For Quick Alerts
ALLOW NOTIFICATIONS  
For Daily Alerts

ನಾಗರಪಂಚಮಿಗೆ ಸ್ಪೆಷಲ್ -ಎಳ್ಳುಂಡೆ

|

ನಾಗರ ಪಂಚಮಿಯ ವಿಶೇಷ ಅಡುಗೆಗಳಲ್ಲಿ ಎಳ್ಳುಂಡೆ ಕೂಡ ಒಂದು. ಆದ್ದರಿಂದ ಈ ನಾಗರ ಪಂಚಮಿಗೆ ಎಳ್ಳುಂಡೆಯ ರೆಸಿಪಿ ನೀಡುತ್ತಿದ್ದೇವೆ ನೋಡಿ.

ಎಳ್ಳುಂಡೆ ಮಾಡುವುದು ಬಲು ಸುಲಭ. ಬೆಲ್ಲ ಪಾಕದ ಹದ ತಿಳಿದರೆ ಸಾಕು ರುಚಿಕರವಾದ ಎಳ್ಳುಂಡೆಯನ್ನು ತಯಾರಿಸುವುದು ಕಷ್ಟದ ಕೆಲಸವೇನಲ್ಲ. ಅಲ್ಲದೆ ಎಳ್ಳುಂಡೆ ಮಾಡಿದರೆ ತುಂಬಾ ದಿನಗಳವರೆಗೆ ಇಟ್ಟುಕೊಂಡು ತಿನ್ನಬಹುದು. ನಾಗರ ಪಂಚಮಿಗೆ ಎಳ್ಳುಂಡೆ ಮಾಡಲು ರೆಡಿನಾ?

Ellunde Festival Recipe

ಬೇಕಾಗುವ ಸಾಮಾಗ್ರಿಗಳು
ಎಳ್ಳುಂಡೆ 2 ಕಪ್
ಬೆಲ್ಲ ಮುಕ್ಕಾಲು ಕಪ್
ತುಪ್ಪ

ತಯಾರಿಸುವ ವಿಧಾನ:

* ಎಳ್ಳನ್ನು ಪ್ಯಾನ್ ಹಾಕಿ ಅದು ಚಟಾಪಟಾ ಶಬ್ದ ಮಾಡುವವರೆಗೆ ಹುರಿದು, ನಂತರ ಅದನ್ನು ನೀರಿನಂಶವಿಲ್ಲದ ಒಂದು ಅಗಲವಾದ ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ.

* ಈಗ ಬೆಲ್ಲದ ಪಾಕವನ್ನು ತಯಾರಿಸಿ, ಪಾಕ ಗಟ್ಟಿಯಾಗಿರಲಿ(ಪಾಕ ಸರಿಯಾಗಿ ಬರದಿದ್ದರೆ ಎಳ್ಳುಂಡೆ ಸರಿಯಾಗಿ ಬರುವುದಿಲ್ಲ, ಆದ್ದರಿಂದ ಪಾಕ ಸರಿಯಾಗಿ ಇದೆಯೇ ಎಂದು ನೋಡಲು ಅರ್ಧ ಚಮಚ ಬೆಲ್ಲದ ಪಾಕವನ್ನು 1 ಲೋಟ ತಣ್ಣೀರಿಗೆ ಹಾಕಿ, ಬೆಲ್ಲ ಉಂಡೆ ಕಟ್ಟಿದರೆ ಪಾಕ ಸರಿಯಾಗಿದೆ ಎಂದು ಅರ್ಥ.

* ಈಗ ರೆಡಿಯಾದ ಬೆಲ್ಲದ ಪಾಕಕ್ಕೆ ಎಳ್ಳು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ಉರಿಯಿಂದ ಇಳಿಸಿ, ತಣ್ಣಗಾಗಲು ಇಡಿ.

* ನಂತರ ಅಂಗೈಗೆ ತುಪ್ಪ ಸವರಿ ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ಎಳ್ಳುಂಡೆ ರೆಡಿ.

English summary

Ellunde Festival Recipe

During Nagara Panchami preparing Ellunde is very common. To prepare this ellunde you have to know to prepare riht consistency jaggery syrup. Here are tips to prepare ellunde in a right way.. Happy Nagara Panchami.
X
Desktop Bottom Promotion