For Quick Alerts
ALLOW NOTIFICATIONS  
For Daily Alerts

ವಾವ್ ವಾವ್! ಕೇಸರ್ ಪಿಸ್ತಾ ಕುಲ್ಫಿ

By Neha Mathur
|

ತಂಪಾದ ಆಹಾರ ವಸ್ತುಗಳನ್ನು ತಿನ್ನಲು ಬೇಸಿಗೆ ಹೇಳಿ ಮಾಡಿಸಿದ ಕಾಲ. ಆದ್ದರಿಂದಲೇ ಏಸ್ ಕ್ರೀಮ್, ಕುಲ್ಫಿ ಇಂತಹ ವಸ್ತುಗಳಿಗೆ ಬೇಸಿಗೆಯಲ್ಲಿ ಡಿಮ್ಯಾಂಡ್ ಹೆಚ್ಚುವುದು. ಅದರಲ್ಲೂ ಕುಲ್ಫಿಯನ್ನು ಬೇಸಿಗೆಯಲ್ಲಿ ಮಾತ್ರವಲ್ಲ, ಮಳೆಗಾಲದಲ್ಲೂ ತಿನ್ನಲು ಇಷ್ಟಪಡುವ ಕುಲ್ಫಿ ಪ್ರಿಯರಿದ್ದಾರೆ. ಕುಲ್ಫಿ ತಿನ್ನುವ ಮಜವೇ ಅಂತದ್ದು...

ನೀವು ಕುಲ್ಫಿ ಪ್ರಿಯರಾಗಿದ್ದರೆ ಈ ಕುಲ್ಫಿಯನ್ನು ನೀವೇ ಏಕೆ ತಯಾರಿಸಬಾರದು. ಇದೇನು ತುಂಬಾ ಕಷ್ಟದ ಅಡುಗೆಯಲ್ಲ, ಮಾಡುವ ವಿಧಾನ ತಿಳಿದುಕೊಂಡರೆ ಸಾಕು, ಸುಲಭದಲ್ಲಿ ಮಾಡಬಹುದು, ಇಲ್ಲಿ ನಾನು ಕೇಸರಿ/ಕೇಸರ್ ಪಿಸ್ತಾ ಕುಲ್ಫಿಯ ರೆಸಿಪಿ ನೀಡಿದ್ದೇನೆ. ಈ ಕೆಳಗಿನ ಪದಾರ್ಥಗಳಿದ್ದರೆ ಸಾಕು, ನಿಮ್ಮ ಕುಲ್ಫಿ ರೆಡಿ...

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

ಕೆನೆ ಇರುವ ಹಾಲು 2 ಲೀಟರ್

ಸಕ್ಕರೆ

ಹಾಲನ್ನು ಕುದಿಸಿ ಅರ್ಧದಷ್ಟು ಮಾಡಿದ ಗೆಟ್ಟಿ ಹಾಲು 200ml (condensed milk)

ಚಿಟಕೆಯಷ್ಟು ಕೇಸರಿ

ಪಿಸ್ತಾ ಅರ್ಧ ಕಪ್ (ಚಿಕ್ಕದಾಗಿ ಕತ್ತರಿಸಿದ್ದು)

ಏಲಕ್ಕಿ ಪುಡಿ 1 ಚಮಚ

ರೋಸ್ ವಾಟರ್ 2 ಚಮಚ

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಸ್ವಲ್ಪ ದೊಡ್ಡ ಪಾತ್ರೆಗೆ ಹಾಲು ಹಾಕಿ ಉರಿ ಮೇಲೆ ಇಡಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಹಾಲಿಗೆ ಕಾಲು ಕೆಜಿಗಿಂತ ಸ್ವಲ್ಪ ಅಧಿಕ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಕೇಸರಿ ಹಾಕಿ ಉರಿ ಕಮ್ಮಿ ಮಾಡಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಕಡಿಮೆ ಉರಿಯಲ್ಲಿ ಹಾಲು ಅರ್ಧವಾಗುವಷ್ಟು ಹೊತ್ತು ಕಾಯಿಸಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಇದಕ್ಕೆ ಕಂಡೆನ್ಸ್ಡ್ ಹಾಲು, ಏಲಕ್ಕಿ, ಪಿಸ್ತಾ ಹಾಕಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಈಗ ಉರಿಯಿಂದ ಇಳಿಸಿ, ತಣ್ಣಗಾಗಲು ಬಿಡಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಈಗ ಮಂದವಾದ ಈ ಹಾಲನ್ನು ಕುಲ್ಫಿ ಮೌಲ್ಡ್ ನಲ್ಲಿ ತುಂಬಿ, ಅದಕ್ಕೆ ಒಂದು ಕಡ್ಡಿ ಹಾಕಿಟ್ಟು ಒಂದು ರಾತ್ರಿ ಫ್ರಿಜ್ ನಲ್ಲಿಡಿ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಮಾರನೇಯ ದಿನ ಕುಲ್ಫಿ ಮೌಲ್ಡ್ ಅನ್ನು ಒಮ್ಮೆ ಬಿಸಿ ನೀರಿನಲ್ಲಿ ಅದ್ದಿ ತೆಗೆದು, ನಂತರ ಕುಲ್ಫಿ ಕಡ್ಡಿಯನ್ನು ಎಳೆಯಿರಿ. ಇಷ್ಟು ಮಾಡಿ ಕುಲ್ಫಿ ರೆಡಿ.

English summary

Kesar Pista Kulfi Recipe | Variety Of Kulfi Recipe | ಕೇಸರ್ ಪಿಸ್ತಾ ಕುಲ್ಫಿ ರೆಸಿಪಿ | ಅನೇಕ ಬಗೆಯ ಕುಲ್ಫಿ ರೆಸಿಪಿ

Why not try this Indian dessert Kulfi recipe at home? The recipe is very simple and you need just a handful of ingredients to prepare kulfis.
X
Desktop Bottom Promotion