For Quick Alerts
ALLOW NOTIFICATIONS  
For Daily Alerts

ಹಬ್ಬದ ಕಳೆಹೆಚ್ಚಿಸುವ ರುಚಿಯಾದ ತೆಂಗಿನಕಾಯಿ ಬರ್ಫಿ

|

ಹಬ್ಬಗಳು ಒಂದರ ಮೇಲೊಂದರಂತೆ ಆಗಮಿಸುತ್ತಿವೆ. ಹಬ್ಬಗಳೊಂದಿಗೆ ಆತ್ಮೀಯತೆಯನ್ನು ತೋರುವ ಅತಿಥಿಗಳು ಮತ್ತು ಸ್ನೇಹಿತರು ನಿಮ್ಮ ನಿವಾಸಕ್ಕೆ ಬಂದೇ ಬರುತ್ತಾರೆ. ಅವರು ಬಂದಾಗ ಯಾವಾಗಲೂ ಮಾಡುವ ಅಡುಗೆಯನ್ನೇ ಅವರಿಗೆ ತಯಾರಿಸಿ ಬಡಿಸುವುದು ಸೂಕ್ತವಾಗಿರುವುದಿಲ್ಲ ಹಾಗಿದ್ದರೆ ಅವರಿಗೆ ವಿಶೇಷವಾಗಿರುವ ಮತ್ತು ನಿಮ್ಮ ಹಬ್ಬದ ಕಳೆಯನ್ನು ಹೆಚ್ಚಿಸುವ ರುಚಿಕರವಾದ ತಿಂಡಿಯನ್ನು ಮಾಡುವುದು ಅತೀ ಅಗತ್ಯ.

ಹಾಗಿದ್ದರೆ ಯಾವ ಖಾದ್ಯ ತಿಂಡಿಯನ್ನು ತಯಾರಿಸುವುದೆಂದು ಚಿಂತಿಸದಿರಿ. ನಿಮ್ಮ ಸ್ವಾದವನ್ನು ಪರಿಪೂರ್ಣಗೊಳಿಸುವ ಮತ್ತು ನಿಮ್ಮ ಅತಿಥಿಗಳ ಮನತಣಿಸುವ ಹಬ್ಬದ ಸಿಹಿಯಾದ ತೆಂಗಿನ ಕಾಯಿ ಬರ್ಫಿ ತಯಾರಿಯನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಸಂಪೂರ್ಣ ಆರೋಗ್ಯಕರವಾಗಿರುವ ಈ ಸಿಹಿ ನಿಮ್ಮ ಬೇಕರಿ ತಿಂಡಿಗಿಂತಲೂ ಅತ್ಯದ್ಭುತ ಸ್ವಾದವನ್ನು ರುಚಿಯನ್ನು ಉಣಬಡಿಸುತ್ತದೆ.

ಹದವಾಗಿ ಹುರಿದ ತೆಂಗಿನ ಕಾಯಿ ಅದಕ್ಕೆ ಬೆರೆಸುವ ಏಲಕ್ಕಿಯ ಸುಗಂಧ, ಗೋಡಂಬಿಯ ಅಲಂಕಾರ ಹೀಗೆ ಹಬ್ಬದ ಕಳೆಯನ್ನು ಹೆಚ್ಚಿಸುವ ಮತ್ತು ನಿಮ್ಮ ಬಾಯಿ ರುಚಿಯನ್ನು ಎಲ್ಲೆ ಮೀರಿಸುವ ಈ ತೆಂಗಿನ ಕಾಯಿ ಬರ್ಫಿ ಆರೋಗ್ಯಕ್ಕೂ ಧನಾತ್ಮಕವಾಗಿ ಉತ್ತಮವಾದುದು. ಕೆಳಗೆ ತೆಂಗಿನಕಾಯಿ ಬರ್ಫಿ ಮಾಡುವ ಸರಳ ವಿಧಾನವನ್ನು ನಾವು ನೀಡಿದ್ದು ಇದನ್ನು ನೀವು ನಿಮಿಷಗಳಲ್ಲಿ ತಯಾರಿಸಬಹುದಾಗಿದೆ.

Coconut Burfi Recipe For Ganesh Chaturthi

ಈ ಬಾರಿಯ ಚತುರ್ಥಿಗೆ ಕ್ಯಾರೆಟ್ ಕರ್ಜಿಕಾಯಿ ರೆಸಿಪಿ

ಪ್ರಮಾಣ: 4

*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
*ತೆಂಗಿನಕಾಯಿ ತುರಿ -3 ಕಪ್‌ಗಳು
*ಏಲಕ್ಕಿ ಪುಡಿ - 1 ಚಮಚ
*ರೋಸಿ ಸಿರಪ್ - 1 ಚಮಚ
*ತುಪ್ಪ - 3 ಚಮಚ
* ಮಂದಗೊಳಿಸಿದ ಹಾಲು - ಅರ್ಥ ಕಪ್

ಹೆಸರು ಬೇಳೆಯ ಮೋದಕ ರೆಸಿಪಿ

ಮಾಡುವ ವಿಧಾನ
1. ದೊಡ್ಡ ಉರಿಯಲ್ಲಿ ದಪ್ಪ ತಳದ ಪಾತ್ರೆಯನ್ನು ಬೆಚ್ಚಗಾಗಲು ಇಡಿ. ಇದಕ್ಕೆ ತುರಿದ ತೆಂಗಿನ ಕಾಯಿಯನ್ನು ಹಾಕಿ. ಇದನ್ನು ಚೆನ್ನಾಗಿ 5 ನಿಮಿಷದವರೆಗೆ ಹುರಿದುಕೊಳ್ಳಿ ಮತ್ತು ಅದನ್ನು ಪಕ್ಕದಲ್ಲಿ ಇಟ್ಟುಕೊಂಡಿರಿ
2. ನಂತರ ಬೇರೆಯೊಂದು ಪಾತ್ರೆಗೆ ಸ್ವಲ್ಪ ತುಪ್ಪವನ್ನು ಹಾಕಿ, ಹಾಗೂ ಅರ್ಧ ಗ್ಲಾಸ್ ಮಂದಗೊಳಿಸಿದ ಹಾಲು ಸೇರಿಸಿ ಚೆನ್ನಾಗಿ ಕುದಿಸಿ
3. ಇದೀಗ ಈ ಮಿಶ್ರಣಕ್ಕೆ ಹುರಿದ ತೆಂಗಿನ ತುರಿಯನ್ನು ಸೇರಿಸಿ ನಂತರ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಪಾತ್ರೆಗೆ ರೋಸ್ ಸಿರಪ್ ಅನ್ನು ಹುಯ್ಯಿರಿ. ಅಲ್ಲದೆ ಇದನ್ನು ಚೆನ್ನಾಗಿ ಮಿಶ್ರ ಮಾಡುತ್ತಿರಿ
4. ಸುಮಾರು 10 ರಿಂದ 15 ನಿಮಿಷಗಳ ನಂತರ, ತುಪ್ಪ ಸವರಿದ ತಟ್ಟೆಗೆ ಈ ಮಿಶ್ರಣವನ್ನು ಹಾಕಿರಿ.
7. ಈ ಪಾಕ ಚೆನ್ನಾಗಿ ತಟ್ಟೆಗೆ ಹೊಂದಿಕೊಂಡ ನಂತರ, ಇದನ್ನು ವಜ್ರದಾಕಾರದಲ್ಲಿ ಕತ್ತರಿಸಿಕೊಳ್ಳಿ.
8.ಇನ್ನು ತಟ್ಟೆಯಿಂದ ಬೇರ್ಪಡಿಸಿ 1 ಗಂಟೆಗಳ ಕಾಲ ತಂಪಾಗಿಸಿ.

ನಿಮ್ಮ ಪ್ರೀತಿಯ ಗಣೇಶನಿಗೆ ಈ ಸಿಹಿತಿಂಡಿಯ ನೈವೇದ್ಯವನ್ನು ಅರ್ಪಿಸಿ ಅಲ್ಲದೆ ನಿಮ್ಮ ಅತಿಥಿಗಳಿಗೆ ಈ ಸಿಹಿತಿಂಡಿಯ ಸವಿಯನ್ನು ಉಣಿಸಬಹುದು.

English summary

Coconut Burfi Recipe For Ganesh Chaturthi

meta You can easily prepare this burfi recipe using condensed milk. This makes the Ganesh Chaturthi recipe quick and easy. You can prepare thos dessert without too many hassles. Try out this easy coconut burfi recipe at home to welcome Lord Ganapati this year.
Story first published: Tuesday, August 19, 2014, 12:04 [IST]
X
Desktop Bottom Promotion