Thought for the day
Your page will load in ...
Close Ad X
Advertisement
English हिन्दी മലയാളം தமிழ் తెలుగు
 
Share This Story

ಗಣೇಶ ಚತುರ್ಥಿಗೆ ತೆಂಗಿನಕಾಯಿ ಲಡ್ಡು

Posted by:
Updated: Thursday, April 4, 2013, 9:32 [IST]

Coconut Laddu Recipe
 

ಗಣೇಶ ಚತುರ್ಥಿಗೆ ಒಂದು ವಾರದ ಮೊದಲೆ ಚಕ್ಕೂಲಿ, ಉಂಡೆ, ಮೋದಕ ತಿಂಡಿಗಳನ್ನು ತಯಾರಿಲಾಗುವುದು. ಗಣೇಶ ಹಬ್ಬಕ್ಕೆ ಲಂಬೋಧರನಿಗೆ ಪ್ರಿಯವಾದ ಅನೇಕ ಬಗೆಯ ಲಡ್ಡುಗಳನ್ನು ತಯಾರಿಸುತ್ತಾರೆ. ಇವತ್ತು ನಾವು ಸುಲಭವಾಗಿ ತಯಾರಿಸಬಹುದಾದ ತೆಂಗಿನಕಾಯಿ ಲಡ್ಡು ಮಾಡುವ ವಿಧಾನ ತಿಳಿಯೋಣ:

ಮಾಡುವ ವಿಧಾನ:

2 ಕಪ್ ತುರಿ ತೆಂಗಿನಕಾಯಿ
ಅರ್ಧ ಕಪ್ ಸಕ್ಕರೆ (ನಿಮಗೆ ಎಷ್ಟು ಸಿಹಿ ಬೇಕೊ ಅಷ್ಟು ಅಳತೆಯಲ್ಲಿ ಹಾಕಿ)
ಒಂದು ಲೀಟರ್ ಹಾಲು
ಒಣ ಕೊಬ್ಬರಿ ಅರ್ಧ ಕಪ್ (ಜಜ್ಜಿದ ಅಥವಾ ಚಿಕ್ಕದಾಗಿ ಕತ್ತರಿಸಿದ)
ಸ್ವಲ್ಪ ಬಾದಾಮಿ

ತಯಾರಿಸುವ ವಿಧಾನ:

1. ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಹಾಲು ಹಾಕಿ ಒಂದು ಲೀಟರ್ ಹಾಲು ಅರ್ಧ ಲೀಟರ್ ಬರುವವರೆಗೆ ಕುದಿಸಬೇಕು. ನಂತರ ಸಕ್ಕರೆ ಹಾಕಿ ಕುದಿಸಬೇಕು. ಸಕ್ಕರೆ ಚೆನ್ನಾಗಿ ಕರಗಿದ ನಂತರ ತುರಿದ ತೆಂಗಿನ ಕಾಯಿ ಹಾಕಿ 3-5 ನಿಮಿಷ ಕಲೆಸಬೇಕು (ಹೀಗೆ ಮಾಡುವಾಗ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಡಬೇಕು).

2. ನಂತರ ಈ ಮಿಶ್ರಣವನ್ನು ಉರಿಯಿಂದ ತೆಗೆದು ತಣ್ಣಗಾಗಲು ಬಿಡಬೇಕು. ನಂತರ ಸ್ವಲ್ಪ-ಸ್ವಲ್ಪ ಮಿಶ್ರಣವನ್ನು ತೆಗೆದುಕೊಂಡು ಉಂಡೆ ಕಟ್ಟಬೇಕು. ನಂತರ ಉಂಡೆಯನ್ನು ಒಣ ಕೊಬ್ಬರಿಯ ಮೇಲೆ ಹೊರಳಾಡಿಸಿ ಅದರ ಮೇಲೆ ಒಂದೊಂದು ಬಾದಾಮಿ ಇಟ್ಟರೆ ಸವೆಯಲು ರುಚಿಕರವಾದ ತೆಂಗಿನಕಾಯಿ ಲಡ್ಡು ರೆಡಿ.

ಮೋದಕದ ರೆಸಿಪಿ ತಿಳಿಯಲು ಮುಂದೆ ನೋಡಿ.

Story first published:  Thursday, September 13, 2012, 15:38 [IST]
English summary
Laddu is a favourite food of Ganesha. During Ganesha Festival will prepare too many variety of laddu. Here we have given the recipe of coconut laddu.
Subscribe Newsletter