ದೀಪಾವಳಿ ಹಬ್ಬಕ್ಕಾಗಿ ವಿಶೇಷ ಸಿಹಿ ತಿನಿಸು - ಕಾಜು ಬರ್ಫಿ

ಈ ದೀಪಾವಳಿಗೆ ಕಾಜೂ ಬರ್ಫಿಯನ್ನು ಬೇಕರಿಯಿಂದ ಕೊಂಡುಕೊಳ್ಳಬೇಕಾಗಿಲ್ಲ, ಅಷ್ಟೇ ರುಚಿಕರವಾದ ಬರ್ಫಿಯನ್ನು ನೀವೇ ತಯಾರಿಸಬಹುದು. ಇದನ್ನು ಮಾಡುವಾಗ ಸಕ್ಕರೆ ಪಾಕದ ಹದ ಸರಿಯಾಗಿದ್ದರೆ ಸಾಕು, ಸೂಪರ್ ರುಚಿಯ ಕಾಜು ಬರ್ಫಿ ರೆಡಿಯಾಗುವುದು.

By: vani nayak
Subscribe to Boldsky

ಕಾಜು ಬರ್ಫಿ ರೆಸಿಪಿ ಮಾಡಲು ಎಷ್ಟು ಸುಲಭವೆಂದರೆ, ಮಾರುಕಟ್ಟೆಯಲ್ಲಿ ದುಬಾರಿ ವೆಚ್ಚ ಕೊಟ್ಟು ಈ ಸಿಹಿತಿಂಡಿಯನ್ನು ಖರೀದಿಸಲು ಮನಸ್ಸು ಬರುವುದಿಲ್ಲ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಆದ್ದರಿಂದ ಈ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.

ಮೊದಲು ಬರ್ಫಿಯ ಹದ ಬರಲು ಸಕ್ಕರೆಯ ಪಾಕವನ್ನು ಸರಿಯಾಗಿ ಹದ ಮಾಡಿಕೊಳ್ಳಬೇಕು. ಸಕ್ಕರೆ ಪಾಕವು ತುಂಬಾ ಗಟ್ಟಿಯಾದರೆ, ಬರ್ಫಿಯು ಬಿರುಸಾಗಿಬಿಡುತ್ತದೆ. ಹಾಗೆಯೇ ಸಕ್ಕರೆಪಾಕವು ತೆಳ್ಳಗಾದರೆ ಬರ್ಫಿಯ ಮಿಶ್ರಣ ಬಂಧನವಿಲ್ಲದೆ ಸರಿಯಾದ ಹದ ಬರುವುದಿಲ್ಲ. ಸಕ್ಕರೆಯ ಒಂದೆಳೆ ಪಾಕವನ್ನು ಮಾಡಿಕೊಳ್ಳಬೇಕು. 

Kaju Ki Barfi
 

ನಾವು ಮಾಡಿಕೊಳ್ಳುವ ಸಕ್ಕರೆ ಪಾಕದ ಹದ ಸರಿಯಾಗಿದೆಯೇ ಇಲ್ಲವೇ ಎಂದು ಪರೀಕ್ಷಿಸಿಕೊಳ್ಳುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ. ಸಕ್ಕರೆ ಪಾಕವನ್ನು ಒಂದು ಚಮಚೆಯ ಹಿಂಬದಿಯಲ್ಲಿ ಹಾಕಿ. ಅದನ್ನು ನಿಮ್ಮ ಬೆರಳಿಂದ ಮುಟ್ಟಿ. ಆ ಬೆರಳಿಗೆ ಹೆಬ್ಬೆರಳನ್ನು ಜೋಡಿಸಿ ನಿಧಾನವಾಗಿ ಎರಡನ್ನೂ ಬೆರಳುಗಳನ್ನು ನಿಧಾನವಾಗಿ ಅಗಲಿಸಿ. ಒಂದೆಳೆಯಾಗಿ ಪಾಕದ ಹದ ಬರಬೇಕು. ಇಲ್ಲವಾದ್ದಲ್ಲಿ ಮತ್ತೊಮ್ಮೆ ಕುದಿಸಬೇಕು. ಈಗ ರೆಸಿಪಿ ಮಾಡುವ ಬಗೆಯನ್ನು ತಿಳಿದುಕೊಳ್ಳೋಣ..   ಸಿಹಿ ತಿನಿಸಿನ ಸರದಾರ-ತೆಂಗಿನಕಾಯಿ ಬರ್ಫಿ

ಬೇಕಾಗುವ ಸಾಮಗ್ರಿಗಳು
*ಗೋಡಂಬಿ - 1 ಕಪ್ (ರೂಮ್ ಟೆಂಪರೇಚರ್)
*ಕಾರ್ನ್ ಫ್ಲೋರ್ - 1 ಟೀ ಚಮಚ (ಉಪವಾಸಕ್ಕೆ ಮಾಡುತ್ತಿದ್ದರೆ, ಕಾರ್ನ ಫ್ಲೋರ್ ಅನ್ನು ಸೇರಿಸಬೇಡಿ)
*ಸಕ್ಕರೆ - ಅರ್ಧ ಕಪ್
*ನೀರು - ಕಾಲು ಕಪ್
*ತುಪ್ಪ - ತಟ್ಟೆಗೆ ಸವರಲು
ಸಿಲ್ವರ್ ಫಾಯಿಲ್ - ಅಲಂಕಾರಕ್ಕೆ (ನಿಮ್ಮ ಆಯ್ಕೆ)       ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಸಿಹಿ ಸಮೋಸ ರೆಸಿಪಿ

ವಿಧಾನ:
*ಗೋಡಂಬಿ ಮತ್ತು ಕಾರ್ನ್ ಫ್ಲೋರ್‌ ಅನ್ನು ಬ್ಲೆನ್ಡರ್ ನಲ್ಲಿ ಹಾಕಿ ನುಣ್ಣಗೆ ಮಾಡಿಕೊಳ್ಳಿ.
*ಒಂದು ನಾನ್ ಸ್ಟಿಕ್ ಪ್ಯಾನ್ ನಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ ಬಿಸಿ ಮಾಡಿ.
*ಒಂದೆಳೆ ಪಾಕ ಬರುವವರೆಗೂ ಕುದಿಸಿ.
*ಅದಕ್ಕೆ ನುಣ್ಣಗಾದ ಗೋಡಂಬಿ ಪುಡಿಯನ್ನು ಹಾಕಿರಿ.
*ಸಣ್ಣ ಉರಿಯಲ್ಲಿ 3-4 ನಿಮಿಷಗಳ ಕಾಲ ಬೇಯಿಸಿ. ಮಿಶ್ರಣವು ಪ್ಯಾನಿನ ತಳ ಬಿಡುವವರೆಗೂ ಬೇಯಿಸಬೇಕು.
*ದೀರ್ಘ ಕಾಲದವರೆಗು ಕೂಡ ಬೇಯಿಸಬಾರದು. ಒಲೆಯಿಂದ ಕೆಳಗಿಳಿಸಿ 5-6 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
*ಮಿಶ್ರಣವನ್ನು ಚೆನ್ನಾಗಿ ಮೃದುವಾಗುವವರೆಗೂ ನಾದಿ.
*ಒಂದು ತುಪ್ಪ ಸವರಿದ ತಟ್ಟೆಯಲ್ಲಿ ಮಿಶ್ರಣವನ್ನು ಹಾಕಿ.
*ನಂತರ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ. ನಿಮಗೆ ಬೇಕಾದ್ದಲ್ಲಿ ಸಿಲ್ವರ್ ಫಾಯಿಲ್ ಅನ್ನು ಅಲಂಕಾರಕ್ಕೆ ಬಳಸಬಹುದು.
*ಏರ್ ಟೈಟ್ ಕಂಟೇನರ್‌ನಲ್ಲಿ ಇಟ್ಟು ರೆಫ್ರಿಜರೇಟರ್ ನಲ್ಲಿ ಇಟ್ಟರೆ ಒಂದು ವಾರದವರೆಗೂ ಸವೆಯಬಹುದು.  ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ

Story first published: Thursday, October 27, 2016, 16:46 [IST]
English summary

Kaju Ki Barfi: Diwali Special Recipe must try

ಕಾಜು ಬರ್ಫಿ ರೆಸಿಪಿ ಮಾಡಲು ಎಷ್ಟು ಸುಲಭವೆಂದರೆ, ಮಾರುಕಟ್ಟೆಯಲ್ಲಿ ದುಬಾರಿ ವೆಚ್ಚ ಕೊಟ್ಟು ಈ ಸಿಹಿತಿಂಡಿಯನ್ನು ಖರೀದಿಸಲು ಮನಸ್ಸು ಬರುವುದಿಲ್ಲ. ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಆದ್ದರಿಂದ ಈ ರೆಸಿಪಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇವೆ ಮುಂದೆ ಓದಿ....
Please Wait while comments are loading...
Subscribe Newsletter