ಚಾಕಲೇಟ್ ಚಿಪ್ಸ್ ಕೇಕ್‌ಗೆ-ಮನಸೋತು ಹೋಗುವಿರಿ!

ದೀಪಾವಳಿ ಎಂದರೆ ವಿಶೇಷವಾದ ತಿಂಡಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಬೇಕೆನಿಸುತ್ತದೆ. ಅಲ್ಲವೇ? ಆದ್ದರಿಂದ ಈ ದೀಪಾವಳಿಗೆ ಚಾಕಲೇಟ್ ಚಿಪ್ಸ್ ಕೇಕ್ ಅನ್ನು ನೀವು ಮಾಡಿ ಹಬ್ಬದ ಮೆರಗನ್ನು ನೀವೇಕೆ ಹೆಚ್ಚಿಸಬಾರದು? ಮುಂದೆ ಓದಿ....

By: vani nayak
Subscribe to Boldsky

ದೀಪಾವಳಿ ಹಬ್ಬಕ್ಕಾಗಿ, ಚಾಕಲೇಟ್ ಚಿಪ್ಸ್ ಕೇಕ್ ತಯಾರಿಸಿ ಮನೆ ಮಂದಿಗೆಲ್ಲಾ ಸರ್ಪ್ರೈಸ್ ನೀಡಿ ಏಕೆ ಸಂತೋಷಗೊಳಿಸಬಾರದು? ನೀವು ಇದನ್ನು ತಯಾರಿಸಲು ಹೆಚ್ಚಿನ ಸಮಯ ಹಾಗು ಸಾಮಗ್ರಿಗಳು ಅವಶ್ಯಕ ಎಂದು ತಿಳಿಯಬಹುದು.

ಆದರೆ, ಈ ರೆಸಿಪಿಯನ್ನು ತಯಾರಿಸುವುದು ಬಹಳ ಸುಲಭ. ಕೇಕ್ ಗಳನ್ನು ತಯಾರಿಸುವುದು ಕೇವಲ ಕ್ರಿಸ್ಮಸ್ ಸಮಯದಲ್ಲಿ ಎಂದು ಎಲ್ಲರಿಗು ತಿಳಿದಿದೆ. ಆದರೆ, ಚಾಕಲೇಟ್ ಚಿಪ್ಸ್ ಕೇಕ್ ಅನ್ನು ತಯಾರಿಸಲು ಯಾವುದೇ ಸಂದರ್ಭ ನೋಡುವ ಅವಶ್ಯಕತೆ ಇರುವುದಿಲ್ಲ. 

cake
 

ಅದರಲ್ಲೂ ದೀಪಾವಳಿ ಎಂದರೆ ವಿಶೇಷವಾದ ತಿಂಡಿ ತಿನಿಸುಗಳನ್ನು ಮನೆಯಲ್ಲಿ ತಯಾರಿಸಬೇಕೆನಿಸುತ್ತದೆ. ಅಲ್ಲವೇ? ಆದ್ದರಿಂದ ಈ ದೀಪಾವಳಿಗೆ ಚಾಕಲೇಟ್ ಚಿಪ್ಸ್ ಕೇಕ್ ಅನ್ನು ನೀವು ಮಾಡಿ ಹಬ್ಬದ ಮೆರಗನ್ನು ನೀವೇಕೆ ಹೆಚ್ಚಿಸಬಾರದು ಈ ಕೆಳಗೆ, ಈ ರೆಸಿಪಿಯನ್ನು ತಯಾರಿಸಲು ಬೇಕಾದ ಸಾಮಗ್ರಿಗಳು ಹಾಗು ಮಾಡುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ... ಮೊಟ್ಟೆರಹಿತ ಕೇಕ್: ಒಮ್ಮೆ ಮಾಡಿ, ಸವಿದು ನೋಡಿ 

ಅಳತೆ : 4 ಕಪ್ ಕೇಕ್
ಸಿದ್ಧತಾ ಸಮಯ : 20 ನಿಮಿಷಗಳು
ತಯಾರಿಸುವ ಸಮಯ: 50 ನಿಮಿಷಗಳು

ಸಾಮಗ್ರಿಗಳು
1. ವೈಟ್ ಚಾಕಲೇಟ್ - 170 ಗ್ರಾಂ (ತುಂಡರಿಸಿದ್ದು)
2. ಡಾರ್ಕ್ ಚಾಕಲೇಟ್ ಚಿಪ್ಸ್ - 50 ಗ್ರಾಂ
3. ಬೆಣ್ಣೆ - 25 ಗ್ರಾಂ
4. ಕ್ಯಾಸ್ಟರ್ ಶುಗರ್ - 70 ಗ್ರಾಂ
5. ಮೊಟ್ಟೆ - 2
6. ವೆನಿಲ್ಲಾ ಎಸ್ಸೆನ್ಸ್ - 1 ಟೀ ಚಮಚ
7. ರಿಫೈನ್ಡ್ ಫ್ಲೋರ್ - 40 ಗ್ರಾಂ
8. ಉಪ್ಪು - ಚಿಟಕಿ
9. ಕೋಕ ಪೌಡರ್ - ಉದುರಿಸುವುದಕ್ಕೆ (ಡಸ್ಟಿಂಗ್) ಜಿಲೇಬಿ ರೆಸಿಪಿ: ದೀಪಾವಳಿ ರೆಸಿಪಿ  

Cake For Diwali
 

ವಿಧಾನ
1. ಒಂದು ಬೌಲ್ ತೆಗೆದುಕೊಂಡು, ಬೆಣ್ಣೆಯನ್ನು ಹಾಕಿ. ಅದಕ್ಕೆ ಕ್ಯಾಸ್ಟರ್ ಸಕ್ಕರೆಯನ್ನು ಹಾಕಿ, ಹ್ಯಾನ್ಡ್ ಬ್ಲೆನ್ಡರ್ ಯಿಂದ ಎರಡನ್ನೂ ಚೆನ್ನಾಗಿ ಬ್ಲೆನ್ಡ್ ಮಾಡಬೇಕು.
2. ಇದಕ್ಕೆ ಕರಗಿದ ಬಿಳಿ ಚಾಕಲೇಟ್ ಬೇಕಾಗುತ್ತದೆ. ಅದಕ್ಕಾಗಿ, ಅದನ್ನು ಮೈಕ್ರೋವೇವ್ ಅವನ್ ನಲ್ಲಿ ಕರಗಿಸಿ.
3. ಈ ಮಧ್ಯೆ ಒಂದು ಮೊಟ್ಟೆಯನ್ನು ತೆಗೆದುಕೊಂಡು ಬೆಣ್ಣೆ ಮತ್ತು ಸಕ್ಕರೆಯ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ ಬೌಲ್ ಅನ್ನು ಪಕ್ಕದಲ್ಲಿರಿಸಿ.

Cake For Diwali

4. ಮೈಕ್ರೋವೇವ್ ಅವನ್ ನಲ್ಲಿ ಕರಗಿಸಿದ ಚಾಕಲೇಟ್ ಅನ್ನು ತೆಗೆದು ಕೈ ಆಡಿಸಿ ಪಕ್ಕಕ್ಕೆ ಇಡಿ.
5. ಮೊಡಲು ಸಿದ್ಧ ಪಡಿಸಿದ ಮೊಟ್ಟೆಯ ಮಿಶ್ರಣದ ಬೌಲ್ ಅನ್ನು ತೆಗೆದುಕೊಂಡು ಬ್ಲೆನ್ಡರ್ ನ ಸಹಾಯದಿಂದ ಚೆನ್ನಾಗಿ ಬ್ಲೆನ್ಡ್ ಮಾಡಬೇಕು.
6. ಈಗ ಮತ್ತೊಂದು ಮೊಟ್ಟೆಯನ್ನು ತೆಗೆದುಕೊಂಡು ಅದೇ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಬ್ಲೆನ್ಡ್ ಮಾಡಿ. ನಂತರ ಅದಕ್ಕೆ ಕರಗಿಸಿದ ಚಾಕಲೇಟ್ ಮಿಶ್ರಣವನ್ನು ಹಾಕಿ.
7. ಮತ್ತೆ ಕೈಯಿಂದ ಕೈಯಾಡಿಸಿ ವೆನಿಲ್ಲಾ ಎಸ್ಸೆನ್ಸ್ ಅನ್ನು ಹಾಕಬೇಕು.
Cake For Diwali

8. ಒಂದು ಸಣ್ಣ ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ರಿಫೈನ್ಡ್ ಫ್ಲೋರ್ ಜೊತೆಗೆ ಡಾರ್ಕ್ ಚಾಕಲೇಟ್ ಚಿಪ್ಸ್ ಅನ್ನು ಕೂಡ ಹಾಕಿ, ಮಿಶ್ರಣಕ್ಕೆ ಸೇರಿಸಿ. ಉಪ್ಪನ್ನು ಹಾಕಲು ಮರೆಯದಿರಿ.
9. ಈಗ, ಮಿಶ್ರಣಕ್ಕೆ ಸೇರಿಸಿ.
10 ನಿಮ್ಮ ಬ್ಯಾಟರ್ ಈಗ ತಯಾರು. ಒಂದು ಟ್ರೇ ತೆಗೆದುಕೊಂಡು ಬೇಕ್ ಮಾಡುವ ಕಪ್ ಗಳನ್ನು ಹಾಕಿ.
11. ಪ್ರತಿ ಕಪ್ಪಿಗೂ ಬೆಣ್ಣೆಯನ್ನು ಸವರಿ.
Cake For Diwali

12. ಕೋಕ ಪೌಡರ್ ಅನ್ನು ತೆಗೆದುಕೊಂಡು ಎಲ್ಲಾ ಕಡೆ ಉದುರಿಸಿ. ಉಳಿದಿದ್ದನ್ನು ಬೌಲ್ ನಲ್ಲಿ ಉದುರಿಸಿ. ಪ್ರತಿಯೊಂದು ಮೌಲ್ಡ್ ಅನ್ನು ಇದೇ ರೀತಿ ತಯಾರಿಸಿ.
13. ಆಗ ಮೌಲ್ಡ್ ನ ಮುಕ್ಕಾಲು ಭಾಗವನ್ನು ಬ್ಯಾಟರ್ ಯಿಂದ ತುಂಬಿಸಿ.
14. ನಿಮ್ಮ ಅವನ್ ನನ್ನು 200 ಡಿಗ್ರಿ ಶೆಲ್ಸಿಯಸ್ ಗೆ ಮೊದಲೇ ಬಿಸಿ ಮಾಡಿ ನಂತರ 14 ನಿಮಿಷಗಳ ಕಾಲ ಬೇಕ್ ಮಾಡಿ.
15. ಕೇಕ್ ತಯಾರಾದ ತಕ್ಷಣ ಅವನ್ ನಿಂದ ಹೊರಗೆ ತೆಗೆದು, 2-3 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಬೇಕು. ನಂತರ ಡಿಮೌಲ್ಡಿಂಗ್ ಸುಲಭವಾಗುತ್ತದೆ.
Cake For Diwali

16. ಈಗ, ನಿಧಾನವಾಗಿ ಮೌಲ್ಡ್ ಯಿಂದ ಹೊರಗೆ ತೆಗೆದು ಸರ್ವಿಂಗ್ ಟ್ರೇನಲ್ಲಿ ಇಡಬಹುದು. ಅಮ್ಮಾ ನನಗೆ ಚಾಕಲೇಟ್ ಕಾರ್ನ್ ಫ್ಲೇಕ್ಸ್ ಕೇಕ್ ಬೇಕು

ಇದನ್ನು ನಿಮ್ಮ ಮನೆಗೆ ಬಂದ ಅತಿಥಿಗಳಿಗೆ ಉಣಬಡಿಸಿದಾಗ, ಅವರು ಸಾಧಾರಣವಾದ ಕಪ್ ಕೇಕ್ ಎಂದೇ ತಿಳಿದುಕೊಳ್ಳುತ್ತಾರೆ. ಆದರೆ, ಅದನ್ನು ಆಸ್ವಾದಿಸಿದಾಗ ಅದರೊಳಗಿನ ಚಾಕಲೇಟ್ ನ ಮಜಾ ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಸ್ವರ್ಗಕ್ಕೆ ಮೂರೇ ಗೇಣು ಎಂದೆನಿಸುತ್ತದೆ.

English summary

Chocolate Chips Cake For Diwali

when it comes to Diwali, you want the best delicacy in your house, don't you? So, why not make chocolate chips cake this Diwali and brighten up the festivity further? Have a look at the ingredients required and the complete procedure below.
Please Wait while comments are loading...
Subscribe Newsletter