For Quick Alerts
ALLOW NOTIFICATIONS  
For Daily Alerts

ಓಣಂ 2019 ವಿಶೇಷ: ನಾಲಿಗೆಯ ರುಚಿತಣಿಸುವ 20 ರೆಸಿಪಿ

By Staff
|

ಕೇರಳದಲ್ಲಿ ಈಗ ಓಣಂ ಹಬ್ಬದ ಕಲರವ ಆರಂಭವಾಗಿದೆ. ಓಣಂ ಎಂಬುದು ಒಂದು ಸುಗ್ಗಿ ಹಬ್ಬವಾಗಿದ್ದು, ಅಪಾರ ಶ್ರದ್ಧೆ ಮತ್ತು ಭಕ್ತಿಗಳಿಂದ ಇದನ್ನು ಆಚರಿಸಲಾಗುತ್ತದೆ. ಅದರಲ್ಲೂ ತಿಂಡಿಗಳನ್ನು ತಿನ್ನಲು ಬಯಸುವ ಭೋಜನ ಪ್ರಿಯರಿಗೆ ಓಣಂ ನಿಜಕ್ಕೂ ದೊಡ್ಡ ಹಬ್ಬವೇ, ಏಕೆಂದರೆ ಇದರಲ್ಲಿ ತಿನ್ನಲು ದೊರೆಯುವ ಊಟ-ತಿಂಡಿಗಳ ಪಟ್ಟಿಯೇ ಈ ಹಬ್ಬದ ಪ್ರಧಾನ ಆಕರ್ಷಣೆ. ಪ್ರಸಿದ್ಧವಾದ "ಓಣಸಡ್ಯ" ಅಥವಾ ಓಣಂ ದಿನದಂದು ಮಾಡುವ ವಿಶೇಷ ಊಟವನ್ನು ನೀವು ಮಿಸ್ ಮಾಡಲು ಸಾಧ್ಯವೇ ಇಲ್ಲ. ಅದರಲ್ಲೂ ನೀವು ಕೇರಳದವರಾಗಿದ್ದರೆ, ಈ ಊಟವನ್ನು ಮಾಡದೆ ಇರುವುದು ಅಸಾಧ್ಯ.

ಓಣಂ ಹಬ್ಬಕ್ಕೆ ಪಾಯಸ ಮೇಳದ ಮೆರುಗು

Onam Dishe

ಓಣಸಡ್ಯವು ಬಾಳೆಹಣ್ಣು ಚಿಪ್ಸ್, ಅವಿಯಲ್, ಪುಟ್ಟು, ಎರಿಸ್ಸೆರಿಯಿಂದ ಹಿಡಿದು ವಿಶೇಷವಾದ ಹಾಲಿನ ಪಾಯಸ ಮತ್ತು ಸಿಹಿ ತಿಂಡಿಗಳನ್ನು ಹೊಂದಿರುತ್ತದೆ. ಬಾಯಿಯಲ್ಲಿ ನೀರೂರಿಸುವಂತಹ ಈ ಎಲ್ಲಾ ತಿಂಡಿಗಳನ್ನು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತದೆ. ಆಗ ನೀವು ಕೇರಳ ಆಹಾರದ ನಿಜವಾದ ರುಚಿಯನ್ನು ಸವಿಯಬಹುದು.

ಈ ಅಡುಗೆಗಳು ಯಾವ ಪರಿ ಇರುತ್ತವೆಯೆಂದರೆ ನೀವು ಹೆಚ್ಚು ತಿಂದಿರಿ ಎಂದು ನಿಮ್ಮ ಗಮನಕ್ಕೆ ಬರುವುದಿಲ್ಲ. ನಾವು ಬೋಲ್ಡ್‌ ಸ್ಕೈಗಾಗಿ ಇಲ್ಲಿ 20 ಓಣಂ ಖಾದ್ಯಗಳ ರೆಸಿಪಿಯನ್ನು ನಿಮಗಾಗಿ ನೀಡುತ್ತಿದ್ದೇವೆ, ಬಾಯಿಯಲ್ಲಿ ನೀರೂರಿಸುವ ತಿಂದರೆ ಮತ್ತಷ್ಟು ತಿನ್ನಬೇಕೆನ್ನುವ ಈ ಖಾದ್ಯಗಳನ್ನು ನೀವು ಸಹ ಮಾಡಿ.

ಅವಿಯಲ್

ಅವಿಯಲ್

ಅವಿಯಲ್ ಎಂಬುದು ಬಗೆ ಬಗೆಯ ತರಕಾರಿಗಳು ಮತ್ತು ತೆಂಗಿನ ತುರಿಯನ್ನು ಸೇರಿಸಿ ಮಾಡುವ ಒಂದು ಬಗೆಯ ಖಾದ್ಯ. ಇದೊಂದು ಬಗೆಯ ಕೂಟು ಇದ್ದಂತೆ ಇರುವ ಖಾದ್ಯವಾಗಿದ್ದು, ಮೊಸರು, ಎಣ್ಣೆ, ಜೀರಿಗೆ ಮುಂತಾದವನ್ನೆಲ್ಲ ಬಳಸಿ ಮಾಡುತ್ತಾರೆ. ಇದು ಓಣಂಗಾಗಿ ಮಾಡಲೇ ಬೇಕಾದ ಸಾಂಪ್ರದಾಯಿಕ ಖಾದ್ಯವಾಗಿದೆ.

ಅವಿಲ್ ಮಾಡುವ ವಿಧಾನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ: ಅವಿಯಲ್ : ಹೆಸರಷ್ಟೇ ವಿಚಿತ್ರ!

ಕುಂಬಳಕಾಯಿಯ ಎರಿಸ್ಸೆರಿ

ಕುಂಬಳಕಾಯಿಯ ಎರಿಸ್ಸೆರಿ

ಇದು ಮಾಡಲು ಸುಲಭವಾದ ಒಂದು ಖಾದ್ಯ. ಇದನ್ನು ಕುಂಬಳ ಕಾಯಿ, ಅಲಸಂದೆ, ತೆಂಗಿನಕಾಯಿ ಪೇಸ್ಟ್ ಮತ್ತು ತೆಂಗಿನ ಕಾಯಿ ಎಣ್ಣೆ ಮುಂತಾದವುಗಳಿಂದ ಮಾಡುತ್ತಾರೆ. ನಮ್ಮ ಮನೆಗಳಲ್ಲಿ ಮಾಡುವ ಕುಂಬಳಕಾಯಿ ಗೊಜ್ಜು ಮತ್ತು ಪಲ್ಯದಂತಹ ತಿಂಡಿಯಿದಾದರು, ಸ್ವಲ್ಪ ಕೇರಳದ ಮಾದರಿಯ ಸ್ಪರ್ಶ ಇದಕ್ಕೆ ಬೇಕಾಗುತ್ತದೆ. ಈ ಎರಿಸ್ಸೆರಿ ಖಾದ್ಯವು ಕೇರಳದ ಅತ್ಯಂತ ಜನಪ್ರಿಯವಾದ ತಿನಿಸಾಗಿದೆ.

ಅಕ್ಕಿಯ ಪುಟ್ಟು

ಅಕ್ಕಿಯ ಪುಟ್ಟು

ಅಕ್ಕಿಯ ಪುಟ್ಟು ಓಣಂನ ಅತ್ಯಂತ ರುಚಿಕರವಾದ ಮತ್ತು ಪೋಷಕಾಂಶಗಳಿಂದ ಕೂಡಿದ ತಿಂಡಿಯಾಗಿದೆ. ಇದು ಅಕ್ಕಿಯ ಪುಡಿ ಮತ್ತು ತುರಿದ ತೆಂಗಿನ ಕಾಯಿ ಪುಡಿಯಲ್ಲಿ ಮಾಡಲಾಗುತ್ತದೆ. ಉಗಿಯಲ್ಲಿ ಬೇಯುವ ಪುಟ್ಟು, ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಈ ಓಣಂ ತಿಂಡಿಯು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದು ಮತ್ತೊಂದು ಧನಾತ್ಮಕ ಅಂಶವಾಗಿದೆ.

ಕಡಲೆ ಸಾರಿನ ಜೊತೆ ಕೇರಳದ ಪುಟ್ಟು

ಬೆಂಡೆಕಾಯಿಯ ಖಿಚಡಿ

ಬೆಂಡೆಕಾಯಿಯ ಖಿಚಡಿ

ಬೆಂಡೆಕಾಯಿಯ ಖಿಚಡಿಯು ಸಹ ಕೇರಳಿಗರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ತಿಂಡಿಯನ್ನು ಕೇರಳದವರು ಆಗಾಗ ಮಾಡಿಕೊಂಡು ಸೇವಿಸುತ್ತಿರುತ್ತಾರೆ. ಆದರೆ ಹಬ್ಬದ ಸಂದರ್ಭದಲ್ಲಿ ಅದರಲ್ಲೂ ಓಣಂನ ಸಂದರ್ಭದಲ್ಲಿ ಈ ಅಡುಗೆಗೆ ತನ್ನದೇ ಮಹತ್ವ ಬರುತ್ತದೆ. ಪ್ರತಿಯೊಬ್ಬ ಮಲೆಯಾಳಿಗಳ ಮನೆಯಲ್ಲೂ 10 ದಿನ ನಡೆಯುವ ಓಣಂ ಹಬ್ಬದಲ್ಲಿ ಈ ಬೆಂಡೆಕಾಯಿಯ ಖಿಚಡಿಯನ್ನು ಒಮ್ಮೆಯಾದರು ಮಾಡುತ್ತಾರೆ.

ಬಾಯಿಯಲ್ಲಿ ನೀರೂರಿಸುವ ರುಚಿಕರವಾದ ಬೆಂಡೆಕಾಯಿ ಪಲ್ಯ

ಬಗೆ ಬಗೆಯ ತರಕಾರಿಗಳ ಕರಿ

ಬಗೆ ಬಗೆಯ ತರಕಾರಿಗಳ ಕರಿ

ಇದೊಂದು ಬಗೆಯ ಕರ್ರಿಯಾಗಿದ್ದು, ಕೇರಳದ ಅತ್ಯಂತ ಜನಪ್ರಿಯ ಕರಿಗಳಲ್ಲಿ ಇದು ಒಂದಾಗಿದೆ. ಬಗೆ ಬಗೆಯ ತರಕಾರಿಗಳ ಸಮ್ಮಿಲನದೊಂದಿಗೆ ಮಾಡುವ ಈ ಕರಿಯು ನಿಮ್ಮ ರುಚಿ ಗ್ರಂಥಿಗಳಿಗೆ ಎಂದಿಗು ಮರೆಯಲಾಗದ ರುಚಿಯನ್ನು ನೀಡುತ್ತದೆ.

ಈರುಳ್ಳಿ ಹಾಕದ ವೆಜಿಟೆಬಲ್ ಕರಿ

ಉನ್ನಿ ಅಪ್ಪಂ

ಉನ್ನಿ ಅಪ್ಪಂ

ಉನ್ನಿ ಅಪ್ಪಂ ಓಣಂ ಹಬ್ಬದ ಅತ್ಯಂತ ಪ್ರಸಿದ್ಧ ತಿಂಡಿಯಾಗಿದೆ. ಈ ತಿಂಡಿಯನ್ನು ನಮ್ಮ ಪಡ್ಡು ಮಾಡಿದಂತೆಯೇ ಮಾಡಬೇಕು. ಮಂಗಳೂರು ಬೊಂಡಾ ಅಥವಾ ಮಂಗಳೂರು ಬನ್ ಎಂಬ ಹೆಸರಲ್ಲೂ ಸಹ ಇದನ್ನು ತಯಾರಿಸುತ್ತಾರೆ. ಅಕ್ಕಿ ಹಿಟ್ಟು, ಬಾಳೆಹಣ್ಣನ್ನು ಇದಕ್ಕೆ ಪ್ರಧಾನವಾಗಿ ಬಳಸಿ ಮಾಡುತ್ತಾರೆ. ಸಧ್ಯ ಅಥವಾ ಹಬ್ಬದ ಸಂದರ್ಭದಲ್ಲಿ ಕೇರಳಿಗರು ಅಪ್ಪಂಗಳನ್ನು ತಯಾರಿಸುವುದು ವಾಡಿಕೆ. ಅದರಲ್ಲಿ ಉನ್ನಿ ಅಪ್ಪಂ ರಾರಾಜಿಸುವುದು ಖಂಡಿತ.

ಓಣಂ ನೆಪದಲ್ಲಿ ನೀವೂ ಉನ್ನಿ ಅಪ್ಪಂ ಮಾಡ್ತೀರಾ?

ಪರಿಪ್ಪು ಕರಿ

ಪರಿಪ್ಪು ಕರಿ

ಕೇರಳ ಮಾದರಿಯ ಪರಿಪ್ಪು ಕರಿ ಎಂದರೆ ಬೇಳೆ ಸಾರು ಸಹ ಓಣಂ ಸಧ್ಯದ ಒಂದು ಭಾಗವಾಗಿದೆ. ಪರಿಪ್ಪು ಕರಿಯು ಉತ್ತರ ಭಾರತದ ದಾಲ್‍ನಂತೆಯೇ ತಯಾರಿಸಲಾಗುವುದು. ಇದನ್ನು ಅನ್ನ ಮತ್ತು ತುಪ್ಪದ ಜೊತೆಗೆ ತಿಂದರೆ ಸಿಗುವ ರುಚಿಯನ್ನು ಬಲ್ಲವನೇ ಬಲ್ಲ. ಇದರ ಮತ್ತೊಂದು ವಿಶೇಷವೆಂದರೆ ಈ ಪರಿಪ್ಪು ಕರಿಯನ್ನು ತೆಂಗಿನಕಾಯಿಯ ಮಿಶ್ರಣದೊಂದಿಗೆ ಬೆರೆಸಿ ಮಾಡುತ್ತಾರೆ. ಇದು ಈ ಖಾದ್ಯಕ್ಕೆ ವಿಭಿನ್ನ ಬಗೆಯ ರುಚಿಯನ್ನು ನೀಡುತ್ತದೆ.

ರುಚಿರುಚಿಯಾದ ತೊಗರಿಬೇಳೆ ದಾಲ್

ಕ್ಯಾಬೇಜ್ ಥೋರನ್

ಕ್ಯಾಬೇಜ್ ಥೋರನ್

ಥೋರನ್ ಎಂದರೆ ಒಣ ತರಕಾರಿಯ ಖಾದ್ಯ. ಎಲೆಕೋಸಿನಲ್ಲಿ ಈ ಒಣ ಖಾದ್ಯವನ್ನು ಮಾಡಲಾಗುತ್ತದೆ. ಈ ಓಣಂ ತಿಂಡಿಯನ್ನು ಈರುಳ್ಳಿ ಹಾಕಿ ಅಥವಾ ಹಾಕದೆ ಮಾಡಲಾಗುತ್ತದೆ. ಹಾಗೆಂದು ಅದಕ್ಕಾಗಿ ಯಾವುದೇ ಕಟ್ಟು ಪಾಡುಗಳು ಇದಕ್ಕೆ ಇಲ್ಲ. ಮಾಮೂಲಿ ನೀವು ಮಾಡುವ ಎಲೆ ಕೋಸಿನ ಪಲ್ಯದಂತೆಯೇ ಇದನ್ನು ಮಾಡಬಹುದು. ಜೊತೆಗೆ ಕೇರಳದ ರುಚಿಯನ್ನು ಸಾರಬಲ್ಲ ಮಸಾಲೆಗಳನ್ನು ಬೆರೆಸಲು ಮರೆಯಬೇಡಿ.

ವಿಟಮಿನ್ 'ಸಿ' ಭರಿತ ಎಲೆಕೋಸು ಪಲ್ಯ

ಬಾಳೆಹಣ್ಣಿನ ಚಿಪ್ಸ್

ಬಾಳೆಹಣ್ಣಿನ ಚಿಪ್ಸ್

ಬಾಳೆಹಣ್ಣಿನ ಚಿಪ್ಸ್ ಎಂದರೆ ಅದು ಕೇರಳದ್ದೆ ಎಂಬಷ್ಟರ ಮಟ್ಟಿಗೆ ಪ್ರಸಿದ್ಧಿ. ಬೇಯಿಸಿದ, ಉರಿದ ಬಾಳೆಹಣ್ಣಿನ ಚಿಪ್ಸ್‌ಗಳನ್ನು ಯಾರೂ ತಾನೇ ಇಷ್ಟಪಡುವುದಿಲ್ಲ. ಓಣಸಧ್ಯದ ದಿನ ಸವಿಯಲು ಇಲ್ಲಿದೆ ಸರಳವಾದ ಬಾಳೆಹಣ್ಣಿನ ಚಿಪ್ಸ್. ಇದನ್ನು ಕಾಫಿ ಅಥವಾ ಟೀ ಜೊತೆಗು ಸಹ ಕುರುಕಲು ತಿಂಡಿಯಾಗಿ ಸೇವಿಸಬಹುದು.

ಗರಂ ಗರಂ ಬಾಳೇಕಾಯಿ ಚಿಪ್ಸ್ ತಿಂದು ನೋಡಿ

ವರುತರಚ ಸಾಂಬಾರ್

ವರುತರಚ ಸಾಂಬಾರ್

ವರುತರಚ ಸಾಂಬಾರ್ ಎಂಬುದು ಕೇರಳದ ವಿಶೇಷ ಬಗೆಯ ಸಾಂಬಾರ್ ಆಗಿದ್ದು, ಇದನ್ನು ಮಸಾಲೆ ಜೊತೆಗೆ ಉರಿಯಲಾಗುತ್ತದೆ ಮತ್ತು ನಂತರ ಇದನ್ನು ಬೇಯಿಸಲಾಗುತ್ತದೆ. ಓಣಂ ಸಧ್ಯದ ಹಬ್ಬದಲ್ಲಿ ಈ ಸಾಂಬಾರ್ ಒಂದು ಬಗೆಯ ಸಂಪ್ರದಾಯದಂತೆ ತಯಾರಿಸಲ್ಪಡುತ್ತದೆ. ಈ ವಿಶೇಷ ಬಗೆಯ ಸಾಂಬಾರನ್ನು ಮೈಕ್ರೋ ವೇವ್ ಓವೆನ್ ಮೂಲಕ ಸುಲಭವಾಗಿ ಮಾಡಬಹುದು.

ಕಲನ್

ಕಲನ್

ದೇವರ ಸ್ವಂತ ನಾಡಿನ ಅತ್ಯಂತ ವಿಶೇಷ ಖಾದ್ಯಗಳಲ್ಲಿ ಒಂದು ಕಲನ್, ಕಲನ್ ಎಂಬುದು ಮೊಸರಿನ ಜೊತೆಗೆ ಮಾಡುವ ಒಂದು ಬಗೆಯ ಕರಿಯಾಗಿದೆ. ಇದು ನಾವು ನಮ್ಮ ಮನೆಗಳಲ್ಲಿ ಮಾಡುವಂತಹ ಮಜ್ಜಿಗೆ ಹುಳಿ ಮಾದರಿಯಲ್ಲಿರುತ್ತದೆ.

ಪಾಕಶಾಲೆ: ದೊಣ್ಣೆ ಮೆಣಸಿನಕಾಯಿ ಮಜ್ಜಿಗೆ ಹುಳಿ

ಅನಾನಸ್ ಪಚಡಿ

ಅನಾನಸ್ ಪಚಡಿ

ಅನಾನಸ್ ಅಥವಾ ಪೈನಾಪಲ್ ಪಚಡಿಯು ಕೇರಳ ಮತ್ತು ತಮಿಳು ನಾಡಿನಲ್ಲಿ ಭಾರೀ ಜನಪ್ರಿಯ. ಇದು ಓಣಂ ಖಾದ್ಯವಾಗಿದ್ದು, ಓಣಂ ಹಬ್ಬದ ಸಂದರ್ಭದಲ್ಲಿ ಮಾಡುತ್ತಾರೆ. ಈ ಪಚಡಿಯನ್ನು ಬಹುತೇಕ ಎಲ್ಲ ಮನೆಗಳಲ್ಲೂ ಮಾಡುತ್ತಾರೆ. ಈ ಅನಾನಸಿನ ತಿನ್ನಲು ಎಷ್ಟು ರುಚಿಕರವೋ, ಅಷ್ಟೇ ಪೋಷಕಾಂಶಭರಿತ ಸಹ.

ತಿನ್ನಲು ಸಜ್ಜಾಗಿ ಅನಾನಸ್ ಗೊಜ್ಜು

ಚಕ್ಕೈ ಚಿಪ್ಸ್

ಚಕ್ಕೈ ಚಿಪ್ಸ್

ಚಕ್ಕೈ ಚಿಪ್ಸ್ ಎಂಬುದು ಕೇರಳದ ಒಂದು ಸಾಂಪ್ರದಾಯಿಕ ಕುರುಕಲು ತಿಂಡಿ. ಇದನ್ನು ಹಲಸಿನ ಹಣ್ಣಿನಿಂದ ಮಾಡುತ್ತಾರೆ. ಇದನ್ನು ಮಲಯಾಳಂನಲ್ಲಿ ಚಕ್ಕೈ ವಟ್ಟಲ್ ಎಂದು ಕರೆಯುತ್ತಾರೆ. ಇದನ್ನು ಮಾಡುವುದು ತುಂಬಾ ಸುಲಭ. ಹಲಸಿನ ಹಣ್ಣಿನ ಬಿಳಿಯ ಅಥವಾ ಹಳದಿ ಭಾಗವನ್ನು ಎಣ್ಣೆಯಲ್ಲಿ ಬೇಯಿಸುವ ಮೂಲಕ ಈ ಚಿಪ್ಸ್ ತಯಾರಿಸಲಾಗುತ್ತದೆ.

ಈಸಿ ಹಲಸಿನ ಚಿಪ್ಸ್ ಸಂಜೆ ಟೀ ಜೊತೆಗಿರಲಿ

ಕೂಟು ಕರಿ

ಕೂಟು ಕರಿ

ಕೂಟು ಕರ್ರಿಯು ಮಸಾಲೆಗಳಿಂದ ಕೂಡಿದ ತರಕಾರಿ ಕರಿಯಾಗಿದ್ದು, ಮಲಬಾರ್ ಶೈಲಿಯಲ್ಲಿ ತಯಾರಿಸಲ್ಪಡುತ್ತದೆ. ಹಬ್ಬದ ದಿನದಂದು ಈ ಕರ್ರಿ ಜೊತೆಗೆ ಹಪ್ಪಳ ಮತ್ತು ತುಪ್ಪವನ್ನು ನೀಡಲಾಗುತ್ತದೆ. ಅದರ ಜೊತೆಗೆ ಅನ್ನವನ್ನು ಆನಂದವಾಗಿ ಸವಿಯಬಹುದು.

ಘಮ್ಮೆನ್ನುವ 6 ಸಾಂಬಾರ್ ರೆಸಿಪಿ

ತರಕಾರಿ ರಸಂ

ತರಕಾರಿ ರಸಂ

ರಸಂ ಅನ್ನು ತಯಾರಿಸಲು ಅನೇಕ ತರಹದ ಮಾರ್ಗಗಳು ಇವೆ. ಟೊಮೇಟೊ ರಸಂ, ಹುಣಸೆ ಹಣ್ಣು ರಸಂ, ತಿಳಿ ರಸಂ, ಮುಂತಾದವು ಪ್ರಸಿದ್ಧ ರಸಗಳಾಗಿವೆ. ಓಣಂ ಹಬ್ಬ ನಡೆಯುತ್ತಿದೆ, ಅದಕ್ಕಾಗಿ ನಾವು ನಿಮಗಾಗಿ ಕೆಲವೊಂದು ಬಗೆಯ ರಸಗಳನ್ನು ತಯಾರಿಸುವ ಸಲಹೆಗಳನ್ನು ನೀಡುತ್ತಿದ್ದೇವೆ ಓದಿಕೊಳ್ಳಿ, ಸುಲಭವಾಗಿ ಇವುಗಳನ್ನು ಮಾಡಿ.

ಒಣ ಹಣ್ಣುಗಳ ಕೇಸರಿ

ಒಣ ಹಣ್ಣುಗಳ ಕೇಸರಿ

ಒಣ ಹಣ್ಣುಗಳ ಕೇಸರಿಯು ಓಣಂನ ವಿಶೇಷವಾದ ಖಾದ್ಯವಾಗಿದೆ. ಇದನ್ನು ನಮ್ಮ ಕೇಸರಿ ಬಾತ್‍ನಂತೆಯೇ ಮಾಡುವುದು, ರವೆ ಅಥವಾ ಅನ್ನ, ಸಕ್ಕರೆ ಹಾಗು ಕೇಸರಿಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಆದರೆ ಒಣ ಹಣ್ಣುಗಳನ್ನು ಹೆಚ್ಚಾಗಿ ಇದಕ್ಕೆ ಬಳಸುತ್ತಾರೆಯಷ್ಟೆ. ಇದನ್ನು ಕೇರಳದ ನೆರೆಯ ರಾಜ್ಯಗಳಲ್ಲೂ ಸಹ ನಾವು ನೋಡಬಹುದು.

ಅತಿಥಿ ಸತ್ಕಾರಕ್ಕೆ ದಿಢೀರ್ ಕೇಸರಿ ಬಾತ್

ಪಾಲ್ ಪಾಯಸಂ

ಪಾಲ್ ಪಾಯಸಂ

ಪಾಲ್ ಪಾಯಸಂ ಅಥವಾ ಹಾಲಿನ ಪಾಯಸವು ಸಹ ಓಣಂ ತಿಂಡಿಗಳಲ್ಲಿ ಜನಪ್ರಿಯವಾಗಿರುವ ಒಂದು ತಿನಿಸಾಗಿದೆ. ಇದನ್ನು ಓಣಂ ಸಧ್ಯದ ಅವಧಿಯಲ್ಲಿ ತಪ್ಪದೆ ಮಾಡಲಾಗುತ್ತದೆ. ಈ ಹಬ್ಬದ ಅಡುಗೆಯು ಸ್ವಲ್ಪ ಕೇಸರಿ ಬಣ್ಣದಲ್ಲಿರುತ್ತದೆ ಮತ್ತು ರುಚಿ ಅಮೋಘವಾಗಿರುತ್ತದೆ.

ಓಣಂಗೆ ಸ್ಪೆಷಲ್ ಹಾಲಿನ ಪಾಯಸದ ಸವಿಯಿರಲಿ

ಹೆಸರುಬೇಳೆ ಪಾಯಸ

ಹೆಸರುಬೇಳೆ ಪಾಯಸ

ಹೆಸರುಬೇಳೆ ಪಾಯಸವು ಸಹ ಓಣಂನ ಜನಪ್ರಿಯ ಸಿಹಿ ತಿನಿಸಾಗಿದೆ. ಹೆಸರು ಬೇಳೆ ಪಾಯಸವಿಲ್ಲದೆ ಓಣಂನ ಹಬ್ಬದ ಅಡುಗೆಯು ಪೂರ್ಣಗೊಳ್ಳುವುದಿಲ್ಲ. ಈ ಓಣಂನಂದು ನೀವು ಸಹ ಹೆಸರುಬೇಳೆಯ ಪಾಯಸವನ್ನು ಮಾಡಿ ಸವಿಯಿರಿ, ನಿಮ್ಮ ಮನೆಯವರೆಗು ಸವಿಯಲು ನೀಡಿ.

ನವರಾತ್ರಿ ಸ್ಪೆಷಲ್-ಹೆಸರುಬೇಳೆ ಪಾಯಸ

ಶಾವಿಗೆ ಪಾಯಸ

ಶಾವಿಗೆ ಪಾಯಸ

ದಕ್ಷಿಣ-ಭಾರತದ ಸಾಂಪ್ರದಯಿಕ ತಿಂಡಿ ತಿನಿಸುಗಳಲ್ಲಿ ಶಾವಿಗೆ ಪಾಯಸವು ಒಂದು. ಇದನ್ನು ಹಾಲಿನಿಂದ ಮಾಡುತ್ತಾರೆ. ಇದನ್ನು ಉತ್ತರ ಭಾರತದಲ್ಲಿ ಖೀರು ಎಂದು ಸಹ ಕರೆಯುತ್ತಾರೆ. ಹೆಸರಿನಂತೆಯೇ ತಯಾರಿಸುವ ವಿಧಾನವು ಸಹ ಸ್ವಲ್ಪ ಭಿನ್ನವಾಗಿಯೇ ಇದೆ. ಓಣಂ ಹಬ್ಬಕ್ಕಾಗಿ ಈ ಸಾಂಪ್ರದಾಯಿಕ ಡೆಸರ್ಟ್ ಅನ್ನು ಮಾಡಿ ಸವಿಯಿರಿ.

ಎಲೆ ಅಡಾ

ಎಲೆ ಅಡಾ

ಇದೊಂದು ಕೇರಳದ ಸಾಂಪ್ರದಾಯಿಕ ಸಿಹಿ ತಿನಿಸಾಗಿದೆ. ಇದನ್ನು ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಮಾಡುತ್ತಾರೆ. ಇದು ನಮ್ಮ ಕಡುಬು ಮಾದರಿಯಲ್ಲಿಯೇ ಇರುತ್ತದೆ. ಅಕ್ಕಿಯ ಪೇಸ್ಟ್‌ನೊಳಗೆ ತೆಂಗಿನ ಕಾಯಿ ತುರಿಯನ್ನು ಹಾಕಿ ಬಾಳೆ ಎಲೆಯಲ್ಲಿ ಇಟ್ಟು ಅದನ್ನು ಉಗಿಯಲ್ಲಿ ಬೇಯಿಸಲಾಗುತ್ತದೆ.

ಎಲೆ ಅಡಾ-ಓಣಂ ಸ್ಪೆಷಲ್

English summary

20 Best Onam Dishes Recipes

Kerala is all geared up for its festival of the year, Onam. It is the most popular Indian harvest festival which is celebrated with huge zest and enthusiasm. The festival is a huge favourite among the food fanatics because of the tasty Onam dishes.
X
Desktop Bottom Promotion