For Quick Alerts
ALLOW NOTIFICATIONS  
For Daily Alerts

ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ

By Staff
|

ಇನ್ನೇನು, ಗಣಪನ ಆಗಮನದ ದಿನ ಹತ್ತಿರ ಬಂದೇ ಬಿಟ್ಟಿದೆ. ಎಲ್ಲೆಡೆ ಸಡಗರ, ಉಲ್ಲಾಸ, ಸಂತೋಷದ ವಾತಾವರಣವಿದ್ದು ಸಿಹಿಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರೂ ಸಂತಸವನ್ನು ಹಂಚಿಕೊಳ್ಳಲಿದ್ದಾರೆ.

ಗಣೇಶನಿಗಾಗಿ ತರವೇತಾರಿ ಸಿಹಿತಿಂಡಿಗಳು ಎಲ್ಲಾ ಮನೆಯಲ್ಲಿ ತಯಾರಾಗುತ್ತವೆ. ತನ್ನ ಅತ್ಯಂತ ಇಷ್ಟದ ಸಿಹಿಯಾದ ಮೋದಕದ ಹೊರತಾಗಿಯೂ ಇತರ ಸಿಹಿತಿಂಡಿಗಳಿಗೂ ಮನಸೋಲುವ ಗಣನಾಯಕನ ಅನುಗ್ರಹ ಪಡೆಯಲು ನಿಮ್ಮ ಮನೆಯಲ್ಲಿಯೂ ಸಿಹಿತಿಂಡಿಗಳನ್ನು ಮಾಡುವವರಿದ್ದೀರಾದರೆ ಬೂಂದಿ ಲಾಡುವಿಗಿಂತ ಸಮರ್ಪಕ ಸಿಹಿ ಇನ್ನೊಂದಿಲ್ಲ.

ಬೂಂದಿ ಲಾಡು ಸವಿಯಲು ಎಷ್ಟು ಸಿಹಿಯೋ, ತಯಾರಿಸಲೂ ಅಷ್ಟೇ ಸುಲಭ. ಏಕೆಂದರೆ ಇದಕ್ಕೆ ಆಗತ್ಯವಿರುವ ಸಾಮಾಗ್ರಿಗಳ ಪಟ್ಟಿ ಅತಿ ಚಿಕ್ಕದು. ಆದರೆ ಇದನ್ನು ತಯಾರಿಸಲು ಬೂಂದಿಯ ಚಿಕ್ಕ ಉಂಡೆಗಳನ್ನು, ಬಳಿಕ ಆ ಚಿಕ್ಕ ಉಂಡೆಗಳನ್ನು ಗೋಲಾಕಾರದ ಲಾಡುವನ್ನಾಗಿಸಲು ಮಾತ್ರ ಕೊಂಚ ಕೌಶಲ್ಯ ಅಗತ್ಯ. ಆದರೆ ಇದೇನೂ ಭಾರೀ ಕಷ್ಟದ ಕೆಲಸವಲ್ಲ, ಪ್ರಾರಂಭದಲ್ಲಿ ಕೊಂಚ ಸರಿಯಾಗಿ ಬರದೇ ಇದ್ದರೂ ಸ್ವಲ್ಪಹೊತ್ತಿನಲ್ಲಿಯೇ ಇದನ್ನು ತಯಾರಿಸುವ ಕೌಶಲ್ಯ ನಿಮಗೆ ಸಿದ್ಧಿಸುತ್ತದೆ.

boondi laddu

ಕೆಳಗೆ ನೀಡಿರುವ ವೀಡಿಯೋ ಪಾಠವನ್ನು ಗಮನವಿಟ್ಟು ವೀಕ್ಷಿಸಿದರೆ ಈ ಕಲೆಯನ್ನು ಎಷ್ಟು ಸುಲಭವಾಗಿ ಕಲಿತುಕೊಳ್ಳಬಹುದು ಎಂದು ಅರಿವಾಗುತ್ತದೆ. ಈಗ ಲಾಡುವನ್ನು ತಯಾರಿಸುವ ವಿಧಾನವನ್ನು ಕಲಿಯೋಣ: ಸರ್ವಜನಪ್ರಿಯ ಬೂಂದಿ ಲಾಡು ರೆಸಿಪಿ

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹತ್ತು ನಿಮಿಷಗಳು
*ತಯಾರಿಕಾ ಸಮಯ: ಮೂವತ್ತು ನಿಮಿಷಗಳು

ಸಾಮಾಗ್ರಿಗಳು:
*ಕಡ್ಲೆಹಿಟ್ಟು - ಒಂದುಕಪ್
*ಸಕ್ಕರೆ: ಒಂದೂವರೆ ಕಪ್
ಹಸಿರು ಏಲಕ್ಕಿ : ಆರು
*ಕರಬೂಜದ ಬೀಜಗಳು: ಒಂದೂವರೆಯಿಂದ ಎರಡು ದೊಡ್ಡ ಚಮಚ (ಸಿಪ್ಪೆ ಸುಲಿದದ್ದು)
*ಎಣ್ಣೆ : ಒಂದು ದೊಡ್ಡಚಮಚ (ಕಡ್ಲೆಹಿಟ್ಟನ್ನು ನಾದಲು)
*ಹಸುವಿನ ತುಪ್ಪ: ಬೂಂದಿ ಹುರಿಯಲು ಸಾಕಾಗುವಷ್ಟು. (ಇದನ್ನು ಬಳಿಕ ಬೇರೆ ಕೆಲಸಗಳಿಗೂ ಬಳಸಬಹುದು) ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ವಿಧಾನ:
1) ಎರಡು ಕಪ್ ನೀರಿಗೆ ಸಕ್ಕರೆ ಹಾಕಿ ಕದಡಿ. ಬಳಿಕ ಇದನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ತಳದಲ್ಲಿ ಉಳಿದಿದ್ದ ಸಕ್ಕರೆಯೆಲ್ಲಾ ಕರಗುವಂತೆ ಮಾಡಿ. ಇದಕ್ಕೆ ಸುಮಾರು ನಾಲ್ಕರಿಂದ ಐದು ನಿಮಿಷ ತಗಲುತ್ತದೆ.
2) ಸಕ್ಕರೆ ಪಾಕ ಸಾಕಷ್ಟು ದಪ್ಪನಾಗಿದೆಯೇ ಎಂದು ಪರೀಕ್ಷಿಸಲು ಒಂದು ಚಮಚವನ್ನು ಪಾಕದಲ್ಲಿ ಅದ್ದಿ ವಾಪಾಸು ಬೀಳುವಂತೆ ಮಾಡಿ. ಇದು ನೀರಿನ ಬಿಂದುವಿನಂತೆ ಬೀಳದೇ ಜೇನಿನ ನೂಲು ಬಿದ್ದಂತೆ ಬಿದ್ದರೆ ಸಕ್ಕರೆ ಪಾಕದ ಹದ ಸರಿಯಿದೆ ಎಂದು ತಿಳಿಯಬಹುದು. ಇಲ್ಲದಿದ್ದಲ್ಲಿ ಇನ್ನೂ ಕೊಂಚ ಹೊತ್ತು ಬಿಸಿಮಾಡಬೇಕಾಗಬಹುದು.
3) ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಕರಬೂಜದ ಬೀಜ, ಏಲಕ್ಕಿ ಮತ್ತು ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಗಂಟುಗಳಿಲ್ಲದಂತೆ ಕಲಕಿ. ಇದು ಸುಮಾರು ಜೇನಿನಷ್ಟು ಘನವಾಗಿರಲಿ.
4) ಒಂದು ದಪ್ಪತಳದ ಪಾತ್ರೆಯಲ್ಲಿ ತುಪ್ಪವನ್ನು ಬಿಸಿಮಾಡಿ. ಹುರಿಯಲು ಸಾಧ್ಯವಾದಷ್ಟು ಬಿಸಿಯಾದ ಬಳಿಕ ಉರಿಯನ್ನು ಮಧ್ಯಮಕ್ಕಿಳಿಸಿ, ಬಳಿಕ ಕಡ್ಲೆಹಿಟ್ಟಿನ ದ್ರವವನ್ನು ತೂತುಗಳಿರುವ ಸೌಟಿನ ಮೂಲಕ ಚಿಕ್ಕ ಚಿಕ್ಕ ಬಿಂದುಗಳಾಗಿ ಬೀಳುವಂತೆ ಮಾಡಿ. ಸೌಟನ್ನು ಕೊಂಚವೇ ಮೇಲೆ ಕೆಳಗೆ ಆಡಿಸಿ ಬಿಂದುಗಳು ಬೀಳುವಂತೆ ಮಾಡಿ.
8) ತುಪ್ಪದಲ್ಲಿ ಈ ಬೂಂದಿಯ ಬಿಂದುಗಳನ್ನು ಸುಮಾರು ಮೂರರಿಂದ ನಾಲ್ಕು ನಿಮಿಷ ಹುರಿದು ಬಳಿಕ ತೂತುಗಳಿರುವ ಸೌಟಿನ ಮೂಲಕ ಎಣ್ಣೆಯಿಂದ ಹೊರತೆಗೆದು ಎಣ್ಣೆಯನ್ನು ಬಸಿಯಿರಿ.
5) ಈ ಬೂಂದಿಯನ್ನು ನೇರವಾಗಿ ಸಕ್ಕರೆ ಪಾಕಕ್ಕೆ ಹಾಕಿ ಅರ್ಧಗಂಟೆಯಷ್ಟು ಕಾಲ ಹೀರಿಕೊಳ್ಳಲು ಬಿಡಿ. ನಂತರ ಚಮಚದಿಂದ ನವಿರಾಗಿ ಮಿಶ್ರಣ ಮಾಡಿ.
7) ಬಳಿಕ ಕೈಗಳಿಗೆ ಕೊಂಚ ತುಪ್ಪವನ್ನು ಸವರಿಕೊಂಡು ಬೂಂದಿಯ ಚಿಕ್ಕಚಿಕ್ಕ ಉಂಡೆಗಳನ್ನಾಗಿಸಿ.
8) ಚಿಕ್ಕ ತಟ್ಟೆಯ ಅಂಚಿನಿಂದ ಪ್ರಾರಂಭಿಸಿ ನಡುವಿನವರೆಗೆ ಬರುವಂತೆ ಈ ಚಿಕ್ಕ ಉಂಡೆಗಳನ್ನು ಇಡುತ್ತಾ ಹೋಗಿ. ಉಳಿದದ್ದನ್ನು ಈ ಉಂಡೆಗಳ ಮೇಲೆ ಇಡುತ್ತಾ ಅದರಂತೆ ಚಿಕ್ಕ ಪಿರಿಮಿಡ್ಡಿನಾಕಾರದಲ್ಲಿ ಜೋಡಿಸಿ.
9) ಈ ಲಾಡುಗಳನ್ನು ಪೂಜೆಗೆ, ಬಳಿಕ ಪ್ರಸಾದದ ರೂಪದಲ್ಲಿ ಬಳಸಿ ಗಣೇಶನ ಅನುಗ್ರಹಕ್ಕೆ ಪಾತ್ರರಾಗಿ.

English summary

Boondi Ladoo Recipe: Ganesh Chaturthi Spcl

Lord Ganesha is the sweetest god of the Hindu pantheon. That is because He loves to eat sweets. Lord Ganesha's favourite is modaks. However, He has a special soft spot for ladoos as well. So if you are looking for a special Ganesh Chaturthi recipe to please Ganapati Bappa, then there cannot be anything better that boondi ladoos.
X
Desktop Bottom Promotion