For Quick Alerts
ALLOW NOTIFICATIONS  
For Daily Alerts

ದೀಪಾವಳಿ ವಿಶೇಷ: ಲಡ್ಡು ಪ್ರಿಯರಿಗೆ 'ಬಿಸ್ಕತ್ ಲಡ್ಡು' ರೆಸಿಪಿ!

ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿರುವ ಅತಿಥಿಗಳನ್ನು ಸತ್ಕಾರ ಮಾಡಲು ಸಿಹಿ ತಿನಿಸನ್ನು ತಯಾರು ಮಾಡಲೇಬೇಕು. ಹಾಗಿದ್ದರೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಬಿಸ್ಕತ್ ಲಡ್ಡು ರೆಸಿಪಿಯನ್ನು ನಾವಿಂದು ನೀಡುತ್ತಿದ್ದೇವೆ... ಮುಂದೆ ಓದಿ

By Jaya subramanya
|

ದೀಪಾವಳಿ ಎಂದರೆ ದೀಪಗಳು, ಪಟಾಕಿಗಳು, ಸಿಹಿಗಳು ಹೀಗೆ ಹಬ್ಬದ ಮೆರುಗುನ್ನು ಹೆಚ್ಚಿಸುತ್ತವೆ. ಮನೆ ಮಂದಿ ಹೊಸ
ದಿರಿಸುಗಳನ್ನು ಧರಿಸಿ ಸಂಭ್ರಮದಿಂದ ಕಾಲ ಕಳೆಯುವ ಈ ವೇಳೆಯಲ್ಲಿ ಭಕ್ಷ್ಯ ಭೋಜನಗಳು ಬೇಕೇ ಬೇಕು. ಅದರಲ್ಲೂ ಮನೆಯ ಸದಸ್ಯರಿಗೆ ಹಾಗೂ ಬಂದಿರುವ ಅತಿಥಿಗಳನ್ನು ಸತ್ಕಾರ ಮಾಡಲು ನೀವು ಸಿಹಿಗಳನ್ನು ತಯಾರು ಮಾಡಲೇಬೇಕು. ಹಾಗಿದ್ದರೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಬಿಸ್ಕತ್ ಲಡ್ಡು ರೆಸಿಪಿಯನ್ನು ನಾವಿಂದು ನೀಡುತ್ತಿದ್ದೇವೆ. ರುಚಿರುಚಿಯಾದ ಗರಿಗರಿಯಾದ ಮೈದಾ ಬಿಸ್ಕತ್

ಈ ಲಡ್ಡುವನ್ನು ತಯಾರಿಸುವುದು ಹೆಚ್ಚು ಸರಳವಾಗಿದ್ದು ಬಾಯಲ್ಲಿ ನೀರೂರಿಸುವಂತಹ ರುಚಿಯನ್ನು ಇದು ನೀಡುತ್ತದೆ. ಈ
ಲಡ್ಡುವನ್ನು ಆದಷ್ಟು ಕಡಿಮೆ ಸಮಯದಲ್ಲಿ ತಯಾರಿಸಬಹುದಾಗಿದ್ದು ರೆಸಿಪಿ ವಿಧಾನವನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಪ್ರಮಾಣ - 4
*ಸಿದ್ಧತಾ ಸಮಯ - 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ - 25 ನಿಮಿಷಗಳು ಗರಿಗರಿಯಾದ ಬಾದಾಮಿ-ಚೀಸ್ ಬಿಸ್ಕತ್

ಸಾಮಾಗ್ರಿಗಳು:
1. ಮಾರಿ ಬಿಸ್ಕತ್ - 1 ಪ್ಯಾಕೆಟ್
2. ಮಂದಗೊಳಿಸಿದ ಹಾಲು - 1/2 ಕಪ್
3. ಕೋಕಾ ಪೌಡರ್ - 4 ಚಮಚ
4. ಹಾಲು - 2 ಚಮಚ
5. ಡ್ರೈ ಫ್ರುಟ್ಸ್ (ಒಣ ಹಣ್ಣುಗಳು)- 2 ಚಮಚ
6. ರೈನ್‎ಬೊ ಸ್ಪ್ರಿಂಕ್‎ಲರ್ಸ್ (Rainbow Sprinklers) - 1 ಚಮಚ
7. ಚಾಕಲೇಟ್ - 1/2 ಪಾತ್ರೆ - (ತುರಿದದ್ದು)
8. ಕೊಕೋನಟ್ ಪೌಡರ್ (ತೆಂಗಿನಕಾಯಿ ಪೌಡರ್) - 4 ಚಮಚ ದೀಪಾವಳಿ ಹಬ್ಬಕ್ಕಾಗಿ ದಿಢೀರ್ ತಿನಿಸು-ಸಿಹಿ ಶಂಕರಪೋಳಿ

ಮಾಡುವ ವಿಧಾನ:
1. ಗ್ರೈಂಡರ್‎ನಲ್ಲಿ ಬಿಸ್ಕತ್ ಗಳನ್ನು ಹುಡಿ ಮಾಡಿಕೊಳ್ಳಿ
2. ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ 2-3 ಚಮಚಗಳಷ್ಟು ಮಂದಗೊಳಿಸಿದ ಹಾಲನ್ನು ಸೇರಿಸಿ
3. ಇನ್ನು ಕೋಕಾ ಪೌಡರ್ ಅನ್ನು ಹಾಕಿ ಮಿಶ್ರ ಮಾಡಿಕೊಳ್ಳಿ
4. ದಪ್ಪ ಮಿಶ್ರಣ ನಿಮಗೆ ದೊರೆಯುತ್ತದೆ. ಈಗ ಇದಕ್ಕೆ ಬಿಸ್ಕತ್ತಿನ ಹುಡಿಯನ್ನು ಸೇರಿಸಿಕೊಳ್ಳಿ
5. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ಈಗ, ಡ್ರೈ ಫ್ರುಟ್ಸ್ ಅನ್ನು ಇದಕ್ಕೆ ಹಾಕಿ ಮತ್ತು ಇದನ್ನು ಪಕ್ಕದಲ್ಲಿಡಿ.
6. ನಿಮಗೆ ಬೇಕಿದ್ದಲ್ಲಿ ಇದಕ್ಕೆ ಇನ್ನಷ್ಟು ಮಂದಗೊಳಿಸಿದ ಹಾಲನ್ನು ಹಾಕಿ ಮತ್ತು ಕೋಕಾ ಪೌಡರ್ ಅನ್ನು ಸೇರಿಸಿ. ಇವುಗಳು ಮಾತ್ರವೇ ಲಡ್ಡುವನ್ನು ಇನ್ನಷ್ಟು ಕ್ರೀಮಿಯರ್‎ನಂತೆ ಮಾಡುತ್ತದೆ.
7. ಪುನಃ, ನೀವು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ದಪ್ಪನೆಯ - ಸೆಮಿ ಡ್ರೈ ಮಿಶ್ರಣವನ್ನು ನೀವು ಹೊಂದಿರಬೇಕು. ಇದರ ಮೂಲಕ ಲಡ್ಡುವನ್ನು ನಿಮಗೆ ಸಿದ್ಧಮಾಡಿಕೊಳ್ಳಬಹುದಾಗಿದೆ.
8.ಈಗ, ನಿಮ್ಮ ಕೈಗಳನ್ನು ಸ್ವಲ್ಪ ತುಪ್ಪ ಹಚ್ಚಿ ಪಸೆ ಮಾಡಿಕೊಳ್ಳಿ ಮತ್ತು ಮಿಶ್ರಣದಿಂದ ಸ್ವಲ್ಪ ಭಾಗವನ್ನು ತೆಗೆದುಕೊಳ್ಳಿ.
9. ಲಡ್ಡುವನ್ನು ತಯಾರಿಸಿ ತಟ್ಟೆಯಲ್ಲಿಟ್ಟುಕೊಳ್ಳಿ.
10. ತುರಿದ ಚಾಕಲೇಟ್, ತೆಂಗಿನ ಕಾಯಿ ಪೌಡರ್ ಮತ್ತು ರೈನ್‎ಬೊ ಸ್ಪ್ರಿಂಕಲ್ಸ್ ಜೊತೆಗೆ ಲಾಡನ್ನು ಸಿಂಗರಿಸಿ
11. 10 - 12 ನಿಮಿಷಗಳ ಕಾಲ ಲಾಡನ್ನು ರೆಫ್ರಿಜರೇಟ್ ಮಾಡಿ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಬಡಿಸಿ. ಇದನ್ನು ನೋಡಿದಾಗ ಬಿಸ್ಕೆಟ್ ಲಾಡು ಎಷ್ಟು ಸುಲಭವಾಗಿ ಸಿದ್ಧಮಾಡಿಕೊಳ್ಳಬಹುದು ಅಲ್ಲವೇ? ಮಿಶ್ರಣವನ್ನು ಟ್ರೇನಲ್ಲಿ ಹರಡಿಕೊಂಡು ಅದನ್ನು ಸ್ಕ್ವೇರ್ ಅಥವಾ ಡೈಮೆಂಡ್ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಇದರಿಂದ ಬಿಸ್ಕತ್ತು ಬರ್ಫಿಯನ್ನು ತಯಾರು ಮಾಡಬಹುದಾಗಿದೆ. ಈ ದೀಪಾವಳಿಗೆ ಬಿಸ್ಕತ್ ಲಡ್ಡು ತಯಾರು ಮಾಡಿಕೊಂಡು ನಿಮ್ಮ ಮನೆಮಂದಿಯೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳಿ.

English summary

Biscuit Ladoo Recipe For Diwali

If you're looking to prepare something different to please your kids and the rest of your family members, here's the biscuit ladoo recipe you must try your hand at. Trust us, the preparation is simple and this is something that no one in your family might have had before. So, why not surprise them, right? Then, have a look at the complete recipe, below.
X
Desktop Bottom Promotion