For Quick Alerts
ALLOW NOTIFICATIONS  
For Daily Alerts

ವಿನಾಯಕ ಚತುರ್ಥಿ 2019: ವಿಘ್ನ ವಿನಾಶಕ ಗಣಪನ ಕೃಪೆಗಾಗಿ ಸಿಹಿಯಾದ ಬಾದಾಮಿ ಪೂರಿ

|

ಈಸಾಲಿನ ಗಣೇಶ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಸೆಪ್ಟೆಂಬರ್ 2ರಂದು ಎಲ್ಲರ ಮನೆಯಲ್ಲಿ ಗಣೇಶನ ಆಗಮನವಾಗಿರುತ್ತದೆ, ಇದಕ್ಕಾಗಿ ಈಗಾಗಲೇ ತಯಾರಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಗಣೇಶ ದೇವರಿಗೆ ಆಹಾರವೆಂದರೆ ತುಂಬಾ ಪ್ರೀತಿಯೆಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಇದರಿಂದಾಗಿಯೇ ಗಣೇಶ ಚತುರ್ಥಿಯ ಸಂದರ್ಭ ಮಾಡುವಂತಹ ಪಾಕಗಳಿಗೆ ವಿಶೇಷವಾದ ಮಹತ್ವವಿದೆ.

ಹಬ್ಬಗಳ ಆಚರಣೆಯಲ್ಲಿ ನಿಷ್ಟೆ ನಿಯಮಗಳು ಪ್ರಧಾನ ಪಾತ್ರವನ್ನು ವಹಿಸುವುದರಿಂದ ಹಬ್ಬಗಳನ್ನು ಆಚರಿಸುವಾಗ ತಿನಿಸಿನಿಂದ ಹಿಡಿದು ಪೂಜೆಯನ್ನು ನರವೇರಿಸುವ ವಿಧಾನವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತೇವೆ. ದೇವರ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬೇಕೆಂಬ ತುಡಿತದಿಂದಲೇ ಹಬ್ಬಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿವೆ.

ಗಣಪನಿಗೆ ನೈವೇದ್ಯ ಸಿಹಿ ತಿನಿಸಾಗಿದ್ದಲ್ಲಿ ನಾವು ಬೇಗನೇ ಗಣಪನ ಕೃಪೆಗೆ ಪಾತ್ರರಾಗುತ್ತೇವೆ. ಏಕೆಂದರೆ ಗಣಪತಿಗೆ ಸಿಹಿಯೆಂದರೆ ತುಂಬಾ ಪ್ರೀತಿ. ಆದ್ದರಿಂದಲೇ ಇಂದಿನ ಲೇಖನದಲ್ಲಿ ನಾವು ಗಣಪನ ಮೆಚ್ಚಿನ ಬಾದಾಮಿ ಪೂರಿಯೊಂದಿಗೆ ನಾವು ನಿಮ್ಮ ಬಳಿ ಬಂದಿದ್ದೇವೆ. ಹೆಚ್ಚಿನ ಸಿಹಿ ಇಲ್ಲದ ಆದರೆ ವೈವಿಧ್ಯಮಯ ರುಚಿಯಿಂದ ಕುಡಿರುವ ಈ ಬಾದಾಮಿ ಪೂರಿ ನಿಮ್ಮ ನಾಲಗೆಯ ರುಚಿಯನ್ನು ದುಪ್ಪಟ್ಟುಗೊಳಿಸುವುದು ಖಂಡಿತ.

ಹಾಗಿದ್ದರೆ ಕೆಳಗೆ ನಾವು ನೀಡಿರುವ ಬಾದಾಮಿ ಪೂರಿಯ ಸರಳ ಪಾಕ ವಿಧಾನವನ್ನು ಅರಿತುಕೊಂಡು ನಿಮ್ಮ ಮನೆಯವರು ಮತ್ತು ಆಗಮಿಸುವ ಅತಿಥಿಗಳ ಬಾಯಿಯ ರುಚಿಯನ್ನು ತಣಿಸಿ.

ಚತುರ್ಥಿ ವಿಶೇಷ; ಗಣೇಶನಿಗೆ ಪ್ರಿಯವಾದ ಬೇಸನ್ ಲಾಡು

ಪ್ರಮಾಣ: 7
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25 ನಿಮಿಷಗಳು

ಸಾಮಾಗ್ರಿಗಳು
*ಮೈದಾ - 2 1/2 ಕಪ್
*ಬಾದಾಮಿ - 1/2 ಕಪ್ (ಪೇಸ್ಟ್)
*ಸಕ್ಕರೆ - 3-1/2 ಕಪ್
*ಅಕ್ಕಿ ಪುಡಿ - 1 1/4 ಕಪ್
*ಹಾಲು - 100 ಎಮ್ಎಲ್
*ಕೇಸರಿ - 1 ಗ್ರಾಮ್
*ಏಲಕ್ಕಿ - 1 ಚಮಚ
*ತುಪ್ಪ - 25 ಎಮ್ಎಲ್
*ಎಣ್ಣೆ - 1 ಕಪ್
*ನೀರು - 1 ಕಪ್

ಮಾಡುವ ವಿಧಾನ
1. ಮೊದಲಿಗೆ ಹಿಟ್ಟನ್ನು ನಾದಲು ಪ್ರಾರಂಭಿಸಿ. ಅಕ್ಕಿ ಹಿಟ್ಟು, ಮೈದಾ, ಹಾಲು ಮತ್ತು ಬಾದಾಮಿ ಪೇಸ್ಟ್ ಅನ್ನು ನಾದಿಕೊಳ್ಳಿ.
2. ಈಗ ಪಾತ್ರೆಗೆ ಸ್ವಲ್ಪ ನೀರು ಹಾಕಿ ಕುದಿಸಿ ಇದಕ್ಕೆ ಕೇಸರಿ, ಸಕ್ಕರೆ ಮತ್ತು ಏಲಕ್ಕಿಯನ್ನು ಸೇರಿಸಿ. ನಂತರ ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳಿ.
3. ಇದಾದ ನಂತರ, ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ ಮತ್ತು ಪೂರಿ ಆಕಾರದಲ್ಲಿ ಇದನ್ನು ಲಟ್ಟಿಸಿಕೊಳ್ಳಿ.
4. ಪೂರಿಗೆ ಸ್ವಲ್ಪ ತುಪ್ಪವನ್ನು ಸವರಿಕೊಂಡು, ಒಂದರ ಮೇಲೆ ಇನ್ನೊಂದು ಇರಿಸಿಕೊಂಡು ಪದರಗಳನ್ನು ನಿರ್ಮಿಸಿಕೊಳ್ಳಿ

5. ಇದಾದ ನಂತರ, ಇವುಗಳನ್ನು ಲಟ್ಟಿಸಿ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಇದೇ ಹಂತವನ್ನು ಪುನಃ ಅನುಸರಿಸಿ. ಈ ತುಂಡುಗಳನ್ನು ವೃತ್ತಾಕಾರವಾಗಿ ಲಟ್ಟಿಸಿಕೊಳ್ಳಿ ಮತ್ತು ಚಿನ್ನದ ಬಣ್ಣಕ್ಕೆ ಬರುವವರೆಗೆ ಇದನ್ನು ಹುರಿಯಿರಿ.
6.ಇದೀಗ ಹುರಿದ ಎಲ್ಲಾ ಪೂರಿಗಳನ್ನು ಸಕ್ಕರೆ ಪಾಕದಲ್ಲಿ ಅದ್ದಿಕೊಳ್ಳಿ. 10 ನಿಮಿಷಗಳವರೆಗೆ ಇದನ್ನು ಪಾಕದಲ್ಲಿ ನೆನೆಯಲು ಬಿಡಿ. ನಂತರ ಪಾಕದಿಂದ ಇದನ್ನು ಹೊರತೆಗೆದು ತಟ್ಟೆಯಲ್ಲಿಡಿ. ನಿಮ್ಮ ಬಾದಾಮಿ ಪೂರಿ ಬಡಿಸಲು ಸಿದ್ಧವಾಗಿದೆ. ಗಣೇಶನ ಮೆಚ್ಚಿನ ಸಿಹಿ ಸವಿಯಲು ಸಿದ್ಧವಾಗಿದೆ. ಬಾದಾಮಿ ಪೂರಿಯ ಬಿಸಿ ಆರಿ ತಣ್ಣಗಾದಾಗ ಇದ ರುಚಿಯನ್ನು ಸವಿಯಿರಿ.
English summary

Badam Puri Recipe To Celebrate Ganesh Chaturthi

On the occasion of Ganesh Chaturthi, you need to celebrate it with a whole lot of sweets. With modak being the specialty of Ganesh Chaturthi, you can also try to make the yummy soft and crispy sweet delicacy, badam puri.
X
Desktop Bottom Promotion