ಮಕ್ಕಳ ದಿನಾಚರಣೆಗೆ ಸ್ಪೆಷೆಲ್-ಕಾಫಿ ಕುಕ್ಕೀಸ್

By:

ಮಕ್ಕಳ ದಿನಾಚರಣೆಯ ವಿಶೇಷವಾಗಿ ನಿಮ್ಮ ಮಕ್ಕಳು ಶಾಲೆಯಿಂದ ಬರುವಷ್ಟರಲ್ಲಿ ಏನಾದರೂ ವಿಶೇಷ ಅಡುಗೆ ಮಾಡಿಟ್ಟರೆ ಅವರಿಗೆ 'ನಮ್ಮ ದಿನವನ್ನು ಶಾಲೆಯಲ್ಲಿ ಮಾತ್ರವಲ್ಲ ಮನೆಯಲ್ಲೂ ಇಷ್ಟೊಂದು ವಿಶೇಷವಾಗಿ ಆಚರಿಸುತ್ತಿದ್ದಾರಲ್ಲ' ಎಂದು ತುಂಬಾ ಖುಷಿಯಾಗುವವರು.

ಮಕ್ಕಳಿಗೆ ಕುಕ್ಕೀಸ್ ಅಂದರೆ ತುಂಬಾ ಇಷ್ಟವಿರುತ್ತದೆ. ಈ ಕುಕ್ಕೀಸ್ ಅನ್ನು ಸುಲಭವಾಗಿ ಮಾಡಬಹುದಾಗಿದ್ದು ಇಲ್ಲಿ ನಾವು ಕಾಫಿ ಕುಕ್ಕೀಸ್ ನ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು:
* ಮೈದಾ ಒಂದೂವರೆ ಕಪ್
* ಬೆಣ್ಣೆ 50 ಗ್ರಾಂ
* ಬ್ರೌನ್ ಶುಗರ್ ಪುಡಿ 4 ಚಮಚ
* ಕಾಫಿ ಪುಡಿ 2 ಚಮಚ (instant coffee)
* ವೆನಿಲ್ಲಾ ಎಸೆನ್ಸ್ 4 ಹನಿ
* ಮೊಟ್ಟೆಯ ಬಿಳಿ 2
* ತೆಂಗಿನ ತುರಿ ಅರ್ಧ ಕಪ್
* ಚಿಟಿಕೆಯಷ್ಟು ಉಪ್ಪು
* ಅಡುಗೆ ಸೋಡಾ 1 ಚಮಚ
* ಬೇಕಿಂಗ್ ಮೋಲ್ಡ್ 20
* ಬೆಣ್ಣೆ 1 ಕಪ್
* ಬಟರ್ ಪೇಪರ್ 1 ಶೀಟ್

ತಯಾರಿಸುವ ವಿಧಾನ:

* ಬೆಣ್ಣೆಯನ್ನು ಬಿಸಿ ಮಾಡಿ ಕರಗಿಸಬೇಕು. ಈಗ ಕರಗಿದ ಬೆಣ್ಣೆಗೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕದಡಬೇಕು.

* ನಂತರ ಮೊಟ್ಟೆಯ ಬಿಳಿ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ 3-4 ನಿಮಿಷ ಸ್ಪೂನ್ ನಿಂದ ಚೆನ್ನಾಗಿ ಕದಡಬೇಕು.

* ನಂತರ ಮತ್ತೊಂದು ಪಾತ್ರೆ ತೆಗೆದುಕೊಳ್ಳಿ (ಪಾತ್ರೆ ಸ್ವಲ್ಪ ದೊಡ್ಡದಿರಲಿ). ಆ ಪಾತ್ರೆಗೆ ಮೈದಾ ಹಿಟ್ಟು, ಅಡುಗೆ ಸೋಡಾ, ಕಾಫಿ ಪುಡಿ, ಚಿಟಿಕೆಯಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಬೆಣ್ಣೆ ಮತ್ತು ಮೊಟ್ಟೆಯ ಮಿಶ್ರಣವನ್ನು ಸುರಿಯಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಬಿಸಿ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತೆಂಗಿನ ತುರಿಯನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲೆಸಿ.

* ನಂತರ ಮೈಕ್ರೋ ಓವನ್ ಅನ್ನು 350 ಡಿಗ್ರಿ Fಗೆ ಬಿಸಿ ಮಾಡಿ.

* ಈಗ ಬೇಕಿಂಗ್ ಮೌಲ್ಡ್ ಗೆ ಬೆಣ್ಣೆ ಸವರಿ ಅದರಲ್ಲಿ ಮಿಶ್ರಣವನ್ನು ಸುರಿಯಿರಿ, ನಂತರ ಅದನ್ನು ಬಟರ್ ಶೀಟ್ ನಿಂದ ಕವರ್ ಮಾಡಿ ಶೇ 60ರಷ್ಟು ಪವರ್ ನಲ್ಲಿ 7-10 ನಿಮಿಷ ಬೇಯಿಸಿ.

ನಂತರ ಅವುಗಳನ್ನು ತೆಗೆದು ತಣ್ಣಗಾಗಲು ಇಡಿ. ನಂತರ ಅವುಗಳನ್ನು ಬಿಳಿಯ ಕ್ರೀಮ್ ನಿಂದ ಅಲಂಕರಿಸಿದರೆ ಮಕ್ಕಳ ಮೆಚ್ಚಿನ ಕಾಫಿ ಕುಕ್ಕೀಸ್ ರೆಡಿ.

Read more about: ಮಕ್ಕಳು, ಸಿಹಿ ತಿಂಡಿ, ಮಕ್ಕಳ ದಿನಾಚರಣೆ, children, sweets, childrens day
English summary

Coffee Cookies Recipe | Variety Of Chocolate Recipe | ಕಾಫಿ ಕುಕ್ಕೀಸ್ ರೆಸಿಪಿ | ಅನೇಕ ಬಗೆಯ ಚಾಕಲೇಟ್ ರೆಸಿಪಿ

So you can make coffee cookies on Children's Day to treat your little ones. This cookie recipe is not very complicated and you need just 35 minutes to prepare it. Even if you are late, you can have the coffee cookies ready by the time your kids get back from school.
Story first published: Wednesday, November 14, 2012, 15:04 [IST]
Please Wait while comments are loading...
Subscribe Newsletter