ಈ ಬಾರಿಯ ಗಣೇಶನ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಮಾಡುವ ತಯಾರಿಯಲ್ಲಿರುತ್ತೀರಾ? ಲಡ್ಡು, ಕರ್ಜಿಕಾಯಿ , ಚಕ್ಕಲಿ, ರವೆ ಉಂಡೆ ಇವುಗಳೆನೆಲ್ಲಾ ತಯಾರಿಸಲಾಗುವುದು. ಈ ಬಾರಿ ಅನೇಕ ಬಗೆಯ ಕರ್ಜಿಕಾಯಿ ಮಾಡುವ ವಿಧಾನ ತಿಳಿಯೋಣ. ಇಲ್ಲಿ ನಾವು ಎಳ್ಳಿನ ಕರ್ಜಿಕಾಯಿ ರೆಸಿಪಿ ನೀಡಲಾಗಿದೆ ನೋಡಿ.
ಬೇಕಾಗುವ ಪದಾರ್ಥಗಳು:
ಒಂದು ಕಪ್ ಮೈದಾಹಿಟ್ಟು
ಅರ್ಧ ಕಪ್ ಎಳ್ಳು
ಏಲಕ್ಕಿ
ಅರ್ಧ ಕಪ್ ಹುರಿಗಡಲೆ
ಕಾಲು ಕಪ್ ಗಸಗಸೆ
ಒಂದೂವರೆ ಕಪ್ ಕೊಬ್ಬರಿನಾಲ್ಕು ಅಚ್ಚು ಬೆಲ್ಲ ಅಥವಾ ಒಂದೂವರೆ ಕಪ್ ಸಕ್ಕರೆ
ಎಣ್ಣೆ
ತಯಾರಿಸುವ ವಿಧಾನ:
1. ಎಳ್ಳನ್ನು ಹುರಿದು ಕುಟ್ಟಬೇಕು (ಮಿಕ್ಸಿಯಲ್ಲೂ ಹಾಕಬಹುದು)
2. ನಂತರ ಎಳ್ಳಿನ ಪುಡಿಗೆ ಗಸಗಸೆ, ಕೊಬ್ಬರಿ ತುರಿ, ಏಲಕ್ಕಿಪುಡಿ, ಬೆಲ್ಲದ ಪುಡಿ ಹಾಕಿ ಬೆರೆಸಿಟ್ಟುಕೊಳ್ಳಬೇಕು.
3. ಮೈದಾಹಿಟ್ಟಿಗೆ ಅರ್ಧ ಸ್ಪೂನ್ ಉಪ್ಪು, 2 ಚಮಚ ತುಪ್ಪ ಮತ್ತು ನೀರು ಹಾಕಿ ಗಟ್ಟಿಯಾಗಿ ಕಲೆಸಬೇಕು.
4. ನಂತರ ಈ ಹಿಟ್ಟುನಿಂದ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಲಟ್ಟಿಸಿ, ಅದಕ್ಕೆ ಪುಡಿಯನ್ನು ಹಾಕಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಎಳ್ಳಿನ ಕರ್ಜಿಕಾಯಿ ರೆಡಿ.





















