For Quick Alerts
ALLOW NOTIFICATIONS  
For Daily Alerts

ಕ್ರಿಸ್ಮಸ್ ಹಬ್ಬಕ್ಕೆ ಸಾಥ್ ನೀಡುವ ಕ್ಯಾಂಡಿ ಕೇನ್ ರೆಸಿಪಿ

By Arshad
|

ವಿಶ್ವದ ಸಂಭ್ರಮದ ಕ್ರಿಸ್ಮಸ್ ಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿಬಿಟ್ಟಿದೆ. ಜಗತ್ತಿನಾದ್ಯಂತ ಭಕ್ತರು ಯೇಸುವಿನ ಜನ್ಮದಿನವನ್ನು ಆಚರಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಶುಭಸಂದರ್ಭದಲ್ಲಿ ನಿಮ್ಮ ಮನೆಯಲ್ಲಿಯೂ ವಿಶೇಷ ತಿಂಡಿಗಳು ತಯಾರಾಗುತ್ತಿವೆ. ಆದರೆ ಕ್ಯಾಂಡಿ ಕೇನ್ ಇಲ್ಲವೇ? ಚಿಂತೆ ಬೇಡ, ಇದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ.

ಕ್ರಿಸ್ಮಸ್ ಸಮಯದಲ್ಲಿ ಕ್ಯಾಂಡಿ ಕೇನ್ ಅಥವಾ ಪುಟ್ಟ ಕೊಡೆಯ ಹಿಡಿಯಂತೆ ಬಾಗಿರುವ ಸಕ್ಕರೆಯ ಕಡ್ಡಿಗಳಿಗೆ ವಿಶಿಷ್ಟ ಮಹತ್ವವಿದೆ. ಆದರೆ ಇವು ಯಾವಾಗಲೂ ಕೆಂಪು ಮತ್ತು ಬಿಳಿ ಬಣ್ಣದ್ದೇ ಆಗಿದ್ದು ತಿರುಚಿದ ಅಥವಾ ಪಟ್ಟೆಪಟ್ಟೆಯ ರೂಪದಲ್ಲಿ ಇಂಗ್ಲಿಷ್‌ ನ 'ಜೆ' ಅಕ್ಷರ ತಳೆದಿವೆ ಎಂದು ಗೊತ್ತೇ? ಇದರ ಬಿಳಿ ಬಣ್ಣ ಶಾಂತಿಯನ್ನೂ ಮತ್ತು ಕೆಂಪು ಬಣ್ಣವನ್ನು ಯೇಸುವಿನ ರಕ್ತವನ್ನೂ ಪ್ರತಿಬಿಂಬಿಸುತ್ತದೆ. ಜೆ ಅಕ್ಷರದಿಂದ ಪ್ರಾರಂಭವಾಗುವ ಜೀಸಸ್ ಅಥವಾ ಯೇಸುವಿನ ಸ್ಮರಣಾರ್ಥ ಈ ಸಕ್ಕರೆಕಡ್ಡಿಯನ್ನೂ ಜೆ ಅಕ್ಷರದಂತೆ ನಿರ್ಮಿಸಲಾಗುತ್ತದೆ. ಈ ಕಡ್ಡಿಗಳು ಕ್ರಿಸ್ಮಸ್ ಸಮಯದಲ್ಲಿ ನಮ್ಮ ಬಳಿ ಇದ್ದರೆ ಸಾಕ್ಷಾತ್ ಜೀಸಸ್ ನೇ ನಮ್ಮ ಬಳಿ ಇದ್ದು ನಮಗೆ ಬಲ ನೀಡುತ್ತಾನೆ ಮತ್ತು ನಮ್ಮನ್ನು ರಕ್ಷಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ. ಬನ್ನಿ, ಈ ರುಚಿಯಾದ ಸಕ್ಕರೆಕಡ್ಡಿಗಳನ್ನು ಮನೆಯಲ್ಲಿಯೇ ತಯಾರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳೋಣ: ಕ್ಯಾಂಡಿ ಕೇನ್‍ನ ದಂತಕಥೆಗಳಲ್ಲಿ ಯೇಸುವಿನ ಬಗ್ಗೆ ಏನನ್ನು ಹೇಳಲಾಗಿದೆ?

Candy Cane Recipe For Christmas

ಪ್ರಮಾಣ: ನಾಲ್ವರಿಗೆ ಸಾಕಾಗುವಷ್ಟು
*ಸಿದ್ಧತಾ ಸಮಯ: ನಲವತ್ತು ನಿಮಿಷಗಳೂ
*ತಯಾರಿಕಾ ಸಮಯ: ಹತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಸಕ್ಕರೆ : ನಾಲ್ಕು ಕಪ್
*ವೆನಿಲ್ಲಾ ಎಸೆನ್ಸ್: ಎರಡು ದೊಡ್ಡ ಚಮಚ
*ಕೆಂಪು ಆಹಾರಕ್ಕೆ ಬಣ್ಣ ನೀಡುವ ದ್ರವ: ಒಂದು ದೊಡ್ಡ ಚಮಚ
*ಕಾರ್ನ್ ಸಿರಪ್: ಅರ್ಧ ಚಿಕ್ಕ ಚಮಚ
*ಪೆಪ್ಪರ್ ಮಿಂಟ್ : ಒಂದು ದೊಡ್ಡ ಚಮಚ

ವಿಧಾನ:
1) ಒಂದು ಪಾತ್ರೆಯಲ್ಲಿ ಮೂರು ಕಪ್ ಸಕ್ಕರೆ, ಕಾರ್ನ್ ಸಿರಪ್ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಕಲಕಿ. ಸಕ್ಕರೆ ಪೂರ್ಣ ಕರಗಬೇಕು.
2) ಈ ನೀರನ್ನು ಕುದಿಸಿ. ಕೊಂಚ ಗಾಢವಾಗುತ್ತಲೇ ಪೆಪ್ಪರ್ ಮಿಂಟ್ ಸೇರಿಸಿ ಚೆನ್ನಾಗಿ ಕಲಕಿ
3) ಇದರಲ್ಲಿ ಅರ್ಧ ಪ್ರಮಾಣವನ್ನು ಒಂದು ಸಿಲಿಕಾನ್ ಪದರದ ಮೇಲೆ ಹರದಿ. ಉಳಿದ ಅರ್ಧಕ್ಕೆ ಕೆಂಪು ಬಣ್ಣವನ್ನು ಸೇರಿಸಿ ಕಲಸುವುದನ್ನು ಮುಂದುವರೆಸಿ
4) ಈಗ ಸಿಲಿಕಾನ್ ಪದರದ ಮೇಲೆ ಹರಡಿದ್ದ ಬಿಳಿಭಾಗವನ್ನು ಓವನ್ ನಲ್ಲಿ ಐವತ್ತು ಡಿಗ್ರಿ ತಾಪಮಾನದಲ್ಲಿ ಹತ್ತು ನಿಮಿಷ ಇರಿಸಿ ಹೊರತೆಗೆಯಿರಿ.
5) ಈ ಪದರವನ್ನು ಕೊಂಚ ತಣಿದ ಬಳಿಕ ಚಪಾತಿಹಿಟ್ಟಿನಂತೆ ಕಲಸಿ ನಂತರ ಒಂದು ಉರುಳೆಯಾಗಿಸಿ ಮತ್ತೊಮ್ಮೆ ಅವನ್ ನಲ್ಲಿ ಕೊಂಚ ಹೊತ್ತು ಬಿಸಿಮಾಡಿ.
6) ಇದೇ ರೀತಿ ಕೆಂಪು ಬಣ್ಣವನ್ನೂ ಅವನ್ ನಲ್ಲಿ ಬಿಸಿಮಾಡಿ ಇನ್ನೊಂದು ಉರುಳೆ ತಯಾರಿಸಿ.
7) ಎರಡೂ ಉರುಳೆಗಳನ್ನು ಪರೀಕ್ಷಿಸಿ. ಇದು ಗಟ್ಟಿ ಎನಿಸಿದರೆ ಇನ್ನೂ ಕೊಂಚ ಹೊತ್ತು ಓವನ್‌ನಲ್ಲಿರಿಸಬಹುದು.
8) ಬಳಿಕ ಎರಡೂ ಉರುಳೆಗಳನ್ನು ಪಕ್ಕಪಕ್ಕದಲ್ಲಿಟ್ಟು ನಾಲ್ಕು ಸಮಭಾಗ ಮಾಡಿ.
9) ನಿಮ್ಮ ಅಭಿರುಚಿಗೆ ತಕ್ಕಂತೆ ಬಿಳಿ ಮತ್ತು ಕೆಂಪು ಬಣ್ಣದ ವಿನ್ಯಾಸ ಬರುವಂತೆ ಎರಡೂ ಉರುಳೆಗಳನ್ನು ಒಂದರ ಮೇಲೊಂದಿಟ್ಟು ಲಟ್ಟಿಸಿ ಬಳಿಕ ಚಿಕ್ಕದಾಗಿ ಕತ್ತರಿಸಿ. ಬಳಿಕ ಪ್ರತಿ ಭಾಗವನ್ನು ತಿರುಚಿ ಬಳಿಕ ಜೆ ಅಕ್ಷರದ ರೂಪ ನೀಡಿ
10) ಬಳಿಕ ಒಣಗಲು ಬಿಡಿ. ಗಟ್ಟಿಯಾದ ಬಳಿಕ ಈ ಸಕ್ಕರೆ ಕಡ್ಡಿ ನಿಮ್ಮ ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರ ಸಿಹಿ ನಿಮ್ಮ ಜೀವನವನ್ನು ಇನ್ನಷ್ಟು ಸಿಹಿಯಾಗಲು ಸಹಕರಿಸುತ್ತದೆ.

English summary

Candy Cane Recipe For Christmas

We are just two days away from celebrating the most joyous festival that is Christmas. It is that time of the year when the entire world comes together to celebrate the birthday of the Lord Jesus Christ. So, on this very special occasion, we shall share with you one of the important recipes for Christmas, that is the candy cane.
X
Desktop Bottom Promotion