ಸಿಹಿ ಸಿಹಿಯಾದ 'ಉಣ್ಣಿಯಪ್ಪಮ್' ಆಹಾ ಬೊಂಬಾಟ್ ರುಚಿ!

By: Jaya Subramanya
Subscribe to Boldsky

ಓಣಂ ಹಬ್ಬ ಆರಂಭವಾಗಿಬಿಟ್ಟಿದೆ. ಕೇರಳದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಹಬ್ಬ ತನ್ನ ವಿಶೇಷತೆಗಳಿಂದ ಹೆಚ್ಚು
ಕೌತುಕಮಯವಾಗಿದೆ. ಹಬ್ಬ ಯಾವುದೇ ಆಗಿದ್ದರೂ ಸಿಹಿ ಅಲ್ಲಿ ಪ್ರಧಾನವಾಗಿರುತ್ತದೆ. ಓಣಂಗೆ ಖಾದ್ಯಗಳನ್ನು
ಸಿದ್ಧಮಾಡುವುದು ಹೆಚ್ಚು ಪ್ರಧಾನವಾಗಿರುತ್ತದೆ.

ಬಗೆ ಬಗೆಯ ಸಿಹಿಯನ್ನು ಖಾರದ ಖಾದ್ಯಗಳೊಂದಿಗೆ ಗೃಹಿಣಿಯರು ತಯಾರಿಸುತ್ತಾರೆ. 13 ರಿಂದ 14 ಖಾದ್ಯಗಳು ಓಣಂಗೆ ಪ್ರಧಾನವಾಗಿರುತ್ತದೆ. ಓಣಂ ಹಬ್ಬದ ಸ್ಪೆಷಲ್: ಘಮ್ಮೆನ್ನುವ ಹಾಲಿನ ಪಾಯಸ   

ಅಂತಹದ್ದರಲ್ಲಿ ಉಣ್ಣಿಯಪ್ಪಮ್ ಕೂಡ ಒಂದು. ನಿಮ್ಮ ಮನೆಯಲ್ಲೂ ಈ ಸಿಹಿಯನ್ನು ತಯಾರಿಸಿ ಓಣಂ ಹಬ್ಬವನ್ನು
ಕೊಂಡಾಡಬಹುದಾಗಿದೆ. ಹಾಗಿದ್ದರೆ ಸಾಂಪ್ರದಾಯಿಕವಾಗಿ ತಯಾರಿಸಬಹುದಾದ ಉಣ್ಣಿಯಪ್ಪಮ್‎ನ ರೆಸಿಪಿ ವಿಧಾನವನ್ನು ಇಲ್ಲಿ ನೀಡುತ್ತಿದ್ದು ಸರಳವಾಗಿ ಇದನ್ನು ತಯಾರಿಸಿಕೊಳ್ಳಬಹುದಾಗಿದೆ.

Unniyapam
 

 ಪ್ರಮಾಣ - 10
*ಸಿದ್ಧತಾ ಸಮಯ - 3 ರಿಂದ 4 ಗಂಟೆಗಳು
*ಅಡುಗೆಗೆ ಬೇಕಾದ ಸಮಯ - 30 ರಿಂದ 45 ನಿಮಿಷಗಳು

ಸಾಮಾಗ್ರಿಗಳು
*ಅಕ್ಕಿ - 2 ಕಪ್
*ಹಣ್ಣಾದ ಬಾಳೆಹಣ್ಣು - 3
*ಬೆಲ್ಲ - 1 ಕಪ್
*ತೆಂಗಿನ ತುರಿ - 2 ಚಮಚ (ತುರಿದದ್ದು)
*ಕಪ್ಪು ಎಳ್ಳು - 1/4 ಚಮಚ
*ನೀರು - 1 ಕಪ್
*ಏಲಕ್ಕಿ ಹುಡಿ - 3/4 ಕಪ್
*ಉಪ್ಪು - ಚಿಟಿಕೆಯಷ್ಟು
*ಒಣ ಶುಂಠಿ ಪುಡಿ - 1/4 ಚಮಚ
ಬೇಕಿಂಗ್ ಸೋಡಾ - 1/4 ಚಮಚ
ಹುರಿಯಲು ತುಪ್ಪ

ಮಾಡುವ ವಿಧಾನ
1. ರಾತ್ರಿ ಪೂರ್ತಿ ಅಕ್ಕಿಯನ್ನು ನೆನೆಸಿಡಿ, 6 ಗಂಟೆಗಳಷ್ಟು ಕಾಲ ಅಕ್ಕಿ ನೆನೆಯಲಿ.
2.ಮರುದಿನ ಬೆಳಗ್ಗೆ, ನೀರನ್ನು ಬಸಿದು ಅಕ್ಕಿಯನ್ನು ಕಡೆದು ಹಿಟ್ಟು ಮಾಡಿಟ್ಟುಕೊಳ್ಳಿ. ತುಂಬಾ ಮೃದುವಾಗಿ ಇದನ್ನು
ಸಿದ್ಧಪಡಿಸದಿರಿ.
3. ಇನ್ನು ಇದನ್ನು ಪಕ್ಕದಲ್ಲಿರಿಸಿ
4. ಬಾಳೆಹಣ್ಣನ್ನು ಸುಲಿದು ಇದನ್ನು ಮೃದು ಪೇಸ್ಟ್‎ನಂತೆ ಸಿದ್ಧಪಡಿಸಿ ಇದನ್ನು ಮಿಕ್ಸಿಂಗ್ ಬೌಲ್‎ಗೆ ಹಾಕಿ
5. ಈಗ ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಿ
6. ಬೆಲ್ಲದ ಹಿಟ್ಟಿನಲ್ಲಿ ಗಂಟು ಬಾರದಂತೆ ಇದನ್ನು ಕರಗಿಸಿಕೊಳ್ಳಿ
7. ಇದನ್ನು ತಣ್ಣಗಾಗಿಸಿ ಮತ್ತು ಬಾಳೆಹಣ್ಣಿನ ಮಿಶ್ರಣಕ್ಕೆ ಬೆರೆಸಿಕೊಳ್ಳಿ
8. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ತೆಳ್ಳನೆಯ ಹಿಟ್ಟನ್ನು ಸಿದ್ಧಪಡಿಸಿ
9. ಈಗ, ಅಕ್ಕಿ ಹಿಟ್ಟನ್ನು ಸೇರಿಸಿ, ಇದಕ್ಕೆ ಏಲಕ್ಕಿ ಹುಡಿ, ಒಣ ಶುಂಠಿ ಹುಡಿ, ಕಾಳುಮೆಣಸಿನ ಹುಡಿ, ಉಪ್ಪು ಮತ್ತು
ಬೇಕಿಂಗ್ ಸೋಡಾವನ್ನು ಸೇರಿಸಿ ನಂತರ ಬಾಳೆಹಣ್ಣು ಮಿಶ್ರಣವನ್ನು ಬೆರೆಸಿಕೊಳ್ಳಿ ಚೆನ್ನಾಗಿ ಹಿಟ್ಟನ್ನು ಕರಗಿಸಿಕೊಳ್ಳಿ.
10. ನೀರನ್ನು ಸ್ವಲ್ಪ ಸ್ವಲ್ಪ ಸೇರಿಸಿ. ನಿಧಾನವಾಗಿ ಮಿಶ್ರಮಾಡಿ ಇದರಿಂದ ಹಿಟ್ಟು ಅರ್ಧ ದಪ್ಪಗಾಗಿ ಇರುತ್ತದೆ. ಇದನ್ನು
30-45 ನಿಮಿಷಗಳ ಕಾಲ ಹಾಗೆಯೇ ಬಿಡಿ
11. ಪ್ಯಾನ್ ಬಿಸಿ ಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ
12. ತುಪ್ಪದಲ್ಲಿ ತೆಂಗಿನ ಹೋಳನ್ನು ಹುರಿದುಕೊಳ್ಳಿ ಮತ್ತು ಹಿಟ್ಟಿಗೆ ಇದನ್ನು ಮಿಶ್ರಮಾಡಿ
13. ಉಣ್ಣಿಯಪ್ಪ ಸಿದ್ಧಪಡಿಸುವ ಕಡಾಯಿಯನ್ನು ಇದಕ್ಕಾಗಿ ಸಿದ್ಧಪಡಿಸಿಕೊಳ್ಳಿ
14. ಈಗ, ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಹಿಟ್ಟನ್ನು ಕಡಾಯಿಗೆ ಸುರಿಯಿರಿ.
15. ಇದು ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ, ಸ್ಪೂನ್ ಸಹಾಯದಿಂದ ಇದನ್ನು ತಿರುಗಿಸಿಕೊಳ್ಳಿ ಮತ್ತು ಇನ್ನೊಂದು
ಭಾಗವನ್ನು ಬೇಯಿಸಿಕೊಳ್ಳಿ.
16. ಎರಡೂ ಬದಿಯೂ ಉಣ್ಣಿಯಪ್ಪವು ಬೇಯುತ್ತಿರುವಂತೆ, ಕಿಚನ್ ಟವೆಲ್ ಬಳಸಿಕೊಂಡು ಇದನ್ನು ಹೊರಕ್ಕೆ
ತೆಗೆಯಿರಿ.
ರುಚಿಯಾದ ಉಣ್ಣಿಯಪ್ಪವು ಸೇವಿಸಲು ಸಿದ್ಧವಾಗಿದೆ. ಇನ್ನಷ್ಟು ಸಿಹಿ ಬೇಕು ಎಂದಾದಲ್ಲಿ ಹಿಟ್ಟಿಗೆ ಸಕ್ಕರೆಯನ್ನು
ಸೇರಿಸಿಕೊಳ್ಳಿ. ಹಿಟ್ಟನ್ನು ತುಂಬಾ ನೀರು ಮಾಡಿಕೊಳ್ಳಬೇಡಿ. ನೀರಾಗಿದೆ ಎಂದಾದಲ್ಲಿ ಇದಕ್ಕೆ ಅಕ್ಕಿಹುಡಿಯನ್ನು
ಸೇರಿಸಿಕೊಳ್ಳಿ.
ಗೋಧಿ ಹುಡಿಯನ್ನು ಸೇರಿಸಿಕೊಂಡು ಇದನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಉಣ್ಣಿಯಪ್ಪಕ್ಕೆ ವೆಜಿಟೇಬಲ್ ಎಣ್ಣೆಯನ್ನು ಬಳಸಿ ಇದನ್ನು ಕಡಿಮೆ ಎಣ್ಣೆಯದ್ದಾಗಿ ಸಿದ್ಧಪಡಿಸಿಕೊಳ್ಳಬಹುದಾಗಿದೆ. ಆದರೆ ತುಪ್ಪವು ಸ್ವಾದವನ್ನು ಇಮ್ಮಡಿಸುತ್ತದೆ.

Story first published: Monday, September 12, 2016, 11:33 [IST]
English summary

How to Prepare Unniyapam for Onam

Follow the traditional recipe unniyapam for Onam and try this at your house to make Onam special this year for your friends and family. Here is the traditional recipe of unniyapam for Onam, have a look.
Please Wait while comments are loading...
Subscribe Newsletter