For Quick Alerts
ALLOW NOTIFICATIONS  
For Daily Alerts

ಸಿಹಿ ಪ್ರಿಯ ಗಣಪನಿಗೆ ವಿಶೇಷ ಗುಲಾಬ್ ಜಾಮೂನ್ ರೆಸಿಪಿ!

By Super Admin
|

ಭಾರತದ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ಬಳಿಕ ಬರುವ ಮುಖ್ಯವಾದ ಹಬ್ಬವೆಂದರೆ ಗಣೇಶ ಚತುರ್ಥಿ. ಲೋಕಮಾನ್ಯ ತಿಲಕರು ಈ ಪೂಜೆಯನ್ನು ಸಾರ್ವಜನಿಕವಾಗಿ ಆಚರಿಸಲು ಕರೆ ನೀಡಿದ ಬಳಿಕ ಈ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜಾತಿ ಮತ ಬೇಧವಿಲ್ಲದೇ ಜನರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಾವೈಕ್ಯತೆ ಮೆರೆಯುತ್ತಾರೆ.

Easy Homemade Dry Gulab Jamun Recipe For Ganesh Chaturthi

ಈ ದಿನ ಗಣೇಶನಿಗೆ ಸಲ್ಲಿಸುವ ವಿಶೇಷ ಪೂಜೆಗಳಲ್ಲಿ ವಿಶೇಷ ಸಿಹಿತಿಂಡಿಗಳನ್ನೂ ಅರ್ಪಿಸಲಾಗುತ್ತದೆ. ಅಂತೆಯೇ ಮನೆಮನೆಯಲ್ಲಿ ವಿವಿಧ ಸಿಹಿತಿಂಡಿಗಳ ಮಹಾಪೂರ. ಹೀಗಿರುವಾಗ ನಿಮ್ಮ ಮನೆಯಲ್ಲಿಯೂ ಇರದಿದ್ದರೆ ಹೇಗೆ? ಆದರೆ ಹೆಚ್ಚು ಸಮಯವಿಲ್ಲ ಎಂಬ ಕೊರತೆಯೇ? ಇದನ್ನೂ ಇಂದಿನ ಸುಲಭ ಗುಲಾಬ್ ಜಾಮೂನಿನ ವಿಧಾನ ಕೊರತೆ ನೀಗಿಸಲಿದೆ..! ಅಚ್ಚರಿಯಾಯಿತೇ ಮುಂದೆ ಓದಿ... ಗಣಪನಿಗೆ ಬಲು ಇಷ್ಟ ರುಚಿಯಾದ ರವೆ ಲಾಡು

*ಪ್ರಮಾಣ: ಸುಮಾರು ಐದು ಜನರಿಗೆ ಒಂದು ಹೊತ್ತಿಗಾಗಿ.
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ಹಾಲು ಖೋವಾ: ಇನ್ನೂರೈವತ್ತು ಗ್ರಾಂ
*ಪನ್ನೀರ್ : ನೂರು ಗ್ರಾಂ (ಚಿಕ್ಕದಾಗಿ ತುರಿಯಬೇಕು)
*ಮೈದಾ ಹಿಟ್ಟು: ಎರಡು ದೊಡ್ಡ ಚಮಚ
*ಹಾಲಿನ ಪುಡಿ: ಒಂದು ಕಪ್
*ಹಾಲು: ಒಂದು ಕಪ್
*ಅಡುಗೆ ಸೋಡಾ: ಕಾಲು ಚಿಕ್ಕ ಚಮಚ
*ಸಕ್ಕರೆ: ಎರಡು ಕಪ್
*ಏಲಕ್ಕಿ: ಒಂದು ಚಿಕ್ಕ ಚಮಚ (ಚಿಕ್ಕದಾಗಿ ಪುಡಿ ಮಾಡಿದ್ದು)
*ಸಕ್ಕರೆ ಪುಡಿ: ಅರ್ಧ ಕಪ್
*ಕೊಬ್ಬರಿ ಪುಡಿ: ಅರ್ಧ ಕಪ್
*ಎಣ್ಣೆ: ಹುರಿಯಲು ಅಗತ್ಯವಿದ್ದಷ್ಟು

ವಿಧಾನ:
ಮೊದಲು: ಹಿಟ್ಟನ್ನು ತಯಾರಿಸುವ ವಿಧಾನವನ್ನು ನೋಡೋಣ:
1) ಒಂದು ದೊಡ್ಡ ಪಾತ್ರೆಯಲ್ಲಿ ಖೋವಾ, ಪನ್ನೀರ್ , ಮೈದಾ ಮತ್ತು ಹಲುಪುಡಿ ಸೇರಿಸಿ ಮಿಶ್ರಣ ಮಾಡಿ
2) ಇದಕ್ಕೆ ಹಾಲನ್ನು ಕೊಂಚ ಕೊಂಚವಾಗಿ ಸೇರಿಸುತ್ತಾ ಚಪಾತಿ ಹಿಟ್ಟಿನಂತೆ ಮೃದುವಾಗಿ ಕಲಿಸಿ,ಗಂಟುಗಳಿರದಂತೆ ಎಚ್ಚರ ವಹಿಸಿ.
3) ಈ ಹಿಟ್ಟನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ.
4) ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ. ಗಣೇಶ ಮತ್ತೆ ಬರುವನು, ರುಚಿಯಾದ ಮೋದಕ ಮಾಡಿ

ಸಕ್ಕರೆಯ ಪಾಕ ತಯಾರಿಸಲು:
1) ಮೊದಲು ಮಧ್ಯಮ ಗಾತ್ರದ ಪಾತ್ರೆಯಲ್ಲಿ ಎರಡು ಕಪ್ ಸಕ್ಕರೆ ಮತ್ತು ಒಂದು ಕಪ್ ನೀರು ಸೇರಿಸಿ
2) ಇದಕ್ಕೆ ಏಲಕ್ಕಿ ಪುಡಿ ಸೇರಿಸಿ ಕಲಕಿ
3) ನೀರು ಕುದಿದ ಬಳಿಕ ಉರಿ ಆರಿಸಿ ಪಾತ್ರೆಯನ್ನು ತಣಿಯಲು ಬಿಡಿ.

ಇತ್ತ, ಜಾಮೂನಿನ ಉಂಡೆಗಳು ತಯಾರಾದ ಬಳಿಕ:
*ಒಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಕುದಿಸಿ.
*ಎಣ್ಣೆ ಬಿಸಿಯಾದ ಬಳಿಕ ಚಿಕ್ಕ ಉರಿಯಲ್ಲಿ ಜಾಮೂನಿನ ಉಂಡೆಗಳನ್ನು ಒಂದಾದ ಬಳಿಕ ಒಂದರಂತೆ ನಿಧಾನವಾಗಿ ಬಿಡಿ
*ಎಣ್ಣೆಚಮಚ ಬಳಸಿ ಎಲ್ಲಾ ಜಾಮೂನುಗಳು ಸುಮಾರು ಕಂದು ಬಣ್ಣ ಬರುವವರೆಗೆ ತಿರುವುತ್ತಾ ಹುರಿಯಿರಿ.
*ಬಳಿಕ ಒಂದು ತಟ್ಟೆಯ ಮೇಲೆ ಹರಡಿ. ಕೊಂಚ ತಣಿದ ಬಳಿಕ ಸಕ್ಕರೆಯ ಪಾಕದಲ್ಲಿ ಹಾಕಿ (ಬಿಸಿ ಇದ್ದಾಗ ನೇರವಾಗಿ ಹಾಕಿದರೆ ಜಾಮೂನು ಪುಡಿಪುಡಿಯಾಗುತ್ತದೆ ಮತ್ತು ಕೊಂಚ ಕಹಿಯಾಗುತ್ತದೆ)


*ಸಕ್ಕರೆ ಪಾಕದಲ್ಲಿ ಜಾಮೂನು ನೀರನ್ನು ಹೀರಿಕೊಂಡು ದೊಡ್ಡದಾಗುತ್ತಾ ಹೋಗುತ್ತದೆ.
*ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಪುಡಿ ಮತ್ತು ಕೊಬ್ಬರಿ ಪುಡಿಯನ್ನು ಮಿಶ್ರಣ ಮಾಡಿ ಹರಡಿ.
*ಈಗ ಪ್ರತಿ ಜಾಮೂನನ್ನು ಸಕ್ಕರೆ ಪಾಕದಿಂದ ತೆಗೆದು ತಟ್ಟೆಯಲ್ಲಿ ಉರುಳಾಡಿಸಿ ಎಲ್ಲಾ ಬದಿಯಲ್ಲಿ ಪುಡಿಯನ್ನು ಸಮನಾಗಿ ಮೆತ್ತಿಕೊಳ್ಳುವಂತೆ ಮಾಡಿ
*ಈ ಜಾಮೂನುಗಳನ್ನು (ನಿಮ್ಮ ಮಕ್ಕಳ/ಪತಿದೇವರ ಕಣ್ಣುತಪ್ಪಿಸಿ) ಫ್ರಿಜ್ಜಿನಲ್ಲಿಡಿ. ಸುಮಾರು ಎರಡು ಗಂಟೆ ಇದನ್ನು ಯಾರೂ ಮುಟ್ಟದಂತೆ ಎಚ್ಚರವಹಿಸಿ ಈ ಜಾಮೂನುಗಳು ನಿಮಗೆ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ಬರೆದು ತಿಳಿಸಿ.
English summary

Easy Homemade Gulab Jamun Recipe For Ganesh Chaturthi

On the day of Ganesh Chaturthi, many sweet dishes that are favourites of Lord Ganesha are prepared. So, this Ganesh Chaturthi, prepare a yummy sweet dry gulab jamun recipe right at your home! Have a look...
X
Desktop Bottom Promotion