For Quick Alerts
ALLOW NOTIFICATIONS  
For Daily Alerts

ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ

|

ಲಂಬೋದರನಿಗೆ ಲಡ್ಡು ಹೆಚ್ಚು ಪ್ರಿಯವೂ, ಮೋದಕ ಹೆಚ್ಚು ಪ್ರಿಯವೋ ಎಂಬುವುದು ಖಚಿತವಾಗಿ ಯಾರಿಗೂ ಗೊತ್ತಿಲ್ಲ. ಕೆಲವರು ಮೋದಕ ಪ್ರಿಯವೆಂದು ಹೇಳಿದರೆ ಮತ್ತೆ ಕೆಲವರು ಲಡ್ಡು ಹೆಚ್ಚು ಪ್ರಿಯವೆಂದು ಹೇಳುತ್ತಾರೆ. ಆದ್ದರಿಂದ ಗಣೇಶನನ್ನು ಸಂತೋಷ ಪಡಿಸಲು ಲಡ್ಡು ಮತ್ತು ಮೋದಕ ಎರಡನ್ನೂ ಮಾಡಲಾಗುವುದು.

ಇಲ್ಲಿ ನಾವು ಬೆಲ್ಲ, ಕೊಬ್ಬರಿಯ ಮೋದಕ ರೆಸಿಪಿ ನೀಡಿದ್ದೇವೆ ನೋಡಿ:

Coconut Jaggery Modak Recipe

ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು 2 ಬಟ್ಟಲು
ಮೈದಾ ಹಿಟ್ಟು 1 ದೊಡ್ಡ ಚಮಚ
ಬೆಲ್ಲ 1 ಬಟ್ಟಲು
ತುರಿದ ಕೊಬ್ಬರಿ 1 ಬಟ್ಟಲು
ಏಲಕ್ಕಿ ಪುಡಿ
ಚಿಟಿಕೆಯಷ್ಟು ತುಪ್ಪ

ತಯಾರಿಸುವ ವಿಧಾನ:

* ಮೊದಲಿಗೆ ಪುಡಿ ಮಾಡಿದ ಬೆಲ್ಲ , ಏಲಕ್ಕಿ ಮತ್ತು ತುರಿದ ಹಸಿ ಕೊಬ್ಬರಿಯನ್ನು ಒಟ್ಟಿಗೆ ಸೇರಿಸಿ ಬಾಣಲೆಯಲ್ಲಿ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಬೇಕು( ಸೌಟ್ ನಿಂದ ಆಡಿಸುತ್ತಾ ಬಿಸಿ ಮಾಡಿ).

* ಬೆಲ್ಲ ಕಾದು ನೀರಾಗಿ ಬೆಲ್ಲ ಮತ್ತು ಕೊಬ್ಬರಿಯ ಹೂರಣ ರೆಡಿಯಾಗುತ್ತದೆ. ಬೆಲ್ಲ ಕೊಬ್ಬರಿ ಮಿಶ್ರವಾಗಿ ಅಂಟು-ಅಂಟಾಗುವಾಗ ಉರಿಯಿಂದ ಇಳಿಸಬೇಕು.

* ನಂತರ ಗೋಧಿ ಹಿಟ್ಟನ್ನು ಮೈದಾ ಹಿಟ್ಟಿನ ಜೊತೆ ಸೇರಿಸಿ ಸ್ವಲ್ಪ ಗಟ್ಟಿಯಿರುವಂತೆ ತುಪ್ಪ ಮತ್ತು ನೀರಿನೊಡನೆ ನಾದಿಕೊಳ್ಳಬೇಕು. ಕಲೆಸಿದ ಹಿಟ್ಟು ಚಪಾತಿ ಹಿಟ್ಟಿನಷ್ಟು ಗಟ್ಟಿಯಾಗಿರಬೇಕು.

* ಈಗ, ಹಿಟ್ಟನ್ನು ಕೈಯಲ್ಲಿ ಒಂದು ಉಂಡೆಯಷ್ಟು ತೆಗೆದುಕೊಂಡು ಪೂರಿಯ ಗಾತ್ರದಲ್ಲಿ ತಟ್ಟಿ ಅದರಲ್ಲಿ ಸ್ವಲ್ಪ ಬೆಲ್ಲ ಕೊಬ್ಬರಿ ಹೂರಣವನ್ನು ತುಂಬಿ ಅದರ ಮೇಲ್ತುದಿಯನ್ನು ಮುಚ್ಚಬೇಕು. (ಮೋದಕ ನೋಡಲು ಬೆಳ್ಳುಳ್ಳಿಯ ಆಕಾರದಲ್ಲಿರುವಂತೆ ತುದಿಯನ್ನು ಮುಚ್ಚಿ).

* ಈ ರೀತಿ ಎಂಟ್ಹತ್ತು ಮೋದಕಗಳನ್ನು ರೆಡಿಯಾಗಿಟ್ಟುಕೊಂಡು ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಕರಿಯಿರಿ.
ಇಷ್ಟು ಮಾಡಿದರೆ ಲಂಬೋದರನಿಗೆ ಪ್ರಿಯವಾದ ಮೋದಕ ರೆಡಿ.

English summary

Coconut Jaggery Modak Recipe

A modak recipe is also one of the essentials in many Hindu religious ceremonies like Ganesh Chaturthi. A modak can be of various flavours. But here we will make a coconut jaggery modak using a very plain and simple modak recipe.
X
Desktop Bottom Promotion