ಈ ಬಾರಿಯ ಚತುರ್ಥಿಗೆ ಕ್ಯಾರೆಟ್ ಕರ್ಜಿಕಾಯಿ ರೆಸಿಪಿ

Posted by:
 
ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ
    ಇದನ್ನು ಹಂಚಿರಿ    ಇದನ್ನು ಟ್ವೀಟಿಸಿ    ಇದನ್ನು ಹಂಚಿರಿ ಕಾಮೆಂಟ್ಸ್   ಇ ಮೇಲ್

Carrot Karjikai Recipe
ಗಣೇಶನ ಹಬ್ಬಕ್ಕೆ ವಿಶೇಷ ತಿಂಡಿಗಳನ್ನು ಮಾಡಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ  ಆಚರಿಸುವುದು ವಾಡಿಕೆ. ಈ ಹಬ್ಬಕ್ಕೆ ಗಣೇಶನಿಗೆ ಅಂತ ಲಡ್ಡು, ಕರ್ಜಿಕಾಯಿ , ಚಕ್ಕಲಿ, ರವೆ ಉಂಡೆ ಇವುಗಳೆನೆಲ್ಲಾ ತಯಾರಿಸಲಾಗುವುದು. ಈ ಬಾರಿಯ ಹಬ್ಬಕ್ಕೆ ಬಗೆ- ಬಗೆಯ ಕರ್ಜಿಕಾಯಿ ಮಾಡುವ ವಿಧಾನ ತಿಳಿಯೋಣ. ಇಲ್ಲಿ ನಾವು ಕ್ಯಾರೆಟ್ ಕರ್ಜಿಕಾಯಿ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಪದಾರ್ಥಗಳು:

ಎರಡು ಕಪ್ ಕ್ಯಾರೆಟ್ ತುರಿ
ಒಂದು ಕಪ್ ಸಕ್ಕರೆ
4 ಏಲಕ್ಕಿ
ತುಪ್ಪ
ಎರಡು ಕಪ್ ಹಾಲು
ಸ್ವಲ್ಪ ಗೋಡಂಬಿ
ಸ್ವಲ್ಪ ದ್ರಾಕ್ಷಿ
ಮೈದಾಹಿಟ್ಟು 1 ಕಪ್
ಕಾಲು ಕಪ್ ಚಿರೋಟಿ ರವೆ
ಉಪ್ಪು
ತುಪ್ಪ
ಎಣ್ಣೆ

ತಯಾರಿಸುವ ವಿಧಾನ:

1. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ ಮತ್ತು ಚಿರೋಟಿ ರವೆ, ಚಿಟಿಕೆಯಷ್ಟು ಉಪ್ಪು, ಒಂದು ಚಮಚ ತುಪ್ಪ ಹಾಕಿ ಗಟ್ಟಿಯಾಗಿ ಕಲೆಸಿಡಬೇಕು.

2. ನಂತರ ಒಂದು ಪಾತ್ರೆಯಲ್ಲಿ ಹಾಲು ಮತ್ತು ಕ್ಯಾರೆಟ್ ಹಾಕಿ ಬೇಯಿಸಬೇಕು. ಹಾಲು ಇಂಗಿ ಮಿಶ್ರಣ ಗಟ್ಟಿಯಾದ ಬಳಿಕ
ತುಪ್ಪ, ಸಕ್ಕರೆ ಹಾಕಿ ಚೆನ್ನಾಗಿ ಕಲೆಸಬೇಕು. ಈ ಮಿಶ್ರಣ ಗಟ್ಟಿಯಾಗಿರಬೇಕು. ನಂತರ ಇದಕ್ಕೆ ಒಣದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಮಿಶ್ರಣ ಮಾಡಿ  ಇಡಬೇಕು.

3. ನಂತರ ಈ ಹಿಟ್ಟುನಿಂದ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿ ಲಟ್ಟಿಸಿ, ಅದಕ್ಕೆ ಕ್ಯಾರೆಟ್ ಮಿಶ್ರಣವನ್ನು ಹಾಕಿ ಅಂಚುಗಳನ್ನು ಗಟ್ಟಿಯಾಗಿ ಒತ್ತಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿದರೆ ಕ್ಯಾರೆಟ್ ಕರ್ಜಿಕಾಯಿ ರೆಡಿ.

English summary

Carrot Karjikai Recipe | Ganesha Chaturthi Special Recipe | ಕರ್ಜಿಕಾಯಿ ರೆಸಿಪಿ | ಗಣೇಶ ಚತುರ್ಥಿಗೆ ರೆಸಿಪಿ

This year Ganesha Festival if you want to prepare harjikai you can easily prepare so many variety of karjikai. Here we have given the recipe carrot karjikai recipe.
Story first published: Friday, September 14, 2012, 14:50 [IST]
Please Wait while comments are loading...
Subscribe Newsletter
Your Fashion Voice