For Quick Alerts
ALLOW NOTIFICATIONS  
For Daily Alerts

ಹಬ್ಬದ ಅಡುಗೆ-ಗೋಧಿ ನುಚ್ಚಿನ ಪಾಯಸ

By ಪಲ್ಲವಿ ಧನ್ ರಾಜ್
|

ಗಣೇಶ ಹಬ್ಬ ಸಮೀಪಿಸುತ್ತಿದೆ. ಈಗಾಗಲೇ ಹಬ್ಬಕ್ಕೆ ಯಾವೆಲ್ಲಾ ಬಗೆಯ ಅಡುಗೆಗಳನ್ನು ಮಾಡಬೇಕೆಂದು ಲಿಸ್ಟ್ ರೆಡಿ ಮಾಡಿದ್ದೀರಿ ತಾನೆ? ಇಲ್ಲ ಅಂದರೆ ಇವತ್ತೇ ಲಿಸ್ಟ್ ಮಾಡಿ ಇಡಿ, ಇಲ್ಲದಿದ್ದರೆ ಹಬ್ಬದ ದಿನ ಯಾವುದೋ ಒಂದು ಅಡುಗೆ ಮಾಡಲು ಹೋಗುತ್ತೇವೆ, ಆದರೆ ಆ ಅಡುಗೆಗೆ ಪ್ರಮುಖವಾಗಿ ಬಳಸುವ ಯಾವುದೋ ಒಂದು ಪದಾರ್ಥಗಳನ್ನು ತರಲು ಮರೆತ್ತಿರುತ್ತೇವೆ, ಅದನ್ನು ತರಲು ಮನೆಯಲ್ಲಿ ಮಕ್ಕಳನ್ನೋ ಅಥವಾ ಗಂಡನನ್ನೋ ಕೇಳಬೇಕಾಗುತ್ತದೆ, ಅವೆರೆಲ್ಲಾದರೂ ತುಂಬಾ ಬ್ಯುಸಿಯಂತೆ ಪೋಸ್ ಕೊಟ್ಟರೆ ಆ ಅಡುಗೆಯನ್ನು ನಿಮ್ಮ ಹಬ್ಬದ ಅಡುಗೆಯ ಲಿಸ್ಟ್ ನಿಂದ ತೆಗೆಯಬೇಕಾಗುತ್ತದೆ. ಈ ರೀತಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಆಗುತ್ತದೆ. ಆದ್ದರಿಂದ ಮುಂಚಿತವಾಗಿಯೇ ಲಿಸ್ಟ್ ಮಾಡಿಟ್ಟು, ಅದಕ್ಕೆ ಬೇಕಾದ ಪದಾರ್ಥಗಳನ್ನು ಜೋಡಿಸುವುದು ಒಳ್ಳೆಯದು.

ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ನಿಮಗೆ ಸಹಾಯ ಮಾಡುತ್ತದೆ. ಇಲ್ಲಿ ನಾವು ಹಬ್ಬದಲ್ಲಿ ಮಾಡಬಹುದಾದ ಸರಳವಾದ ಅಡುಗೆಯ ರೆಸಿಪಿಯನ್ನು ನೀಡುತ್ತಿದ್ದೇವೆ. ಇವುಗಳು ನಿಮ್ಮ ಶ್ರಮವನ್ನು ಕಡಿಮೆ ಮಾಡುವುದು, ಇವತ್ತು ನಾವು ಗೋಧಿ ನುಚ್ಚಿನ ಪಾಯಸ ನೀಡಿದ್ದೇವೆ ನೋಡಿ:

Broken Wheat Payasa

ಗೋಧಿ ನುಚ್ಚಿನ ಪಾಯಸ (broken wheet)

ಬೇಕಾಗಿರುವ ಸಾಮಾಗ್ರಿಗಳು
ಗೋಧಿ ನುಚ್ಚು 1 ಕಪ್
ತೆಂಗಿನಕಾಯಿ ತುರಿ 1 ಕಪ್
ಬೆಲ್ಲ 11/2 ಕಪ್
ಬಾದಾಮಿ 10 ರಿಂದ12

ತಯಾರಿಸುವ ವಿಧಾನ:
ಬಾಣಲೆಯಲ್ಲಿ ಒಂದು ಕಪ್ ಗೋಧಿ ನುಚ್ಚು ಹಾಕಿ ಸ್ವಲ್ಪ ಹುರಿದು ಕೊಂಡು ಕುಕ್ಕರ್ ನಲ್ಲಿ ಹುರಿದ ನುಚ್ಚು ಮೂರು ಕಪ್ ನೀರು ಹಾಕಿ ಎರಡು ಕೂಗು ಕೂಗಿಸಿ ಬೇಯಿಸಿಕೊಳ್ಳಬೇಕು, ಮಿಕ್ಸಿಗೆ ತುರಿದ ತೆಂಗಿನ ಕಾಯಿ,ಬಾದಾಮಿ ಹಾಕಿ ನುಣ್ಣಗೆ ರುಬ್ಬಿ ಕೊಂಡು ಬೆಂದ ಗೋಧಿ ನುಚ್ಚಿಗೆ ಸೇರಿಸಿ, ಬೆಲ್ಲ ಹಾಕಿ ಕುದಿಸಿದರೆ ರುಚಿ ಮತ್ತು ಆರೋಗ್ಯಕರವಾದ ಗೋಧಿ ನುಚ್ಚಿನ ಪಾಯಸ ಸಿದ್ದ.

English summary

Broken Wheat Payasa

Do you listed recipes for Ganesh festival? If not do it today only, that will reduce your burden on festival day. Here we given the broken wheat payasa recipe. This is very easy to prepare. So you can add in your festival list.
X
Desktop Bottom Promotion