For Quick Alerts
ALLOW NOTIFICATIONS  
For Daily Alerts

ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

|

ಸಿದ್ಧಿವಿನಾಯಕ, ಮೋದಕ ಪ್ರಿಯ, ಗಜಮುಖ, ಲಂಬೋದರ ಹೀಗೆ ವಿವಿಧ ನಾಮಧೇಯಗಳಿಂದ ಪ್ರಸಿದ್ಧನಾಗಿರುವ ವಿಘ್ನ ವಿನಾಶಕ ಗಣಪತಿ ಹಬ್ಬಕ್ಕೆ ಇನ್ನೇನು ಬೆರಳೆಣಿಕೆಯ ದಿನಗಳು ಮಾತ್ರ. ವಿಘ್ನವನ್ನು ನಿವಾರಿಸುವ ವಿನಾಯಕನ ಚತುರ್ಥಿಯನ್ನು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಜೊತೆಗೆ ದೇವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಘಮ ಘಮ ಪರಿಮಳದ ಅಡುಗೆಗಳೂ, ಖಾದ್ಯ, ಸಿಹಿತಿನಿಸುಗಳೂ ತಯಾರಾಗುತ್ತವೆ.

ಭೋಜನವನ್ನು ಇಷ್ಟಪಡುವ ಗಣಪನಿಗೆ ಸಿಹಿ ಎಂದರೆ ಪಂಚಪ್ರಾಣವಂತೆ. ಅದರಲ್ಲೂ ಮೋದಕ ಲಾಡು ಇವುಗಳ ಮೇಲೆ ಒಂದು ಹಿಡಿ ಪ್ರೀತಿ ಜಾಸ್ತಿಯೇ. ಹಾಗಿದ್ದರೆ ಗಣಪನ ಪ್ರೀತಿಯನ್ನು ಆಶೀರ್ವಾದವನ್ನು ನಮ್ಮ ಓದುಗರೂ ಪಡೆಯಲಿ ಎಂಬ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ವಿಶೇಷ ಬೇಸನ್ ಲಾಡು ಪಾಕ ವಿಧಾನವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ.

Ganesh Chaturthi Spcl: Easy Recipe For Besan Laddoo

ಕಡಲೆ ಹಿಟ್ಟಿನಿಂದ ತಯಾರಾಗುವ ಈ ಲಾಡಿವ ಸವಿಯಂತೂ ಅಸದಳ. ತುಪ್ಪದ ಸುವಾಸನೆ, ಏಲಕ್ಕಿ ಗೋಡಂಬಿಯ ಘಮಲು ಲಾಡನ್ನು ಇನ್ನಷ್ಟು ಸ್ವಾದಿಷ್ಟ ಮತ್ತು ರುಚಿಕರವನ್ನಾಗಿಸುತ್ತದೆ. ಈ ಬಾರಿಯ ಗಣೇಶ ಚತುರ್ಥಿ ಈ ಬೇಸನ್ ಲಾಡು ರೆಸಿಪಿಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಈ ಲಾಡನ್ನು ತಯಾರಿಸಿ ಕೆಲವು ಸಮಯದವರೆಗೆ ಸಂಗ್ರಹಿಸಿ ಕೂಡ ಇಡಬಹುದು.

ಹೆಸರು ಬೇಳೆಯ ಮೋದಕ ರೆಸಿಪಿ

ಕೆಲವೇ ಸಮಯದಲ್ಲಿ ತಯಾರಿಸಬಹುದಾದ ಈ ಲಾಡು ನಿಮ್ಮ ಮನೆಮಂದಿಯ ಮೆಚ್ಚುಗೆಗೆ ಪಾತ್ರವಾಗುವುದಲ್ಲದೆ ಮನೆಗೆ ಬರುವ ಅತಿಥಿಗಳ ಮನವನ್ನೂ ಕದಿಯುವುದು ಖಂಡಿತ. ಇನ್ನೇಕೆ ತಡ, ಕೆಳಗೆ ನಾವು ನೀಡಿರುವ ಬೇಸನ್ ಲಾಡು ರೆಸಿಪಿಯ ಸರಳ ವಿಧಾನಗಳನ್ನು ತಿಳಿದುಕೊಳ್ಳಿ ಮತ್ತು ಚಕಚಕನೇ ಲಾಡು ಮಾಡಲು ಪ್ರಾರಂಭಿಸಿ.

ಪ್ರಮಾಣ: 4-5
ಸಿದ್ಧತಾ ಸಮಯ - 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು

ಸಾಮಾಗ್ರಿಗಳು
*ಕಡಲೆ ಹಿಟ್ಟು - 1 ಕಪ್
*ಪುಡಿ ಸಕ್ಕರೆ - 1/2 ಕಪ್
*ತುಪ್ಪ - 1/4 ಕಪ್ + 3 ಚಮಚ (ಕರಗಿಸಿದ್ದು)
*ಗೇರುಬೀಜ - ಮುಷ್ಟಿಯಷ್ಟು (ಕತ್ತರಿಸಿದ್ದು)
*ಏಲಕ್ಕಿ ಪುಡಿ - 1/2 ಚಮಚ

ಮಾಡುವ ವಿಧಾನ
1. ಕಡಲೆ ಹಿಟ್ಟನ್ನು ಹುರಿದುಕೊಂಡು ಅದನ್ನು ಪಕ್ಕದಲ್ಲಿಡಿ.
2. ಪಾತ್ರೆಯಲ್ಲಿ ಒಂದು ಚಮಚದಷ್ಟು ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಕತ್ತರಿಸಿದ ಗೇರುಬೀಜವನ್ನು ಹುರಿದುಕೊಳ್ಳಿ
3. ನಾನ್ ಸ್ಟಿಕ್ ಪಾತ್ರೆಯಲ್ಲಿ 1/4 ಚಮಚದಷ್ಟು ತುಪ್ಪವನ್ನು ಬಿಸಿ ಮಾಡಿಕೊಳ್ಳಿ ಮತ್ತು ಹುರಿದ ಕಡಲೆ ಹಿಟ್ಟನ್ನು ಇದಕ್ಕೆ ಸೇರಿಸಿ.
4. ಕಡಲೆ ಹಿಟ್ಟು ಚೆನ್ನಾಗಿ ಕಾದು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಹಿಟ್ಟನ್ನು ಹುರಿಯಿರಿ.
5. ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರ ಮಾಡಿಕೊಳ್ಳಿ.
6. ಇನ್ನು ಗ್ಯಾಸ್ ಆರಿಸಿ ಮತ್ತು ಹುಡಿ ಸಕ್ಕರೆಯನ್ನು ಸೇರಿಸಿಕೊಳ್ಳಿ, ಮತ್ತು ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
7. ತದನಂತರ ಇದಕ್ಕೆ ಹುರಿದ ಗೇರುಬೀಜವನ್ನು ಸೇರಿಸಿ ಮತ್ತು 2 ಚಮಚದಷ್ಟು ಕರಗಿಸಿದ ತುಪ್ಪವನ್ನು ಹಾಕಿ. ಚೆನ್ನಾಗಿ ಮಿಶ್ರ ಮಾಡಿಕೊಂಡ ನಂತರ ಇದನ್ನು ನಂತರ ಒಂದು ಪಾತ್ರೆಗೆ ವರ್ಗಾಯಿಸಿ.
8. ನಿಮ್ಮ ಕೈಗಳಿಗೆ ಸ್ವಲ್ಪ ತುಪ್ಪ ಹಚ್ಚಿಕೊಳ್ಳಿ ಮತ್ತು ಹಿಟ್ಟಿನಿಂದ ಲಾಡಿನ ಉಂಡೆಗಳನ್ನು ಕಟ್ಟಲು ಪ್ರಾರಂಭಿಸಿ.
9. ನಿಮ್ಮ ಲಾಡಿನ ಉಂಡೆ ನಿಂಬೆ ಹಣ್ಣಿನ ಆಕಾರದಲ್ಲಿರಲಿ.

ಬೇಸನ್ ಲಾಡು ಬಡಿಸಲು ಸಿದ್ಧವಾಗಿದೆ. ಗಾಳಿಯಾಡದ ಡಬ್ಬಗಳಲ್ಲಿ ಈ ಲಾಡುಗಳನ್ನು ಎರಡು ತಿಂಗಳವರೆಗೆ ನಿಮಗೆ ಜೋಪಾನ ಮಾಡಬಹುದು.

English summary

Ganesh Chaturthi Spcl: Easy Recipe For Besan Laddoo

Ganesh Chaturthi is only a week away and as we all know how fond our little Ganesha is about the laddoos. Lord Ganesha loves to eat modaks and laddoos and that is why on the day of Ganesh chaturthi, So, take a look at this easy recipe on how to make besan laddoo in about half an hour and give it a try on this Ganesh Chaturthi.
Story first published: Monday, August 25, 2014, 12:18 [IST]
X
Desktop Bottom Promotion