For Quick Alerts
ALLOW NOTIFICATIONS  
For Daily Alerts

'ಜಹಾಂಗೀರ್ ರೆಸಿಪಿ', ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By Manu
|

ಸಿಹಿತಿಂಡಿಗಳ ಅಂಗಡಿಯಲ್ಲಿ ಕಣ್ಣಿಗೆ ಎದ್ದು ಕಾಣುವಂತೆ ಜಹಾಂಗೀರ್, ಗುಲಾಬ್ ಜಾಮೂನು, ರಸಮಲೈ ಮೊದಲಾದ ತಿಂಡಿಗಳನ್ನು ಇರಿಸಲಾಗಿರುತ್ತದೆ. ಏಕೆಂದರೆ ಇವುಗಳನ್ನು ನೋಡಿದಾಕ್ಷಣ ಯಾರಿಗಾದರೂ ತಿನ್ನಬೇಕೆಂಬ ಚಪಲ ಮೂಡುವುದು ಸಹಜ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇವು ದುಬಾರಿಯಾಗಿದ್ದು ಸಕ್ಕರೆಯ ಪ್ರಮಾಣ ಹೆಚ್ಚಿರುವ ಕಾರಣ ಅನಾರೋಗ್ಯಕರವೂ ಹೌದು.

ಆದರೆ ನಾಲಿಗೆ ಈ ಮಾತನ್ನು ಕೇಳಲು ತಯಾರಿಲ್ಲ. ಹಾಗಾದರೆ ಇದನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಚಪಲವನ್ನು ತೀರಿಸಿಕೊಳ್ಳುವುದೇ ಸರಿಯಾದ ವಿಧಾನ. ಬನ್ನಿ, ಈ ಸಿಹಿಯನ್ನು ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ: ಈ ತಿಂಡಿಗೆ ಜಾಂಗ್ರಿ ಎಂದೂ ಕರೆಯುತ್ತಾರೆ. ತಮಿಳುನಾಡಿನಲ್ಲಿ ಈ ತಿಂಡಿ ಹೆಚ್ಚು ಜನಪ್ರಿಯವಾಗಿದ್ದು ಈಗ ಭಾರತದೆಲ್ಲೆಡೆ ಜನಪ್ರಿಯತೆ ಗಳಿಸುತ್ತಿದೆ.

Jahangir

ಪ್ರಮಾಣ
*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ನಲವತ್ತೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು ಆಹಾ ಅವಲಕ್ಕಿ ಲಾಡು, ಒಮ್ಮೆ ಬಾಯಿಗೆ ಹಾಕಿ ನೋಡು!

ಅಗತ್ಯವಿರುವ ಸಾಮಾಗ್ರಿಗಳು:
*ಉದ್ದಿನ ಬೇಳೆ - 2 ಕಪ್
*ಜೋಳದ ಹಿಟ್ಟು (cornflour) - 1/2 ಕಪ್
*ಸಕ್ಕರೆ - 3 ಕಪ್
*ಕೆಂಪು ಬಣ್ಣ- 1 ರಿಂದ 2 ತೊಟ್ಟು
*ಅಕ್ಕಿ ಹಿಟ್ಟು- 1/2 ಕಪ್
*ಏಲಕ್ಕಿ - 1 ರಿಂದ 2
*ಪೈಪಿಂಗ್ ಬ್ಯಾಗ್- (ಅಥವಾ ಮೂಲೆಯನ್ನು ಚಿಕ್ಕದಾಗಿ ಕತ್ತರಿಸಿರುವ ಪ್ಲಾಸ್ಟಿಕ್ ಪೊಟ್ಟಣ)
*ಎಣ್ಣೆ: ಹುರಿಯಲು ಅಗತ್ಯವಿದ್ದಷ್ಟು ಬೊಂಬಾಟ್ ಸಿಹಿ ರೆಸಿಪಿ-'ಮಿಲ್ಕ್ ಮೈಸೂರ್ ಪಾಕ್'

ವಿಧಾನ:
* ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದು ನಾಲ್ಕರಿಂದ ಐದು ಘಂಟೆಗಳ ಕಾಲ ನೆನೆಸಿಡಿ.
* ಬಳಿಕ ನೀರನ್ನು ಸೋಸಿ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗಾಗುವಂತೆ ಕಡೆಯಿರಿ
* ಈ ಸಮಯದಲ್ಲಿ ಕೇವಲ ಅರ್ಧ ಕಪ್ ನೀರು ಮಾತ್ರ ಸೇರಿಸಿ. ಹೆಚ್ಚು ನೀರು ಸೇರಿಸಿದರೆ ಶ್ಯಾವಿಗೆ ಉದುರುದುರಿ ಹೋಗುತ್ತದೆ.
* ಒಂದು ಪಾತ್ರೆಯಲ್ಲಿ ಕೊಂಚ ನೀರು ಬಿಸಿಮಾಡಿ ಸಕ್ಕರೆ ಸೇರಿಸಿ. ಎಷ್ಟು ನೀರು ಅಂದರೆ ಸಕ್ಕರೆ ಮುಳುಗುವಷ್ಟು ಮಾತ್ರ.
* ಇದಕ್ಕೆ ಏಲಕ್ಕಿ ಪುಡಿ ಹಾಕಿ ಕಲಕಿ. ಸಕ್ಕರೆ ಕರಗಿ ಪಾಕದಂತಾಗಲಿ. ಬಳಿಕ ಈ ಪಾತ್ರೆಯನ್ನು ಪಕ್ಕದಲ್ಲಿಡಿ.
* ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಅಕ್ಕಿ ಹಿಟ್ಟು ಮತ್ತು ಕೆಂಪು ಬಣ್ಣ ಸೇರಿಸಿ ಇದಕ್ಕೆ ಕಡೆದ ಉದ್ದಿನ ಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈ ಮಿಶ್ರಣವನ್ನು ಪೈಪಿಂಗ್ ಬ್ಯಾಗ್ ಗೆ ಹಾಕಿ ಎಣ್ಣೆಯಲ್ಲಿ ಹಾಕಲು ಸಿದ್ಧವಾಗಿರಿ.
* ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ.
* ಎಣ್ಣೆಯಿಂದ ಕೊಂಚ ಹೊಗೆಬರಲು ಪ್ರಾರಂಭಿಸುತ್ತಿದ್ದಂತೆಯೇ ಉರಿಯನ್ನು ತಗ್ಗಿಸಿ.
* ಈಗ ಪೈಪಿಂಗ್ ಬ್ಯಾಗ್ ನಿಂದ ಕೊಂಚವೇ ಒತ್ತಡ ಹಾಕಿ ಹಿಟ್ಟು ಎಣ್ಣೆಯಲ್ಲಿ ಬೀಳುವಂತೆ ಮಾಡಿ. ಬೀಳುವಾಗ ಕಲಾತ್ಮಕವಾಗಿ ವೃತ್ತಾಕಾರದಲ್ಲಿ ತಿರುಗಿಸುತ್ತಾ ಜಹಾಂಗೀರ್ ನ ರೂಪ ನೀಡಿ.
* ನಡು ನಡುವೆ ತಿರುವುತ್ತಾ ಹುರಿಯಿರಿ.
* ಎರಡೂ ಬದಿ ಹುರಿದಿದೆ ಎನ್ನಿಸಿದ ಬಳಿಕ ಇದನ್ನು ಹೊರತೆಗೆದು ಎಣ್ಣೆ ಸೋರಿಹೋಗುವಂತೆ ಮಾಡಿ.
* ನಂತರ ಸಕ್ಕರೆ ಪಾಕದಲ್ಲಿ ಇದನ್ನು ಅದ್ದಿ ಹೊರತೆಗೆದು ಒಂದು ತಟ್ಟೆಯಲ್ಲಿ ಹರಡಿ.
* ಕೊಂಚ ತಣ್ಣಗಾದ ಬಳಿಕ ಅತಿಥಿಗಳಿಗೆ ಬಡಿಸಿ ಮೆಚ್ಚುಗೆ ಪಡೆಯಿರಿ. ಹಬ್ಬದ ಸಂದರ್ಭದಲ್ಲಿ ಈ ಸಿಹಿ ಪದಾರ್ಥವನ್ನು ಮಾಡಿ ಇದು ಹೇಗೆನಿಸಿತು ಎಂಬುದನ್ನು ನಮಗೆ ತಿಳಿಸಿ....

English summary

Easy Steps To Prepare Jahangir At Home

Most of the time, you would have tasted jahangir in many shops. And have you ever wondered how to prepare this yummy sweet recipe? Well, let me tell you, this is the most simplest sweet recipe that you can prepare within minutes! Then, what are you waiting for? Have a look at this simple jahangir sweet recipe for week end
X
Desktop Bottom Promotion