For Quick Alerts
ALLOW NOTIFICATIONS  
For Daily Alerts

ಬಾಯಿ ಸಿಹಿ ಮಾಡುವ ಕುಂಬಳಕಾಯಿ ಹಲ್ವಾ

By Manu
|

ದೀಪಗಳ ಹಬ್ಬ ದೀಪಾವಳಿಗೆ ಇನ್ನೇನು ಬೆರಳಣಿಕೆಯ ದಿನಗಳ ಕ್ಷಣಗಣನೆ ಮಾತ್ರ ಬಾಕಿ ಇದೆ. ಅದಾಗ್ಯೂ ದೀಪಗಳ ಹಬ್ಬ ಮನರಂಜನೆಯನ್ನು ಮಾತ್ರ ನೀಡುವುದಲ್ಲದೆ ಭಾವೈಕ್ಯದ ಪ್ರತೀಕ ಎಂದೆನಿಸಿದೆ. ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನ ಜ್ಯೋತಿಯನ್ನು ಬೆಳಗುವ ಈ ಹಬ್ಬ ಜಾತಿಯ ಸಂಕೋಲೆಯನ್ನು ಬೇಧಿಸಿ ಆಚರಿಸುವಂಥದ್ದಾಗಿದೆ, ಅಲ್ಲದೆ ಇಡೀ ವಿಶ್ವವೇ ಈ ಹಬ್ಬದ ಆಚರಣೆಯಲ್ಲಿ ತೊಡಗುತ್ತದೆ.

ಹೌದು, ಪ್ರತಿಯೊಬ್ಬ ಮಾನವನ ಒಳಗಿನ ಆತ್ಮವು ಬೆಳಕಿನಿಂದ ಕೂಡಿದ್ದರೆ ಮಾತ್ರ ಹೊರಪ್ರಪಂಚ ಸುಂದರವಾಗಿರುತ್ತದೆ. ಕತ್ತಲೆಯೆಂಬ ಮೌಢ್ಯ ನಮ್ಮ ಮನದಲ್ಲಿ ಮನೆಮಾಡಿರುವುದರಿಂದ ಅಜ್ಞಾನವೇ ಅಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ. ಇದು ದೂರಾದರೆ ಮಾತ್ರವೇ ಸುಂದರ ಪ್ರಪಂಚ ನಮಗೆ ಗೋಚರವಾಗುತ್ತದೆ. ಹಾಗಾಗಿ ಇಂತಹ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಹಬ್ಬವೇ ದೀಪಾವಳಿ ಹಬ್ಬದ ಹೆಗ್ಗಳಿಕೆ

ಇನ್ನು ಹಬ್ಬದ ಸಂಭ್ರಮಾಚರಣೆಯಲ್ಲಿ ಹಬ್ಬದಡುಗೆಯ ಜೊತೆಗೆ ಏನಾದರೂ ಸಿಹಿ ಇರಲೇಬೇಕು ಅಲ್ಲವೇ? ದೀಪಾವಳಿಯ ಸಂಭ್ರಮಕ್ಕಾಗಿ ನೆಂಟರಿಷ್ಟರು ಮನೆಗೆ ಬಂದಿರುವಾಗ ಏನಾದರೂ ಪ್ರತ್ಯೇಕವಾದ ಸಿಹಿಯನ್ನು ತಯಾರಿಸಲೇಬೇಕಾಗುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಅತಿ ವಿಶೇಷವಾದ ಕುಂಬಳ ಕಾಯಿ ಹಲ್ವಾ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ಬಂಧು ಬಾಂಧವರಿಗೆ ಇಷ್ಟವಾಗುವ ಈ ಹಲ್ವಾ ರೆಸಿಪಿಯನ್ನು ಕ್ಷಣದಲ್ಲೇ ಎಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ ತಯಾರಿಸಬಹುದಾಗಿದೆ. ಅದು ಹೇಗೆ ಎಂಬುದನ್ನು ಇಲ್ಲಿ ನೀಡುತ್ತಿದ್ದೇವೆ, ಮುಂದೆ ಓದಿ...

Diwali Special -Mouthwatering pumpkin halwa recipe

ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹತ್ತು ನಿಮಿಷಗಳು
ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಗ್ರಿಗಳು:
*ಸಿಹಿಗುಂಬಳ ತುರಿದದ್ದು: ಎರಡು ಕಪ್
*ಹಾಲು: ಒಂದು ಕಪ್
*ಸಕ್ಕರೆ: ಒಂದು ಕಪ್
*ತುಪ್ಪ: ಒಂದು ಕಪ್
*ಒಣದ್ರಾಕ್ಷಿ : ಸುಮಾರು ಹತ್ತು
*ಏಲಕ್ಕಿ ಪುಡಿ: ಕಾಲು ಟೀ ಚಮಚ (ಅಥವಾ ನಾಲ್ಕು ದೊಡ್ಡ ಗಾತ್ರದ ಏಲಕ್ಕಿಯನ್ನು ಪುಡಿಮಾಡಿ)
*ಗೋಡಂಬಿ: ಸುಮಾರು ಆರು (ಬಿಳಿಯದ್ದು), (ಲಭ್ಯವಿದ್ದರೆ ಬಾದಾಮಿಯನ್ನೂ ಸೇರಿಸಬಹುದು)
*ಕೇಸರಿ: ಎರಡರಿಂದ ಮೂರು ಎಸಳು ಸಾಕು.

ವಿಧಾನ:
1) ಸಿಹಿಗುಂಬಳದ ತುರಿಯನ್ನು ಕುಕ್ಕರ್ ನಲ್ಲಿ ಕೊಂಚವೇ ನೀರಿನೊಡನೆ ಎರಡು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆಗೆಯಿರಿ. ಸಿಹಿಗುಂಬಳವನ್ನು ಹೊರತೆಗೆದು ಒಂದು ತಟ್ಟೆಯ ನಡುವೆ ಹರಡಿ. ತಟ್ಟೆ ಕೊಂಚ ಓರೆಯಾಗಿಸಿದರೆ ಉಳಿದಿದ್ದ ನೀರು ಹರಿದು ಹೋಗುತ್ತದೆ. ಈ ನೀರನ್ನು ನಿವಾರಿಸಿ. ಕೊಂಚ ಒತ್ತಿ ಉಳಿದ ನೀರು ಸಹಾ ಹರಿದು ಹೋಗುವಂತೆ ಮಾಡಿ.
2) ಒಂದು ದಪ್ಪತಳದ ಬಾಣಲೆ ಅಥವಾ ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಎರಡು ದೊಡ್ಡ ಚಮಚ ತುಪ್ಪವನ್ನು ಕಾಯಿಸಿ. ತುಪ್ಪ ಬಿಸಿಯಾದ ಕೂಡಲೇ ಬೇಯಿಸಿದ ಸಿಹಿಗುಂಬಳ ತುರಿಯನ್ನು ಹಾಕಿ
3) ಕುಂಬಳಕಾಯಿ ಪೂರ್ಣವಾಗಿ ಬೇಯುವವರೆಗೆ ತಿರುವುತ್ತಾ ಇರಿ. ಇದು ಹುರಿಯಲು ಸುಮಾರು ಐದು ನಿಮಿಷ ಬೇಕಾಗಬಹುದು. ಆದರೆ ನಡುನಡುವೆ ತಿರುವುತ್ತಾ ಇರಬೇಕು, ಇಲ್ಲದಿದ್ದರೆ ತಳ ಕಪ್ಪಾಗಿ ರುಚಿ ಹುಳಿಯಾಗುತ್ತದೆ.
4) ಈಗ ಹಾಲು ಹಾಕಿ ಕಲಕಿ. ಬಳಿಕ ಸಕ್ಕರೆ, ಕೇಸರಿ ಹಾಕಿ ಕಲಕಿ. ಹಾಲನ್ನು ಕುಂಬಳದ ತುರಿ ಪೂರ್ಣವಾಗಿ ಹೀರಿಕೊಂಡ ಬಳಿಕ ಉರಿಯನ್ನು ಚಿಕ್ಕದಾಗಿಸಿ ಇನ್ನೂ ಎರಡು ದೊಡ್ಡ ಚಮಚ ತುಪ್ಪವನ್ನು ಹಾಕಿ ತಿರುವಿ.
5) ಈಗ ಏಲಕ್ಕಿಪುಡಿ ಹಾಕಿ ತಿರುವಿ. ತುಪ್ಪ ಬಿಡುತ್ತಿದೆ ಎಂದೆನ್ನಿಸಿದಾಗ ಉರಿ ಆರಿಸಿ ಪಾತ್ರೆಯನ್ನು ಕೆಳಗಿಳಿಸಿ
6) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಇನ್ನೆರಡು ದೊಡ್ಡ ಚಮಚ ತುಪ್ಪ ಬಿಸಿಮಾಡಿ ಗೋಡಂಬಿ, ದ್ರಾಕ್ಷಿ (ಮತ್ತು ಬಾದಾಮಿ) ಗಳನ್ನು ಹಾಕಿ ಕೆಂಪಗಾಗುವಷ್ಟು ಹುರಿಯಿರಿ.
7) ಹುರಿದ ಗೋಡಂಬಿ ದ್ರಾಕ್ಷಿಯನ್ನು ಕುಂಬಳ ತುರಿಗೆ ಹಾಕಿ ಮಿಶ್ರಣ ಮಾಡಿ.
8) ಬಿಸಿಬಿಸಿಯಿರುವಂತೆಯೇ ಸೇವಿಸಿ

English summary

Diwali Special -Mouthwatering pumpkin halwa recipe

Sweets recipes are very common in diwali festival. So On this occasion, Boldsky kannada shall teach you how to prepare halwa with sweet pumpkin. This is the one of the best recipes that you have to try for Deepavali festival
Story first published: Thursday, November 5, 2015, 19:57 [IST]
X
Desktop Bottom Promotion