For Quick Alerts
ALLOW NOTIFICATIONS  
For Daily Alerts

ಚಾಕಲೇಟ್ ಮಫಿನ್- ಸ್ವೀಟ್ಸ್

By Neha Mathur
|

ಮಫಿನ್ ಅಂದರೆ ನನಗೆ ಪಂಚ ಪ್ರಾಣ. ಇದನ್ನು ಚಾಕಲೇಟ್ ಪ್ಲೇವರ್ ನಲ್ಲಿ ಮಾಡಿದರೆ ಹೇಗೆ ಎಂದು ಅನಿಸಿದ್ದೇ ತಡ, ಮಾಡಿಯೇ ಬಿಟ್ಟೆ. ಮಫಿನ್ ಟೇಸ್ಟ್ ಮನೆಯಲ್ಲಿ ಎಲ್ಲರಿಗೂ ಇಷ್ಟವಾಯಿತು, ಮಫಿನ್ ತುಂಬಾ ಮೃದುವಾಗಿ ಬಂತು. ಹೀಗೆ ಬರಲು ನಾನು ಬಳಸಿದ ಪ್ರಮುಖ ಟ್ರಿಕ್ಸ್ ಅಂದರೆ ಮಿಶ್ರಣವನ್ನು ತುಂಬಾ ನೀರು ಮಾಡಲಿಲ್ಲ, ತುಂಬಾ ಡ್ರೈಯಾಗಿಸಲೂ ಇಲ್ಲ, ಜಸ್ಟ್ ತಿರುಗಿಸಿದೆ, ಚೆನ್ನಾಗಿಯೇ ಬಂತು.

ಈ ರೆಸಿಪಿಯನ್ನು ನಿಮ್ಮೊಂದಿಗೂ ಹಂಚಿಕೊಳ್ಳ ಬಯಸುತ್ತೇನೆ:

ಮಫಿನ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಮಫಿನ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಮೈದಾ 250 ಗ್ರಾಂ

ಮೊಟ್ಟೆ 1

ಎಣ್ಣೆ 100ml

ಬೇಕಿಂಗ್ ಪೌಡರ್ 2 ಚಮಚ

ಬೇಕಿಂಗ್ ಸೋಡಾ 1/2 ಚಮಚ

ಸಾಮಾಗ್ರಿಗಳು

ಸಾಮಾಗ್ರಿಗಳು

ಸಕ್ಕರೆ 200 ಗ್ರಾಂ

ವೆನಿಲ್ಲಾ ರಸ 1 ಚಮಚ

ಚಿಟಿಕೆಯಷ್ಟು ಉಪ್ಪು

ಮೊಸರು ಅರ್ಧ ಕಪ್

ಕೋಕಾ ಪುಡಿ 4 ಚಮಚ

ಡಾರ್ಕ್ ಚಾಕಲೇಟ್ 100 ಗ್ರಾಂ(ಚಿಕ್ಕ-ಚಿಕ್ಕ ಪೀಸ್ ಗಳಾಗಿ ಪುಡಿ ಮಾಡಿದ್ದು)

ಕಾಫಿ ಗ್ಲಾಜೆ ಗೆ ಸಾಮಾಗ್ರಿಗಳು

ಕಾಫಿ ಗ್ಲಾಜೆ ಗೆ ಸಾಮಾಗ್ರಿಗಳು

ಕಾಫಿ ಪುಡಿ 1 ಚಮಚ

ಹಾಲು 1 ಚಮಚ

ಸಕ್ಕರೆ ಅರ್ಧ ಕಪ್

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

* ಮೈಕ್ರೋ ಓವನ್ ಅನ್ನು 350 ಡಿಗ್ರಿಗೆ ಪ್ರೀ ಹೀಟ್ ಮಾಡಿ.

* ಮಫಿನ್ ಟ್ರೇಗೆ ಸ್ವಲ್ಪ ಬೆಣ್ಣೆ ಅಥವಾ ಸವರಿ.* ಈಗ ಬಟ್ಟಲಿನಲ್ಲಿ ಮೈದಾ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಕೋಕಾ ಪುಡಿ ಮತ್ತು ಉಪ್ಪು ಹಾಕಿ.

* ಮತ್ತೊಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಹಾಕಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕದಡಿ, ನಂತರ ವೆನಿಲ್ಲಾ ರಸ (venilla extract) ಮತ್ತು ಎಣ್ಣೆ ಹಾಕಿ ಚೆನ್ನಾಗಿ ಕದಿಡಿ. ಈಗ ಮೊಟ್ಟೆಗೆ ಕಾಫಿ ಪುಡಿ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಮಾಡುವ ವಿಧಾನ

ಮಾಡುವ ವಿಧಾನ

* ಈಗ ಈ ಮೊಟ್ಟೆಯ ಮಿಶ್ರಣವನ್ನು ಮೈದಾದ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿ(ತುಂಬಾ ಮಿಕ್ಸ್ ಮಾಡಬೇಡಿ, ಜಸ್ಟ್ ಒಮ್ಮೆ ತಿರುಗಿಸಿ ಅಷ್ಟೇ).

* ಈಗ ಈ ಮಿಶ್ರಣವನ್ನು ಮಫಿನ್ ಟ್ರೇಗೆ ತುಂಬಿ.

* ಅದರಲ್ಲಿ ಚಾಕಲೇಟ್ ಪುಡಿಯನ್ನು ಉದುರಿಸಿ.

ಮಾಡುವ ವಿಧಾನ

ಮಾಡುವ ವಿಧಾನ

* ಈಗ ಮೈಕ್ರೋ ಓವನ್ ನಲ್ಲಿಟ್ಟು 15-20 ನಿಮಿಷ ಬೇಯಿಸಿ, ನಂತರ ಟ್ರೇಯನ್ನು ತಣ್ಣಗಾಗಲು ಇಡಿ, ನಂತರ ಟ್ರೇಯಿಂದ ತೆಗೆದರೆ ಚಾಕಲೇಟ್ ಮರ್ಫಿನ್ ರೆಡಿ.

ಚಾಕಲೇಟ್ ಮಫಿನ್

ಚಾಕಲೇಟ್ ಮಫಿನ್

ಚಾಕಲೇಟ್ ಮಫಿನ್ ರೆಡಿ.

English summary

Coffee n Chocolate Muffins

This time, apart from coffee, I decided to add chocolate to my muffins. Muffins came out very soft and moist. The trick is, not to over mix the wet and dry ingredients. Just give the mix a quick and swift stir and your muffins will be very soft. If you want to try here is the recipe.
X
Desktop Bottom Promotion