For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ ಹಬ್ಬವನ್ನು ಸಿಹಿಗೊಳಿಸುವ ಕೇಸರಿ ಬಾತ್ ರೆಸಿಪಿ!

|

ಇನ್ನೇನು ಕೃಷ್ಣ ಜನ್ಮಾಷ್ಟಮಿ ಬಂದೇ ಬಿಟ್ಟಿದೆ. ಅದೂ ಕೂಡ ಈ ಬಾರಿ ಜನ್ಮಾಷ್ಟಮಿ ವಾರಾಂತ್ಯವೇ ಬಂದು ಬಿಟ್ಟಿದ್ದು, ಅದರಲ್ಲೂ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಜನ್ಮಾಷ್ಟಮಿಯಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳಲು ಸಾಧ್ಯವಾಗಿದೆ. ಇನ್ನು ಪುಟ್ಟ ಮಕ್ಕಳಿಗೆ ಬಾಲ ಕೃಷ್ಣನ ವೇಷವನ್ನು ತೊಡಿಸಿ ಅಮ್ಮಂದಿರು ಸಂಭ್ರಮಪಟ್ಟರೆ ಪುಟಾಣಿಗಳಿಗಂತೂ, ತಾವೇ ಕೃಷ್ಣನಾಗಿ ಧರೆಗಿಳಿದಂತಹ ಅನುಭವ!

ಬೆಣ್ಣೆ ಕಳ್ಳ ಮುದ್ದು ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸಿ ನಲಿದಾಡುವ ಮುದ್ದು ಪುಟಾಣಿಗಳಿಗೆ ಅಂದು ಖುಷಿಯೋ, ಖುಷಿ. ಅಷ್ಟೇ ಏಕೆ ಅಂದು ಪ್ರದರ್ಶಿಸಲಾಗುವ ವಿವಿಧ ಆಟಗಳಾದ, ಮೊಸರು ಕುಡಿಕೆ ಸ್ಪರ್ಧೆ, ಹಗ್ಗಜಗ್ಗಾಟ, ರಗೋಲಿ ಹೀಗೆ ಜನ್ಮಾಷ್ಟಮಿಯ ಕಳೆಯನ್ನು ಹೆಚ್ಚಿಸುವ ಹಳ್ಳಿಯಾಟಗಳು ನಿಜಕ್ಕೂ ಮನರಂಜನೀಯ.

ಇದರ ಜೊತೆಗೆ ಮನೆಗೆ ಬರುವ ಅತಿಥಿಗಳನ್ನು ಸಂತೃಪ್ತಿಪಡಿಸುವುದು ನಮ್ಮ ಆದ್ಯಕರ್ತವ್ಯ ಅಲ್ಲವೇ? ಇವರ ಜೊತೆಗೆ ಹಬ್ಬದ ಕಳೆಯನ್ನು ಇನ್ನಷ್ಟು ಹೆಚ್ಚಿಸಲು, ಹಬ್ಬದ ವಾತಾವರಣವನ್ನು ಇನ್ನಷ್ಟು ಸಿಹಿಗೊಳಿಸಲು, ನೀವು ಬಯಸುವಿರಾದರೆ ನಿಮ್ಮೊಂದಿಗೆ ನಾವು ಕೈ ಜೋಡಿಸುತ್ತಿದ್ದೇವೆ. ಆಶ್ವರ್ಯವಾಯಿತೇ? ಹೌದು ಬೋಲ್ಡ್ ಸ್ಕೈ ಇಂದು ನಿಮಗೆ ಒಂದು ವಿಶೇಷ ಅಡುಗೆಯನ್ನು ತಯಾರಿಸಲು ತಿಳಿಸಿಕೊಡುತ್ತಿದ್ದೇವೆ. ಬನ್ನಿ ಜನ್ಮಾಷ್ಟಮಿ ಪ್ರಯುಕ್ತ ಬಾಯನ್ನು ಸಿಹಿಮಾಡುವ ಕೇಸರಿ ಬಾತ್ ರೆಸಿಪಿಯೊಂದಿಗೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದು ಈ ಸಿಹಿಯ ಕಮಾಲನ್ನು ನೀವು ಆಸ್ವಾದಿಸಿಯೇ ತೀರಬೇಕು.

Janmashtami Special: Mouthwatering Keasri Bhaat Recipe

Photo courtesy - Wikimedia Commons

ಇದರ ಜೊತೆಗೆ ಮನೆಗೆ ಬರುವ ಅತಿಥಿಗಳನ್ನು ಸಂತೃಪ್ತಿಪಡಿಸುವುದು ನಮ್ಮ ಆದ್ಯಕರ್ತವ್ಯ ಅಲ್ಲವೇ? ಹಾಗಾಗಿ ಇವರೊಂದಿಗೆ, ಹಬ್ಬದ ವಾತಾವರಣವನ್ನು ಇನ್ನಷ್ಟು ಸಿಹಿಗೊಳಿಸಲು, ನೀವು ಬಯಸುವಿರಾದರೆ, ನಿಮ್ಮೊಂದಿಗೆ ನಾವು ಕೈ ಜೋಡಿಸುತ್ತಿದ್ದೇವೆ. ಆಶ್ವರ್ಯವಾಯಿತೇ? ಹೌದು ಬೋಲ್ಡ್ ಸ್ಕೈ ಇಂದು ನಿಮಗೆ ಒಂದು ವಿಶೇಷ ಅಡುಗೆಯನ್ನು ತಯಾರಿಸಲು ತಿಳಿಸಿಕೊಡುತ್ತಿದ್ದೇವೆ. ಬನ್ನಿ ಜನ್ಮಾಷ್ಟಮಿ ಪ್ರಯುಕ್ತ ಬಾಯನ್ನು ಸಿಹಿಮಾಡುವ ಕೇಸರಿ ಬಾತ್ ರೆಸಿಪಿಯೊಂದಿಗೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದು ಈ ಸಿಹಿಯ ಕಮಾಲನ್ನು ನೀವು ಆಸ್ವಾದಿಸಿಯೇ ತೀರಬೇಕು.

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 20 ನಿಮಿಷಗಳು

ಬೇಕಾಗುವ ಪದಾರ್ಥಗಳು
*ಅಕ್ಕಿ - 1 ಕಪ್ (ನೆನೆಸಿದಂತಹುದು)
*ತುಪ್ಪ- ¼ ಕಪ್
*ಒಣ ದ್ರಾಕ್ಷಿ- 3 ಟೀ. ಚಮಚ
*ಗೋಡಂಬಿ - 2 ಟೀ. ಚಮಚ
*ಏಲಕ್ಕಿ ಪುಡಿ - ½ ಟೀ. ಚಮಚ
*ಸಕ್ಕರೆ - ¾ ಕಪ್
*ಕೇಸರಿ - ನಾಲ್ಕೈದು ಎಳೆ ಅಲಂಕಾರಕ್ಕಾಗಿ
*ನೀರು - 1 ಕಪ್

ತಯಾರಿಸುವ ವಿಧಾನ
*ಒಂದು ತಳ ಆಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಕಾಯಿಸಿ. ಇನ್ನು ಒಣ ದ್ರಾಕ್ಷಿಯನ್ನು ಹಾಕಿ ಹುರಿದುಕೊಳ್ಳಿ. ಇದು ಮುಗಿದ ಮೇಲೆ ಅದನ್ನು ತೆಗೆದು, ಗೋಡಂಬಿಯನ್ನು ಹಾಕಿ ಹುರಿದುಕೊಳ್ಳಿ. ಅವುಗಳು ಕಂದು ಬಣ್ಣಕ್ಕೆ ತಿರುಗುವವರೆಗೂ ಉರಿದುಕೊಳ್ಳಿ.
*ಇದು ಮುಗಿದ ಮೇಲೆ, ಬಾಣಲೆಯಿಂದ ಹೊರ ತೆಗೆಯಿರಿ. ಅದೇ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಮತ್ತೆ ಹಾಕಿ ಮತ್ತು ಅದರ ಮೇಲೆ ಅಕ್ಕಿಯನ್ನು ಹಾಕಿ. ಅಕ್ಕಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಇದರ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ. ಇನ್ನೂ ಸ್ವಲ್ಪ ಸಮಯ ಇದನ್ನು ಹುರಿದುಕೊಳ್ಳಿ. ಜೊತೆಗೆ ಒಂದು ಚೂರು ಕೇಸರಿ ಎಳೆಗಳನ್ನು ಅದಕ್ಕೆ ಹಾಕಿ.
*ಈಗ ಇದಕ್ಕೆ ನೀರನ್ನು ಹಾಕಿ, ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಬೇಯಲು ಬಿಡಿ. ನೀರೆಲ್ಲ ಹಿಂಗುವವರೆಗೆ ಕಾಯಿರಿ. ಈಗ ಇದಕ್ಕೆ ಸಕ್ಕರೆ ಮತ್ತು ನೀರನ್ನು ಹಾಕಿ. ಸಕ್ಕರೆಯು ಅನ್ನದ ಜೊತೆಗೆ ಕರಗಲು ಬಿಡಿ. ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಈಗ ಅಕ್ಕಿ ಕೇಸರಿ ಬಾತ್ ಮೇಲೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ.

ಸಲಹೆ
ಅನ್ನ ಬೇಯುವಾಗ ಅಥವಾ ಬೇಯುವ ಮುನ್ನ ಸಕ್ಕರೆಯನ್ನು ಹಾಕಬೇಡಿ. ಏಕೆಂದರೆ ಇದರಿಂದ ಸಕ್ಕರೆಯು ಅನ್ನವನ್ನು ಬೇಯಲು ಅಡ್ಡಿ ಮಾಡುತ್ತದೆ. ಹಾಗಾಗಿ ಅನ್ನ ಆದ ನಂತರ ಸಕ್ಕರೆ ಹಾಕಿ

English summary

Janmashtami Special: Mouthwatering Keasri Bhaat Recipe

Janmashtami, the birthday of Lord Krishna is celebrated with great devotion and enthusiasm in India in the month of July or August. This year Janmashtami or Lord Krishna's birthday is came weekend. So this is the time to celebrate all expecially kids, If you are tired of making the same old recipes every year, then we have some great ideas for you. So in this ospicious You can try this easy Rice Kesari Bhaat Recipe for this Janmashtami.
Story first published: Friday, September 4, 2015, 18:08 [IST]
X
Desktop Bottom Promotion