ಬಳಸುವುದಿಲ್ಲ, ಆದರೆ ಈ ಮೊಘಲಾಯಿ ಶೈಲಿಯ ಪಾಯಸದಲ್ಲಿ ಖರ್ಜೂರ ಪ್ರಮುಖವಾದ ಪದಾರ್ಥವಾಗಿದೆ.

ಹಬ್ಬ ಹರಿದಿನಗಳಲ್ಲಿ ಸುಲಭವಾಗಿ ಮಾಡಬಹುದಾದ ಸವಿರುಚಿಯ ಪಾಯಸ ಇದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

Kheer Payasa: Sweet Treat

ಬೇಕಾಗುವ ಸಾಮಾಗ್ರಿಗಳು
ಶ್ಯಾವಿಗೆ-200 ಗ್ರಾಂ
ಹಾಲು 2 ಲೀಟರ್
ಸಕ್ಕರೆ 2 ಚಮಚ
ಏಲಕ್ಕಿ 4
ಚಿಟಿಕೆಯಷ್ಟು ಕೇಸರಿ
ಒಣ ಖರ್ಜೂರ 5
ಬಾದಾಮಿ 5
ಪಿಸ್ತಾ 4
ತುಪ್ಪ 3 ಚಮಚ
ಕೊಬ್ಬರಿ (ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)

ತಯಾರಿಸುವ ವಿಧಾನ:

* ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದಲ್ಲಿ ಶ್ಯಾವಿಗೆ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ಬದಿಯಲ್ಲಿಡಿ.

* ಈಗ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕುದಿಸಿ, ನಂತರ ಹಾಲಿಗೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ, ಕೇಸರಿ ಸೇರಿಸಿ, ಹಾಲು ಸ್ವಲ್ಪ ಮಂದವಾಗುವವರೆಗೆ ಕುದಿಸಿ.

* ಈಗ ಸಕ್ಕರೆಯನ್ನು ಹಾಕಿ, ಸಕ್ಕರೆ ಕರಗುವವರೆಗೆ ಸೌಟ್ ನಿಂದ ತಿರುಗಿಸಿ. ನಂತರ ಶ್ಯಾವಿಗೆ ಹಾಕಿ 5-6 ನಿಮಿಷ ಕುದಿಸಿ ಉರಿಯಿಂದ ಇಳಿಸಿ.

* ಈಗ ಒಂದು ಚಮಚ ತುಪ್ಪವನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ, ಅದರಲ್ಲಿ ಬಾದಾಮಿ ಪಿಸ್ತಾ , ಖರ್ಜೂರ (ಖರ್ಜೂರವನ್ನು ಕತ್ತರಿಸಿ ಹಾಕಿ), ಒಣ ಕೊಬ್ಬರಿಯ ತುಂಡುಗಳನ್ನು ಹಾಕಿ 2-3 ನಿಮಿಷ ಹುರಿದು ಪಾಯಸಕ್ಕೆ ಹಾಕಿದರೆ ಸ್ವೀಟ್ ಕುರ್ಮಾ ಸವಿಯಲು ರೆಡಿ.

English summary

Kheer Payasa: Sweet Treat

Kheer Or Sheer khurma is a popular Mughlai dessert recipe prepared with vermicelli and dried dates. The milk is first boiled till it is reduced and then cooked with fried vermicelli. The flavour of cardamom is simply mouthwatering and this tempting recipe is sure to give you a lip-smacking treat.
X
Desktop Bottom Promotion