For Quick Alerts
ALLOW NOTIFICATIONS  
For Daily Alerts

ಎಳ್ಳು, ಕೊಬ್ಬರಿ ಹಾಕಿ ಮಾಡುವ ಲಡ್ಡು

|

ಬೆಳಕಿನ ಹಬ್ಬ ದೀಪಾವಳಿ ಹತ್ತಿರವಾಗುತ್ತಿದೆ, ಈಗಾಗಲೇ ದೀಪಾವಳಿ ಹಬ್ಬಕ್ಕೆ ಮನೆಯಲ್ಲಿ ಸಿದ್ಧತೆ ನಡೆಯುತ್ತಿರುತ್ತದೆ. ಶಾಪಿಂಗ್ ಎಲ್ಲಿ ಮಾಡಬೇಕು , ಈ ದೀಪಾವಳಿಗೆ ಮನೆಗೆ ಯಾವ ವಸ್ತುಗಳನ್ನು ತರಬೇಕು, ಇವುಗಳ ಬಗ್ಗೆ ಈಗಾಗಲೇ ಪ್ಲಾನ್ ರೆಡಿಯಾಗಿರುತ್ತದೆ ಅಲ್ವಾ?

ಅದೇ ರೀತಿ ಈ ದೀಪಾವಳಿಗೆ ಬಗೆ-ಬಗೆಯ ಸಿಹಿ ತಿಂಡಿ ಮಾಡಬೇಕೆಂಬ ಪ್ಲಾನ್ ಕೂಡ ಇದ್ದೇ ಇರುತ್ತದೆ, ಹಬ್ಬದಲ್ಲಿ ಲಡ್ಡು ಮಾಡಬೇಕೆಂದು ಬಯಸುವುದಾದರೆ ಈ ಸರಳವಾದ ಲಡ್ಡು ಟ್ರೈ ಮಾಡಬಹುದು:

Churma Ladoo For Dewali

ಬೇಕಾಗುವ ಸಾಮಾಗ್ರಿಗಳು
ಕಡಲೆ ಹಿಟ್ಟು 3 ಕಪ್
ಎಳ್ಳು 4-5 ಚಮಚ ಸ್ಪೂನ್
ತೆಂಗಿನ ತುರಿ 1 ಕಪ್
ಬೆಲ್ಲ ಒಂದೂವರೆ ಕಪ್
8-9 ಟೇಬಲ್ ಸ್ಪೂನ್ ತುಪ್ಪ
ಸ್ವಲ್ಪ ಗೋಡಂಬಿ

ಮಾಡುವ ವಿಧಾನ:

* ದೊಡ್ಡ ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತರಿ ತರಿಯಾಗಿರಲಿ.

* ಈಗ 2 ಟೇಬಲ್ ಸ್ಪೂನ್ ಅನ್ನು ಪ್ಯಾನ್ ಗೆ ಹಾಕಿ ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ, ತುಪ್ಪ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಫ್ರೈ ಮಾಡಿ, ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಅದೇ ಪ್ಯಾನ್ ಗೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಕಡಿಮೆ ಉರಿಯಲ್ಲಿ 4-5 ನಿಮಿಷ ಫ್ರೈ ಮಾಡಿ. ನಂತರ ಅದನ್ನು ತೆಗೆದು ಮತ್ತೊಂದು ಬಟ್ಟಲಿನಲ್ಲಿ ಇಡಿ.

* ನಂತರ ಉಳಿದ ತುಪ್ಪವನ್ನು ಪ್ಯಾನ್ ಗೆ ಹಾಕಿ ಅದಕ್ಕೆ ಬೆಲ್ಲ ಹಾಕಿ 2 ನಿಮಿಷ ಬಿಸಿ ಮಾಡಿ ಮತ್ತು ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ.

* ಈಗ ಫ್ರೈ ಮಾಡಿಟ್ಟ ಹಿಟ್ಟು ಮತ್ತು ಎಳ್ಳು, ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಉರಿಯಿಂದ ಇಳಿಸಿ.

* ನಂತರ ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿ, ನಂತರ ಅದನ್ನು ಗೋಡಂಬಿಯಿಂದ ಅಲಂಕರಿಸಿದರೆ ರುಚಿಯಾದ ಲಡ್ಡು ಸವಿಯಲು ರೆಡಿ.

English summary

Churma Ladoo For Dewali

The main ingredients of this Indian sweets recipe is wheat flour, coconut, jaggery, sesame and ghee. And another good part of making a churma ladoo is that it requires a very little time. Here is a simple ladoo recipe for making delicious ladoos at home.
X
Desktop Bottom Promotion