For Quick Alerts
ALLOW NOTIFICATIONS  
For Daily Alerts

ಜನ್ಮಾಷ್ಟಮಿ ವಿಶೇಷ: ಬಾದಾಮಿ ಹಲ್ವಾ, ಪ್ರಯತ್ನಿಸಿ ನೋಡಿ

|

ಪ್ರತಿ ವರ್ಷ ಆಗಸ್ಟ್- ಸೆಪ್ಟೆಂಬರ್ ತಿಂಗಳು ಹಬ್ಬಗಳ ಸಂಭ್ರಮಕ್ಕೆ ಬರವಿಲ್ಲದ ತಿಂಗಳು ಅಂತಾನೆ ಹೇಳಬಹುದು, ಏಕೆಂದರೆ ಈ ಮಾಸದಲ್ಲಿ ಹಬ್ಬಗಳು, ಸಾಲು, ಸಾಲಾಗಿ ಒಂದರ ಹಿಂದೆ ಒಂದರಂತೆ ಧಾವಿಸುತ್ತಲೇ ಇರುತ್ತದೆ. ಇನ್ನೇನು ಕೃಷ್ಣನ ಹುಟ್ಟುಹಬ್ಬ ಜನ್ಮಾಷ್ಟಮಿಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಭಾರತೀಯರಿಗಂತೂ ಈ ಹಬ್ಬ ಹೆಚ್ಚು ಉತ್ಸಾಹದ ಪ್ರತೀಕದಂತೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಜನ್ಮಾಷ್ಟಮಿಯಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಇನ್ನು ಪುಟ್ಟ ಮಕ್ಕಳಿಗೆ ಬಾಲ ಕೃಷ್ಣನ ವೇಷವನ್ನು ತೊಡಿಸಿ ಅಮ್ಮಂದಿರು ಸಂಭ್ರಮಪಟ್ಟರೆ ಪುಟ್ಟ ಮಕ್ಕಳಿಗಂತೂ ತಾವೇ ಕೃಷ್ಣನಾಗಿ ಧರೆಗಿಳಿದಂತಹ ಅನುಭವ. ಬೆಣ್ಣೆ ಕಳ್ಳ ಮುದ್ದು ಕೃಷ್ಣನ ಬಾಲ ಲೀಲೆಗಳನ್ನು ಪ್ರದರ್ಶಿಸಿ ನಲಿದಾಡುವ ಮುದ್ದು ಪುಟಾಣಿಗಳಿಗೆ ಅಂದು ಸಡಗರ ಮೇರೆ ಮೀರಿರುತ್ತದೆ. ವಿವಿಧ ಸ್ಪರ್ಧೆಗಳು, ಆಟಗಳನ್ನು, ಮೊಸರು ಕುಡಿಕೆ ಸ್ಪರ್ಧೆ ಹೀಗೆ ಜನ್ಮಾಷ್ಟಮಿಯ ಕಳೆಯನ್ನು ಹೆಚ್ಚಿಸುವ ಹಳ್ಳಿಯಾಟಗಳು ನಿಜಕ್ಕೂ ಮನರಂಜನೀಯ.

ಇನ್ನು ಹಬ್ಬದ ಸವಿಯನ್ನು ಸವಿಯಲು ರುಚಿಕರವಾದ ತಿನಿಸುಗಳು ಬೇಕೇ ಬೇಕು ಅಲ್ಲವೇ?. ಜನ್ಮಾಷ್ಟಮಿ ಪ್ರಯುಕ್ತ ಬಾಯನ್ನು ಸಿಹಿಮಾಡುವ ಬಾದಾಮಿ ಹಲ್ವಾ ರೆಸಿಪಿಯೊಂದಿಗೆ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದು ಈ ಹಲ್ವಾದ ಕಮಾಲನ್ನು ನೀವು ಆಸ್ವಾದಿಸಿಯೇ ತೀರಬೇಕು.

Janmashtami Special: Badam halwa recipe

ಪ್ರಮಾಣ: 2
*ಸಿದ್ಧತಾ ಸಮಯ: 30 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 45 ನಿಮಿಷಗಳು

ಸಾಮಾಗ್ರಿಗಳು
1.ಬಾದಾಮಿ - 1/2 ಕಪ್ (ರಾತ್ರಿ ನೆನೆಸಿಟ್ಟು ರುಬ್ಬಿರುವಂಥದ್ದು)
2.ಸಕ್ಕರೆ - 1/2 ಕಪ್ ಅಥವಾ 3/4 ಕಪ್ (ನಿಮ್ಮ ರುಚಿಯನ್ನು ಆಧರಿಸಿ)
3.ಹಾಲು - 1 ಕಪ್
4.ತುಪ್ಪ - 1/2 ಕಪ್
5.ಕೇಸರಿ - ಕೆಲವು ಎಸಳು (ಹಾಲಿನಲ್ಲಿ ನೆನೆಸಿರುವಂಥದ್ದು)

ಮಾಡುವ ವಿಧಾನ
* ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಕರಗಿಸಿಕೊಳ್ಳಿ ಹಾಗೂ ಇದನ್ನು ಪಾತ್ರೆಯ ಸುತ್ತಲೂ ಹರಡಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಹಲ್ವಾ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ.
* ಇದೇ ಪಾತ್ರಯಲ್ಲಿ 1/4 ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ನಂತರ ಉರಿಯನ್ನು ನಿಲ್ಲಿಸಿ, ಇದಕ್ಕೆ ಸಕ್ಕರೆಯನ್ನು ಹಾಕಿ ಮತ್ತು ಸಕ್ಕರೆ ಕರಗುವವರೆಗೆ ಇದನ್ನು ಸಮಮಿಶ್ರಣ ಮಾಡಿಕೊಳ್ಳಿ.
* ಇದೀಗ ಬಾದಾಮಿ ಪೇಸ್ಟ್ ಅನ್ನು ಸೇರಿಸಿಕೊಳ್ಳಿ, ಉಳಿದ ಹಾಲಿಗೆ ಕೇಸರಿಯನ್ನು ಹಾಕಿ ಮತ್ತು ಮಧ್ಯಮ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಇದು ದಪ್ಪನಾಗುತ್ತಿದ್ದಂತೆ ಪಾತ್ರೆಯ ಬದಿ ಒಣಗುತ್ತದೆ, ಎಲ್ಲಾ ತುಪ್ಪವನ್ನು ಇದಕ್ಕೆ ಹಾಕಿ ಮತ್ತು 10 ನಿಮಿಷ ಇದನ್ನು ಬೇಯಿಸಿಕೊಳ್ಳಿ ಸಣ್ಣ ಉರಿಯಲ್ಲಿ ಇದನ್ನು ಚೆನ್ನಾಗಿ ಕಲಸುತ್ತಿರಿ.
* ಹಲ್ವಾವು ತುಪ್ಪವನ್ನು ಚೆನ್ನಾಗಿ ಹೀರುತ್ತಿರುವಂತೆ ಪಾತ್ರೆಯ ಬದಿಯಲ್ಲಿ ಗಟ್ಟಿಯಾಗಿ ಅಂಟಿಕೊಂಡಿರುವಂತಹ ಪಾಕ ಬಿಡುತ್ತದೆ. ಇದೀಗ ಉರಿಯನ್ನು ನಿಲ್ಲಿಸಿ. ಉಳಿದ ತುಪ್ಪವನ್ನು ಇದಕ್ಕೆ ಸೇರಿಸಿ ಮತ್ತು ಹಲ್ವಾವನ್ನು ಮೆತ್ತಗಾಗಿಸಲು ಚೆನ್ನಾಗಿ ಕಲಸಿ. ಹಲ್ವಾ ತಣ್ಣಗಾಗುತ್ತಿರುವಂತೆ ಸುಂದರವಾಗಿ ಪಾತ್ರೆಯಲ್ಲಿ ಮೂಡಿಬರುತ್ತದೆ.
ಈ ಬಾದಾಮಿ ಹಲ್ವಾವನ್ನು ನೀವು ತಂಪಾಗಿ ಅಥವಾ ಕೊಠಡಿಯ ಉಷ್ಣಾಂಶಕ್ಕೆ ಹೊಂದಿರುವಾಗ ಕೂಡ ಬಡಿಸಬಹುದು. ಜನ್ಮಾಷ್ಟಮಿಯ ವಿಶೇಷ ಖಾದ್ಯವಾಗಿರುವ ಬಾದಾಮಿ ಹಲ್ವಾವನ್ನು ಶ್ರೀಕೃಷ್ಣ ದೇವರಿಗೆ ಪ್ರಸಾದ ರೂಪದಲ್ಲಿ ಕೂಡ ನಿಮಗೆ ಅರ್ಪಿಸಬಹುದು.

English summary

Janmashtami Special: Badam halwa recipe

Janmashtami or Lord Krishna's birthday is just round the corner. If you are tired of making the same old recipes every year, then we have some great ideas for you. So in this ospicious You can try this easy badammi halwa recipe for this Janmashtami.
Story first published: Thursday, September 3, 2015, 19:41 [IST]
X
Desktop Bottom Promotion