For Quick Alerts
ALLOW NOTIFICATIONS  
For Daily Alerts

ಈ ಬಾರಿ ಜನ್ಮಾಷ್ಟಮಿಗೆ 'ಸೋರೆಕಾಯಿ ಬರ್ಫಿ' ರೆಸಿಪಿ ಮಾಡಿ!

By Jaya subramanya
|

ಪ್ರತೀ ವರ್ಷದಂತೆ ಈ ಬಾರಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ನಡೆಸುವ ಕಾಯಕಕ್ಕೆ ಎಲ್ಲಾ ಹೆಂಗಳೆಯರು ಬದ್ಧರಾಗಿದ್ದಾರೆ. ತಮ್ಮ ಮಕ್ಕಳ ಒಳಿತಿಗಾಗಿ ಜನ್ಮಾಷ್ಟಮಿಯನ್ನು ಸಂಭ್ರಮಾಚರಣೆಯಿಂದ ನಡೆಸುವ ತಾಯಂದಿರುವ ತಮ್ಮ ಕಂದಮ್ಮಗಳಿಗೆ ಶ್ರೀ ಕೃಷ್ಣನ ವೇಷವನ್ನು ತೊಡಿಸಿ ಆನಂದವನ್ನು ಅನುಭವಿಸುತ್ತಾರೆ.

ಕೃಷ್ಣನಿಗೆ ಸಿಹಿಯೆಂದರೆ ಅಚ್ಚುಮೆಚ್ಚು. ಬೆಣ್ಣೆ ಕಳ್ಳ ಎಂಬ ಹಣೆಪಟ್ಟಿಯನ್ನೇ ಹೊತ್ತುಕೊಂಡು ತುಂಟಾಟಗಳನ್ನು ಮಾಡುವ ಶ್ರೀ ಕೃಷ್ಣನ ಜನ್ಮವಿಶೇಷತೆಗಳನ್ನು ಎಷ್ಟು ವರ್ಣಿಸಿದರೂ ಮುಗಿಯದೇ ಇರುವಂತಹದ್ದಾಗಿದೆ. ಕೃಷ್ಣ ಜನ್ಮಾಷ್ಟಮಿಗೆ 5 ಸ್ವೀಟ್ ರೆಸಿಪಿ

ಹಾಗಿದ್ದರೆ ಈ ಬಾರಿ ಜನ್ಮಾಷ್ಟಮಿಗೆ ಏನಾದರೂ ವಿಶೇಷವಾದ ಸಿಹಿಯನ್ನು ತಯಾರಿಸಲೇಬೇಕಲ್ಲವೇ? ಅದಕ್ಕೆಂದೇ ಇಂದಿನ ಲೇಖನದಲ್ಲಿ ಅತಿ ವಿಶೇಷವಾಗಿರುವ ಗಿಯಾ ಅಥವಾ ಸೋರೆಕಾಯಿ ಬರ್ಫಿಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ.

ಹೆಚ್ಚು ಕೊಬ್ಬಿಲ್ಲದ ತರಕಾರಿ ಎಂದೇ ಕರೆಯಿಸಿಕೊಂಡಿರುವ ಸೋರೆಕಾಯಿ ವಿಟಮಿನ್ ಸಿ ಮತ್ತು ಇತರ ನ್ಯೂಟ್ರೀಶಿಯಸ್ ಅಂಶಗಳನ್ನು ಒಳಗೊಂಡಿವೆ. ತುಪ್ಪ, ಹಾಲು, ಕೋವಾ ಬೆರೆಸಿ ಇನ್ನಷ್ಟು ರುಚಿಕರವಾಗಿ ಈ ಬರ್ಫಿಯನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

Ghiya Barfi Recipe For Janmashtami

ಪ್ರಮಾಣ - 4
ಸಿದ್ಧತಾ ಸಮಯ - 20 ನಿಮಿಷಗಳು ಜನ್ಮಾಷ್ಟಮಿಗೆ ಗರಿ ಗರಿ ಖಾರಾಸೇವ್ ಸ್ಪೆಷಲ್

ಸಾಮಾಗ್ರಿಗಳು
*ಸೋರೆಕಾಯಿ - 2 ಕಪ್ಸ್ (ತುರಿದದ್ದು)
*ತುಪ್ಪ - 1/4 ಕಪ್
*ಹಾಲು - 1 ಕಪ್
*ಕೋಯಾ - 1 1/2 ಕಪ್
*ಹಸಿರು ಏಲಕ್ಕಿ ಹುಡಿ - 1 ಚಮಚ
*ಲವಂಗ - 2
*ಸಕ್ಕರೆ - 2 ಕಪ್
*ಮಿಶ್ರ ಮಾಡಿದ ನಟ್ಸ್ - (ಬಾದಾಮಿ, ದ್ರಾಕ್ಷಿ, ಗೇರುಬೀಜ, ಆಕ್ರೋಡು, ನೆಲಗಡಲೆ) - 1/2 ಕಪ್ ಕತ್ತರಿಸುವಂತಹದ್ದು
*ತುರಿದ ತೆಂಗಿನ ಕಾಯಿ - 1/2 ಕಪ್
*ಸೂರ್ಯಕಾಂತಿ ಬೀಜ - 1 ಚಮಚ
*ಮೆಲನ್ ಬೀಜ - 1 ಚಮಚ ಕೃಷ್ಣ ಜನ್ಮಾಷ್ಟಮಿಗೆ ವಿಶೇಷ ಅಡುಗೆ

ಮಾಡುವ ವಿಧಾನ
1. ನೆಲಗಡಲೆ ಸಿಪ್ಪೆ ಸುಲಿದುಕೊಂಡು ಬೀಜವನ್ನು ಬಿಡಿಸಿ
2. ಇನ್ನು ಸೋರೆಕಾಯಿ ಚೆನ್ನಾಗಿ ತುರಿದುಕೊಳ್ಳಿ
3. ಪ್ಯಾನ್ ತೆಗೆದುಕೊಂಡು ತುಪ್ಪ ಕರಗಿಸಿಕೊಳ್ಳಿ. ಏಲಕ್ಕಿ ಮತ್ತು ಲವಂಗವನ್ನು ಇದಕ್ಕೆ ಹಾಕಿ ನಂತರ ತುರಿದ ಸೋರೆಕಾಯಿ ಮಿಶ್ರ ಮಾಡಿಕೊಳ್ಳಿ
4. ಸೋರೆಕಾಯಿಯಿಂದ ತುಪ್ಪ ಬೇರ್ಪಡುವವರೆಗೆ ಬೇಯಿಸಿ
5. ಇನ್ನು ತೆಂಗಿನ ತುರಿಯನ್ನು ಬೆರೆಸಿಕೊಂಡು ಸ್ವಲ್ಪ ಸೆಕೆಂಡ್ ಬೇಯಿಸಿಕೊಳ್ಳಿ
6. ಕುದಿಸಿದ ಹಾಲನ್ನು ಹಾಕಿ ಮತ್ತು ಸಕ್ಕರೆ ಬೆರೆಸಿಕೊಂಡು ಚೆನ್ನಾಗಿ ಎಲ್ಲವನ್ನೂ ಕಲಸಿಕೊಳ್ಳಿ
7. ಕೋಯಾವನ್ನು ಹಾಕಿ ಮತ್ತು ಕತ್ತರಿಸಿದ ನಟ್ಸ್ ಈಗ ಮಿಶ್ರ ಮಾಡಿಕೊಳ್ಳಿ. ಪ್ಯಾನ್‌ನಲ್ಲಿ ಚೆನ್ನಾಗಿ ಇದೆಲ್ಲವನ್ನೂ ಕಲಸಿಕೊಳ್ಳಿ.
8. ಈಗ ಚಪ್ಪಟೆ ಟ್ರೇಯನ್ನು ತೆಗೆದುಕೊಂಡು ತುಪ್ಪವನ್ನು ಸರಿಯಾಗಿ ಹಚ್ಚಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ಟ್ರೇಗೆ ಹಾಕಿ ಮತ್ತು ತಣ್ಣಗಾಗಲು ಬಿಡಿ.
9. ಬರ್ಫಿ ಆಕಾರದಲ್ಲಿ ಇದನ್ನು ಕತ್ತರಿಸಿಕೊಳ್ಳಿ ನಂತರ ಸೂರ್ಯಕಾಂತಿ ಬೀಜ, ಮೆಲನ್ ಬೀಜ ಮತ್ತು ನಟ್ಸ್‌ನಿಂದ ಅಲಂಕರಿಸಿ
10. ನಂತರ ಫ್ರಿಡ್ಜ್‌ನಲ್ಲಿರಿಸಿ ಇನ್ನಷ್ಟು ರುಚಿ ಬರಿಸಿಕೊಳ್ಳಿ. ಕೃಷ್ಣ ಜನ್ಮಾಷ್ಟಮಿಗೆ 6 ರೀತಿಯ ಸಿಹಿತಿಂಡಿ

ಜನ್ಮಾಷ್ಟಮಿಗಾಗಿ ವಿಶೇಷವಾಗಿ ಸರಳವಾಗಿ ತಯಾರಿಸಿಕೊಳ್ಳಬಹುದಾದ ಸೋರೆಕಾಯಿ ಬರ್ಫಿಯನ್ನು ಸಿದ್ಧಪಡಿಸಲು ಮರೆಯದಿರಿ. ಖಂಡಿತ ನಿಮ್ಮ ಮನೆಯ ಸದಸ್ಯರು ಈ ಸಿಹಿಯನ್ನು ಇಷ್ಟಪಡುತ್ತಾರೆ.

English summary

Ghiya Barfi Recipe For Janmashtami

Do you know how to make ghiya barfi recipe for Janmashtami? The recipe is very simple. If you want to make ghiya or lauki ka barfi for Krishna Janmashtami to surprise your family, you can try the easy recipe given below.
Story first published: Tuesday, August 23, 2016, 20:09 [IST]
X
Desktop Bottom Promotion