For Quick Alerts
ALLOW NOTIFICATIONS  
For Daily Alerts

ಈ ಬಾರಿಯ ಗಣೇಶ ಹಬ್ಬವನ್ನು ಮೋದಕ ತಿನಿಸಿನೊಂದಿಗೆ ಸಿಹಿಯಾಗಿಸಿ!

By Staff
|

ವಿಘ್ನ ವಿನಾಶಕ ಗಣಪನ ಹಬ್ಬ ವಿನಾಯಕ ಚತುರ್ಥಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಶುಭ ಸಮಾರಂಭವನ್ನು ಗಣಪನನ್ನೇ ನೆನೆದು ಆರಂಭಿಸುವುದು ವಾಡಿಕೆ. ಮೊದಲ ಪೂಜೆ ಗಣಪನಿಗೆ ಎಂಬುದು ಆದಿಯಿಂದಲೂ ನಡೆದು ಬಂದಿರುವ ಸಂಪ್ರದಾಯ. ಹೀಗೆ ಮೂಷಿಕ ವಾಹನ ಮೋದಕ ಪ್ರಿಯನ ಹಬ್ಬವನ್ನು ಹಿಂದೂಗಳಾದ್ಯಂತ ಸಮಸ್ತ ದೇಶದಲ್ಲಿ ಅದ್ಧೂರಿ ವೈಭವದಿಂದ ಆಚರಿಸಲಾಗುತ್ತದೆ. ಗಣಪನಿಗೆ ಸಿಹಿ ಎಂದರೆ ಪಂಚಪ್ರಾಣ ಅದರಲ್ಲೂ ಮೋದಕವೆಂದರೆ ಅಷ್ಟೇ ಪ್ರೀತಿ. ಗಣಪನಿಗೆ ನೈವೇದ್ಯವನ್ನು ಸಮರ್ಪಿಸುವಾಗ ಮೋದಕ ಪ್ರಸಾದವನ್ನು ತಯಾರಿಸುತ್ತಾರೆ. ಇದಿಲ್ಲದೆ ಗಣಪನ ಪೂಜೆ ನಡೆಯುವುದಿಲ್ಲ.

modak

ಆದ್ದರಿಂದಲೇ ಇಂದಿನ ಲೇಖನದಲ್ಲಿ ನಿಮ್ಮ ಗಣಪನ ಪೂಜೆಯನ್ನು ವಿಶಿಷ್ಟಗೊಳಿಸುವ ಒಂದು ವಿಶೇಷ ಮೋದಕ ಸಿಹಿಯೊಂದಿಗೆ ನಾವು ಬಂದಿದ್ದೇವೆ. ಚಾಕಲೇಟಿನಿಂದ ತಯಾರಿಸಲಾಗುವ ಈ ಮೋದಕ ತುಸು ವಿಭಿನ್ನ ಮತ್ತು ರುಚಿಕರವಾಗಿದೆ. ತಯಾರಿಸಲು ಕೊಂಚ ಸಮಯವನ್ನು ತೆಗೆದುಕೊಳ್ಳುವ ಈ ತಯಾರಿ ವಿಧಾನ ನಂತರ ಮೋದಕದ ಅದ್ಭುತ ರುಚಿಯನ್ನು ನಿಮಗೆ ಉಣಬಡಿಸುತ್ತದೆ. ಹಾಗಿದ್ದರೆ ನಿಮ್ಮ ಮನೆಗೆ ಬರುವ ಅತಿಥಿಗಳು ಮತ್ತು ನಿಮ್ಮ ಮನೆಯವರ ಮೆಚ್ಚುಗೆಯನ್ನು ಪಡೆದುಕೊಳ್ಳಬೇಕೆಂಬ ಉದ್ದೇಶ ನಿಮ್ಮದಾದಲ್ಲಿ ಈ ಪಾಕ ವಿಧಾನವನ್ನು ಕೈಗೆತ್ತಿಕೊಳ್ಳಿ.

ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ಪ್ರಮಾಣ: 10
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಅಕ್ಕಿ ಪುಡಿ - 1 ಕಪ್
*ಎಣ್ಣೆ - 1 ಚಮಚ
*ಉಪ್ಪು - ಚಿಟಿಕೆಯಷ್ಟು

ಸಾಮಾಗ್ರಿಗಳು
*ಚಾಕಲೇಟ್ ಸಿರಪ್ - 1/4 ಕಪ್
*ಚಾಕಲೇಟ್ ತುರಿದದ್ದು - 1/2 ಕಪ್
*ಶುಷ್ಕಗೊಳಿಸದ ಕೊಬ್ಬರಿ ತುರಿ - 3/4 ಕಪ್

ಗಣೇಶ ಚತುರ್ಥಿಗೆ 8 ಸ್ಪೆಷಲ್ ರೆಸಿಪಿ

ತಯಾರಿಸುವ ವಿಧಾನ
1. ಕುಕ್ಕರ್‌ನಲ್ಲಿ ನೀರು ಹಾಕಿ, ಜೊತೆಗೆ ಇದೇ ನೀರಿಗೆ ಉಪ್ಪು ಸ್ವಲ್ಪ ಎಣ್ಣೆ ಹಾಕಿ ಕುದಿಯಲು ಬಿಡಿ.
2. ನೀರು ಕುದಿಯುತ್ತಿದ್ದಂತೆ ಇದಕ್ಕೆ ಅಕ್ಕಿ ಹುಡಿಯನ್ನು ಸೇರಿಸಿ. ಗಂಟು ಬೀಳದಂತೆ ಚೆನ್ನಾಗಿ ಕಲಸಿ
3. ಇನ್ನು ಕುಕ್ಕರ್‌ಗೆ ಮುಚ್ಚಳ ಮುಚ್ಚಿ ಹಬೆ ಹೋಗುವಂತೆ ಮಾಡಿಕೊಳ್ಳಿ
4. ಈ ಹಂತಗಳ ನಂತರ, ಮಿಶ್ರಣವನ್ನು ಚೆನ್ನಾಗಿ ಕಲಸಿ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ತಟ್ಟೆಗೆ ಅಕ್ಕಿ ಹಿಟ್ಟನ್ನು ವರ್ಗಾಯಿಸಿಕೊಳ್ಳಿ ಇದು ತಣ್ಣಗಾದ ನಂತರ ನಿಮ್ಮ ಕೈಗಳಿಗೆ ಎಣ್ಣೆ ಹಚ್ಚಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ.
5. ಇನ್ನು ಹಿಟ್ಟನ್ನು ಸಮನಾಗಿ ಅಳತೆ ಮಾಡಿಕೊಂಡು ಎಂಟು ಭಾಗಗಳನ್ನಾಗಿ ವಿಭಾಜಿಸಿ.

ಮಾಡುವ ವಿಧಾನ
1. ತುರಿದ ತೆಂಗಿನ ಕಾಯಿ, ಚಾಕಲೇಟ್ ಸಿರಪ್, ಚಾಕಲೇಟ್ ತುರಿಯನ್ನು ಮಿಶ್ರ ಮಾಡಿಕೊಳ್ಳಿ. ಇದನ್ನು ಕೂಡ ಎಂಟು ಸಮಾನ ಭಾಗಗಳನ್ನಾಗಿ ಮಾಡಿಕೊಳ್ಳಿ.
2. ಈಗ ನಿಮ್ಮ ಕೈಗಳಿಗೆ ಎಣ್ಣೆ ಹಚ್ಚಿಕೊಂಡು ಒಂದು ಭಾಗವನ್ನು ವೃತ್ತಾಕಾರದ ಚಪ್ಟಟೆ ಆಕಾರಕ್ಕೆ ರಚಿಸಿಕೊಳ್ಳಿ. ತುದಿಗಳನ್ನು ಬೆರಳುಗಳ ಸಹಾಯದಿಂದ ತುಸು ದಪ್ಪಗೆ ಮಾಡಿಕೊಳ್ಳಿ.
3. ನಿಧಾನವಾಗಿ ಮಧ್ಯಭಾಗಕ್ಕೆ ತೆಂಗಿನ ತುರಿಯ ಒಂದು ಭಾಗವನ್ನು ಇರಿಸಿಕೊಳ್ಳಿ. ನಂತರ ಇದನ್ನು ಸಣ್ಣ ಉಂಡೆಯಂತೆ ಮಾಡಿಕೊಂಡು ತುದಿಯಲ್ಲಿ ಕೋನ್ ಆಕಾರಕ್ಕೆ ಬರುವಂತೆ ಮಾಡಿಕೊಳ್ಳಿ. ಇದು ಮೋದಕ ಆಕಾರಕ್ಕೆ ಬರಬೇಕು.
4. ಕೊನೆಯ ಹಂತದಲ್ಲಿ, ಸರಿಯಾದ ತಟ್ಟೆಯಲ್ಲಿ ಮೋದಕವನ್ನಿರಿಸಿ ಪ್ರಶ್ಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ 12 ನಿಮಿಷಗಳವರೆಗೆ ಮೋದಕ ಕುಕ್ಕರ್‌ನಲ್ಲಿ ಬೇಯಲಿ.
ನಿಮ್ಮ ಚಾಕಲೇಟ್ ಮೋದಕ ಸವಿಯಲು ಸಿದ್ಧವಾಗಿದೆ. ಈ ರುಚಿಕರ ಚಾಕಲೇಟ್ ಮೋದಕವನ್ನು ಅತಿಥಿಗಳಿಗೆ ಮನೆಮಂದಿಗೆ ನೀಡಿ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳಿ.

English summary

Celebrate Ganesh Chaturthi With Chocolate Modak

Those of you who are strictly on a weight watch, let yourself go by enjoying in this favourite sweet dish of Ganesha's. Here is how you prepare the chocolate modak sweet for the occasion of Ganesh Chaturthi.
X
Desktop Bottom Promotion