For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ ಹೆಸರು ಬೇಳೆಯ ಪಾಯಸ

|

ಈ ದಿನ ನವರಾತ್ರಿ ಸ್ಪೆಷಲ್ ಆಗಿ ಹೆಸರು ಬೇಳೆಯಿಂದ ಮಾಡುವ ಪಾಯಸವಾದರೂ, ನೆನ್ನೆ ನೀಡಿದ ಹೆಸರು ಬೇಳೆ ಪಾಯಸಕ್ಕಿಂತ ಭಿನ್ನ ರುಚಿಯ ಪಾಯಸದ ರೆಸಿಪಿ ನೀಡಿದ್ದೇವೆ. ಈ ಪಾಯಸಕ್ಕೆ ಕ್ಯಾರೆಟ್ ಹಾಕುವುದರಿಂದ ರುಚಿ ಭಿನ್ನವಾಗಿದ್ದು, ನಿಮಗೆ ಇಷ್ಟವಾಗುವುದು.

ಈ ಕ್ಯಾರೆಟ್ ಹೆಸರುಬೇಳೆಯ ಪಾಯಸ ಮಾಡ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Carrot Moong Dal Payasa

ಬೇಕಾಗುವ ಸಾಮಾಗ್ರಿಗಳು
* ಹೆಸರುಬೇಳೆ - 1 ಕಪ್
* ಕ್ಯಾರೆಟ್ - 2 (ಸಣ್ಣ ಗಾತ್ರದ್ದಾಗಿದ್ದರೆ 3-4)
* ಸಕ್ಕರೆ - 1 1/4 ಲೋಟ
* ತೆಂಗಿನಕಾಯಿ - 1/2 ಭಾಗ
* ಉಪ್ಪು - ರುಚಿಗೆ ತಕ್ಕ
* ಏಲಕ್ಕಿ ಪುಡಿ - 1 ಚಮಚ
* ದ್ರಾಕ್ಷಿ ಹಾಗೂ ಗೋಡಂಬಿ ಚೂರುಗಳು

ಮಾಡುವ ವಿಧಾನ:

* ಮೊದಲು ಕ್ಯಾರಟ್‌ ಹೆಚ್ಚಿಕೊಂಡು ಸ್ವಲ್ಪ ನೀರು ಹಾಕಿ ಅದು ಮೃದುವಾಗುವವರೆಗೆ ಬೇಯಿಸಿ.

* ಒಂದು ಲೋಟ ಹೆಸರುಬೇಳೆಗೆ ಮೂರು ಲೋಟ ನೀರು ಹಾಕಿ ಕುಕ್ಕರಿನಲ್ಲಿಟ್ಟು 2 ವಿಶಲ್ ಬರುವವರೆಗೆ ಬೇಯಿಸಬೇಕು.

* ನಂತರ ಬೇಯಿಸಿಟ್ಟ ಹೆಸರುಬೇಳೆ, ಕ್ಯಾರೆಟ್, ಉಪ್ಪು, ಸಕ್ಕರೆ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳನ್ನು ಹಾಕಿ ಬೇಕಿದ್ದರೆ ಸ್ವಲ್ಪ ನೀರನ್ನೂ ಸೇರಿಸಿ ಚೆನ್ನಾಗಿ ಕುದಿಸಬೇಕು.

* ಈಗ ತಾಜಾ ತೆಂಗಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿಸಬೇಕು.

* ಕೊನೆಯಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಒಮ್ಮೆ ಮಿಕ್ಸ್ ಮಾಡಿದರೆ ಕ್ಯಾರೆಟ್ ಹೆಸರು ಬೇಳೆಯ ಪಾಯಸ ರೆಡಿ.

English summary

Carrot Moong Dal Payasa

Today is seccond day of the Navaratri, if you are seeking for easiest payasa recipe to prepare,have a look at this carrot moong dal payasa recipe.
X
Desktop Bottom Promotion