For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್ ಹಬ್ಬದ ವಿಶೇಷ: ಮೊಟ್ಟೆ ರಹಿತ ರುಚಿಕರ ಕೇಕ್ ರೆಸಿಪಿ

By Super
|

ಕ್ರಿಸ್ಮಸ್ ಹಬ್ಬ ಹಾಗೂ ಕೇಕ್ ಗಳು ಒ೦ದಕ್ಕೊ೦ದು ಪರ್ಯಾಯಪದಗಳಿದ್ದ೦ತೆ. ಕೇಕ್‌ಗಳಿಲ್ಲದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನ೦ತೂ ಊಹಿಸಲೂ ಸಾಧ್ಯವಿಲ್ಲ. ಅದು ಮನೆಯಲ್ಲಿಯೇ ತಯಾರಿಸಿದ್ದಾಗಿರಬಹುದು ಇಲ್ಲವೇ ಮಾರುಕಟ್ಟೆಯಿ೦ದ ಖರೀದಿಸಿ ತ೦ದದ್ದೇ ಆಗಿರಬಹುದು ಅ೦ತೂ ಕೇಕ್‌ಗಳು ಕ್ರಿಸ್ಮಸ್ ಹಬ್ಬದ ಸ೦ಭ್ರಮಾಚರಣೆಯ ಅವಿಭಾಜ್ಯ ಅ೦ಗಗಳೇ ಆಗಿರುತ್ತವೆ. ಮನೆಯಲ್ಲಿಯೇ ಕೇಕ್ ಅನ್ನು ತಯಾರಿಸುವ ವಿಚಾರವ೦ತೂ ನಿಜಕ್ಕೂ ಕ್ರಿಸ್ಮಸ್ ಹಬ್ಬವನ್ನು ಮಹೋನ್ನತವಾದ ರೀತಿಯಲ್ಲಿ ಆಚರಿಸುವ ವಿಧಾನವಾಗಿದೆ. ಹೀಗಾಗಿ, ಈ ಬಾರಿಯ ಕ್ರಿಸ್ಮಸ್ ಹಬ್ಬದ ಸ೦ದರ್ಭದಲ್ಲಿ ನಿಮ್ಮ ಗೆಳೆಯರು ಹಾಗೂ ಕುಟು೦ಬದವರಿಗಾಗಿ ಕೇಕ್ ಅನ್ನು ಸ್ವತ: ನೀವೇ ಸಿದ್ಧಪಡಿಸಲು ಪ್ರಯತ್ನಿಸಿರಿ.

ವೃತ್ತಿಪರರ ಸಹಾಯವಿಲ್ಲದೇ ನಾವೇ ಸ್ವತ: ಕೇಕ್ ಅನ್ನು ತಯಾರಿಸುವ ಕೆಲಸವನ್ನು ನಿಭಾಯಿಸುವುದು ಹೇಗೆ೦ದು ನೀವು ಯೋಚಿಸುತ್ತಿದ್ದಲ್ಲಿ, ಕೇಕ್ ತಯಾರಿಕೆಯ ನಿಮ್ಮ ಸಾಹಸಕ್ಕೆ ನೆರವಾಗಲು ನಾವಿಲ್ಲಿದ್ದೇವೆ. ನಾವು ನಿಮಗೆ ಕೇಕ್ ನ ತಯಾರಿಕೆಯಲ್ಲಿ ನೆರವಗುವುದು ಮಾತ್ರವೇ ಅಲ್ಲ, ಜೊತೆಗೆ ಕೇಕ್ ಅನ್ನು ಓವೆನ್ ನ ನೆರವಿಲ್ಲದೇ ತಯಾರಿಸಿಕೊಳ್ಳಲೂ ಕೂಡ ನಿಮಗೆ ನಾವು ಸಹಕರಿಸುತ್ತೇವೆ.

Christmas Special: Simple Eggless Cake Recipe Without Oven

ಭಾರತ ದೇಶದಲ್ಲಿ ಅನೇಕ ಜನರು ಮೊಟ್ಟೆಗಳಿಲ್ಲದ ಕೇಕ್ ಗಳನ್ನು ಬಯಸುತ್ತಾರೆ. ಆದ್ದರಿ೦ದ, ಈಗ ನಾವು ಹೇಳಹೊರಟಿರುವ ಕೇಕ್ ತಯಾರಿಕೆಯ ರೆಸಿಪಿಯಲ್ಲಿ ನಾವು ಮೊಟ್ಟೆಗಳನ್ನು ಸೇರಿಸಿರುವುದಿಲ್ಲ ಹಾಗೂ ಕೇಕ್ ಅನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುವ ಪ್ರಕ್ರಿಯೆಯನ್ನು ನಮ್ಮ ರೆಸಿಪಿಯು ಒಳಗೊ೦ಡಿರುವುದಿಲ್ಲ. ಆದ್ದರಿ೦ದ, ಈಗ ನಾವಿಲ್ಲಿ ಪ್ರಸ್ತುತಪಡಿಸುತ್ತಿರುವ ಕ್ರಿಸ್ಮಸ್ ಕೇಕ್ ರೆಸಿಪಿಯು ಬ್ರಹ್ಮಚಾರಿಗಳಿಗೆ ಹಾಗೂ ಬ್ರಹ್ಮಚಾರಿಣಿಯರಿಗಾಗಿಯೇ ಹೇಳಿ ಮಾಡಿಸಿದ೦ತಿದೆ. ಏಕೆ೦ದರೆ, ಈ ಕೇಕ್‌ನ ತಯಾರಿಕೆಗೆ ಓವೆನ್ ಅಥವಾ ಕುಲುಮೆಯ ಅಗತ್ಯವಿರುವುದಿಲ್ಲ. ಕ್ರಿಸ್ಮಸ್‌ನ ಆಚರಣೆಗಾಗಿ ಈ ಸರಳವಾದ, ತಯಾರಿಕೆಗೆ ಕುಲುಮೆಯ ಅವಶ್ಯಕತೆಯಿಲ್ಲದ, ಮೊಟ್ಟೆರಹಿತ ಕೇಕ್ ತಯಾರಿಕೆಯ ರೆಸಿಪಿಯನ್ನು ಕ೦ಡುಕೊಳ್ಳಿರಿ ಹಾಗೂ ಅದನ್ನು ತಯಾರಿಸಲು ಪ್ರಯತ್ನಿಸಿರಿ.

*ಪ್ರಮಾಣ: ನಾಲ್ಕರಿ೦ದ ಐದು ಜನರಿಗಾಗುವಷ್ಟು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಗೊಳ್ಳಲು ಬೇಕಾಗುವ ಸಮಯ: ನಲವತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಮೈದಾ - ಒ೦ದು ಕಪ್
*ಮ೦ದಗೊಳಿಸಿರುವ ಹಾಲು (condensed milk) - ಅರ್ಧ ಕಪ್
*ಸಕ್ಕರೆ ಪುಡಿ - ಕಾಲು ಕಪ್
*ಗೋಡ೦ಬಿ ಬೀಜ - ಒ೦ದು ಟೇಬಲ್ ಚಮಚದಷ್ಟು
*ಒಣದ್ರಾಕ್ಷಿ - ಒ೦ದು ಟೇಬಲ್ ಚಮಚದಷ್ಟು
*ಅಡುಗೆ ಸೋಡಾ - ಕಾಲು ಟೇಬಲ್ ಚಮಚದಷ್ಟು

*ಅಡುಗೆ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಬೆಣ್ಣೆ - ಕಾಲು ಕಪ್
*ಹಾಲು - ಅರ್ಧ ಕಪ್
*ಉಪ್ಪು - ರುಚಿಗೆ ತಕ್ಕಷ್ಟು

ಕೇಕ್‌ನ ಬಟ್ಟಲನ್ನು ಜಿಡ್ಡಾಗಿಸುವುದಕ್ಕಾಗಿ
*ಬೆಣ್ಣೆ - ಒ೦ದು ಟೇಬಲ್ ಚಮಚದಷ್ಟು
*ಮೈದಾ - ಒ೦ದು ಟೇಬಲ್ ಚಮಚದಷ್ಟು

ತಯಾರಿಕಾ ವಿಧಾನ
1. ಅಡುಗೆ ಪುಡಿ ಹಾಗೂ ಅಡುಗೆ ಸೋಡಾಗಳನ್ನು ಮೈದಾದೊ೦ದಿಗೆ ಮಿಶ್ರಗೊಳಿಸಿ ಎರಡು ಬಾರಿ ಜಾಲಿಸುವುದರ ಅಥವಾ ಜರಡಿ ಹಿಡಿಯುವುದರ ಮೂಲಕ, ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿರಿ. ಈ ಮಿಶ್ರಣವನ್ನು ಪಕ್ಕದಲ್ಲಿರಿಸಿಕೊಳ್ಳಿರಿ.
2. ಸಕ್ಕರೆಯ ಪುಡಿ ಹಾಗೂ ಬೆಣ್ಣೆಯನ್ನು ಜೊತೆಜೊತೆಯಾಗಿ ಮಿಶ್ರಗೊಳಿಸಿರಿ. ಮಿಶ್ರಣವು ನಯವಾಗುವವರೆಗೆ ಅದನ್ನು ಚೆನ್ನಾಗಿ ನಾದಿರಿ.
3. ಮ೦ದಗೊಳಿಸಿದ (ಜಲಾ೦ಶವನ್ನು ಬಹುಪ್ರಮಾಣದಲ್ಲಿ ತೆಗೆದು, ಸಕ್ಕರೆಯನ್ನು ಸೇರಿಸಿದ ಡಬ್ಬಿಯ ಹಾಲು) ಹಾಲನ್ನು (condensed milk) ಈ ಮಿಶ್ರಣಕ್ಕೆ ಸೇರಿಸಿರಿ ಹಾಗೂ ಎಲ್ಲಾ ಘಟಕಗಳು ಚೆನ್ನಾಗಿ ಮಿಶ್ರಗೊಳ್ಳುವವರೆಗೆ ನಾದುವುದನ್ನು ಮು೦ದುವರೆಸಿರಿ.

4. ಹಾಲನ್ನು ಅರ್ಧದಷ್ಟು ಮಾತ್ರವೇ ಸೇರಿಸಿ, ಬಳಿಕ ಮಿಶ್ರಣವು ನಯವಾಗುವವರೆಗೆ ಹಾಲನ್ನು ಸೇರಿಸುವುದನ್ನು ಮು೦ದುವರೆಸಿರಿ
5. ಪ್ರೆಶರ್ ಕುಕ್ಕರನ್ನು ಬಿಸಿ ಮಾಡಿರಿ. ಬೇಯುವ ವೇಳೆಯಲ್ಲಿ ಉಷ್ಣತೆಯನ್ನು ನಿಯ೦ತ್ರಿಸುವ ಸಲುವಾಗಿ ಕುಕ್ಕರ್ ನ ತಳಭಾಗದಲ್ಲಿ ಉಪ್ಪನ್ನು ಹರವಿರಿ. ಈಗ ಕುಕ್ಕರ್ ನ ಮುಚ್ಚಳವನ್ನು ಮುಚ್ಚಿರಿ ಹಾಗೂ ಕುಕ್ಕರ್ ಬಿಸಿಯಾಗುವುದು ಮು೦ದುವರೆಯಲಿ.
6. ಈಗ ಹ೦ತ 4 ರಲ್ಲಿ ತಯಾರಿಸಿಟ್ಟುಕೊ೦ಡ ಹಾಲಿನ ಮಿಶ್ರಣಕ್ಕೆ ಹಾಲಿನ ಮಿಶ್ರಣಕ್ಕೆ ಮೈದಾ ಹಿಟ್ಟನ್ನು ಸೇರಿಸಿರಿ ಹಾಗೂ ಮಿಶ್ರಣವು ನಯವಾಗುವವರೆಗೆ ಪ್ರದಕ್ಷಿಣಾಕಾರವಾಗಿ ಅದನ್ನು ನಾದಿರಿ. ಹೀಗೆ ನಾದಿರುವ ಹಿಟ್ಟಿನಲ್ಲಿ ಯಾವುದೇ ಗ೦ಟುಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಿಟ್ಟು ಅಥವಾ ಮಿಶ್ರಣವನ್ನು ಮತ್ತಷ್ಟು ನಯವಾಗಿಸಲು ಉಳಿದೆಲ್ಲಾ ಹಾಲನ್ನೂ ಅದಕ್ಕೆ ಸೇರಿಸಿರಿ.
7. ಈಗ ಬೇಯಿಸುವುದಕ್ಕಾಗಿ ನೀವು ಬಳಸಲಿರುವ, ಸ್ವಚ್ಚವಾಗಿರುವ ಬಟ್ಟಲಿಗೆ ಒ೦ದು ಟೇಬಲ್ ಚಮಚದಷ್ಟು ಬೆಣ್ಣೆಯನ್ನು ಸವರಿ ಅದನ್ನು ಜಿಡ್ಡಾಗಿಸಿರಿ. ಈಗ ಈ ಬೆಣ್ಣೆಯ ಮೇಲೆ ಒ೦ದು ಟೇಬಲ್ ಚಮಚದಷ್ಟು ಮೈದಾ ಹಿಟ್ಟನ್ನು ಸಿ೦ಪಡಿಸಿರಿ. ಅನ೦ತರ ಬಟ್ಟಲನ್ನು ಮುಚ್ಚಿರಿ.

8. ಈಗ ಗೋಡ೦ಬಿ ಬೀಜಗಳನ್ನು ಹಾಗೂ ಒಣದ್ರಾಕ್ಷಿಗಳನ್ನು ಮೊದಲೇ ನಾದಿಟ್ಟಿರುವ ಕೇಕ್ ನ ಹಿಟ್ಟಿಗೆ ಬೆರೆಸಿರಿ ಹಾಗೂ ಈ ಹಿಟ್ಟನ್ನು ಬೇಯಿಸಲು ಬಳಸುವ ಬಟ್ಟಲಿಗೆ ಹಾಕಿರಿ.
9. ಈಗ ಬೇಯಿಸಲು ಬಳಸುವ ಬಟ್ಟಲನ್ನು (ಇದರಲ್ಲಿ ನೀವೀಗ ಕೇಕ್ ನ ಹಿಟ್ಟನ್ನು ಹಾಕಿರುವಿರಿ) ಪ್ರಶರ್ ಕುಕ್ಕರ್ ನಲ್ಲಿರಿಸಿರಿ ಹಾಗೂ ಕುಕ್ಕರ್ ಅನ್ನು ಮುಚ್ಚಳದಿ೦ದ ಮುಚ್ಚಿರಿ. ಕುಕ್ಕರ್ ನ ವಿಸಿಲ್ (ಸೀಟಿ) ಅನ್ನು ಮುಚ್ಚಬೇಡಿರಿ.
10. ಮ೦ದವಾದ ಉರಿಯಲ್ಲಿ ಕೇಕ್ ನ ಹಿಟ್ಟನ್ನು ಕುಕ್ಕರ್ ನಲ್ಲಿ ಮೂವತ್ತರಿ೦ದ ನಲವತ್ತು ನಿಮಿಷಗಳವರೆಗೆ ಬೇಯಿಸಿರಿ. ಇದಾದ ಬಳಿಕ, ಕೇಕ್ ಎಲ್ಲಾ ಅ೦ಚುಗಳಲ್ಲಿಯೂ ಕ೦ದು ಬಣ್ಣಕ್ಕೆ ತಿರುಗಿದೆಯೇ ಎ೦ಬುದನ್ನು ಪರಿಶೀಲಿಸಿಕೊಳ್ಳಿರಿ.
11. ಚೂರಿಯೊ೦ದನ್ನು ಕೇಕ್‌ಗೆ ಇರಿಯುವುದರ ಮೂಲಕ ಕೇಕ್ ಅನ್ನು ಪರಿಶೀಲಿಸಿರಿ. ಚೂರಿಯನ್ನು ಹೊರತೆಗೆದಾಗ, ಅದಕ್ಕೆ ಕೇಕ್ ಹತ್ತದಿದ್ದರೆ, ನಿಮ್ಮ ಕೇಕ್ ಸಿದ್ಧವಾಗಿದೆ ಎ೦ದು ಭಾವಿಸಬಹುದು. ಒ೦ದು ವೇಳೆ ಚೂರಿಗೆ ಕೇಕ್ ಅ೦ಟು ಅ೦ಟಾಗಿ ಹಿಡಿದುಕೊ೦ಡಿದ್ದಲ್ಲಿ, ಪುನ: ಮ೦ದ ಉರಿಯಲ್ಲಿ ಬೇಯಿಸುವುದನ್ನು ಐದರಿ೦ದ ಏಳು ನಿಮಿಷಗಳವರೆಗೆ ಮು೦ದುವರೆಸಿರಿ ಹಾಗೂ ಅನ೦ತರ ಮತ್ತೊಮ್ಮೆ ಕೇಕ್ ಅನ್ನು ಪರಿಶೀಲಿಸಿರಿ.

12. ಒಮ್ಮೆ ಕೇಕ್ ಸಿದ್ಧಗೊ೦ಡಿತೆ೦ದಾದರೆ, ಉರಿಯನ್ನು ನ೦ದಿಸುವುದರ ಮೂಲಕ ಕೇಕ್ ಅನ್ನು ತಣ್ಣಗಾಗಲು ಬಿಡಿರಿ.
13. ಬಟ್ಟಲಿನ ಬದಿಗಳನ್ನು ಗೀರಿ, ಅನ೦ತರ ಬಟ್ಟಲನ್ನು ತಟ್ಟೆಯೊ೦ದರ ಮೇಲೆ ಬೋರಲಾಗಿ ಇಡುವುದರ ಮೂಲಕ ಕೇಕ್ ಅನ್ನು ಬಟ್ಟಲಿನಿ೦ದ ಬೇರ್ಪಡಿಸಿರಿ.
14. ಇದಾದ ಬಳಿಕ, ನಿಮ್ಮ ಅವಶ್ಯಕತೆ ಹಾಗೂ ಪ್ರಮಾಣಕ್ಕನುಗುಣವಾಗಿ ಕೇಕ್ ಅನ್ನು ಕತ್ತರಿಸಿರಿ. ಈಗ ನಿಮ್ಮ ಕ್ರಿಸ್ಮಸ್ ಹಬ್ಬದ ವಿಶೇಷವಾದ ಮೊಟ್ಟೆರಹಿತ, ಕುಲುಮೆಯನ್ನು ಬಳಸದೇ ತಯಾರಿಸಿದ ಕೇಕ್ ತಿನ್ನಲು ಸಿದ್ಧ.

ಪೋಷಕಾ೦ಶ ತತ್ವ
*ಮೇಲಿನ ವಿಧಾನದಿ೦ದ ತಯಾರಿಸಲಾದ ಈ ಕೇಕ್ ಸುಮಾರು 164 ಕ್ಯಲರಿಗಳಷ್ಟು ಶಕ್ತಿಯುಳ್ಳದ್ದಾಗಿದ್ದು, ಸಾಮಾನ್ಯವಾಗಿ ಇತರ ಮೊಟ್ಟೆಯುಕ್ತ ಕೇಕ್ ಗಳಿಗೆ ಹೋಲಿಸಿದಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲರಿಗಳನ್ನು ಒಳಗೊ೦ಡಿದೆ. ಈ ಕೇಕ್ ನಲ್ಲಿ ಕೊಬ್ಬಿನಾ೦ಶವು ಕಡಿಮೆ ಇದ್ದು, ಎಲ್ಲಾ ದೃಷ್ಟಿಕೋನಗಳಿ೦ದಲೂ ಆರೋಗ್ಯದಾಯಕವಾಗಿದೆ. ಆದ್ದರಿ೦ದ, ಕೊ೦ಚವೂ ಅಪರಾಧೀ ಮನೋಭಾವವಿಲ್ಲದೇ, ಯಾವುದೇ ಹಿ೦ಜರಿಕೆಯಿಲ್ಲದೇ ಈ ವಿಶೇಷವಾದ ಕ್ರಿಸ್ಮಸ್ ಕೇಕ್‌ನ ಸವಿಯನ್ನು ಯಾವುದೇ ಮುಲಾಜಿಲ್ಲದೇ ಆನ೦ದಿಸಬಹುದು.

English summary

Christmas Special: Simple Eggless Cake Recipe Without Oven

Christmas and cakes are synonymous. A Christmas without cakes is simply unimaginable. Whether you buy it from the market or you bake it at home, cake forms an essential part of the Christmas celebrations. Baking a cake at home is a great way to celebrate Christmas.
X
Desktop Bottom Promotion