For Quick Alerts
ALLOW NOTIFICATIONS  
For Daily Alerts

ಸ್ವಾದದ ಘಮಲನ್ನು ಹೆಚ್ಚಿಸುವ ಕೇಸರಿ ಬಾತ್ ರೆಸಿಪಿ

|

ಹೋಳಿ 2015ನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸಲು ತಯಾರಾಗಿದ್ದೀರಲ್ಲವೇ?, ಬನ್ನಿ ಬಣ್ಣಗಳು ನಿಮ್ಮ ಪರಿಸರದಲ್ಲಿ ಹೋಕುಳಿಯಾಡುತ್ತಿದ್ದರೆ, ಹೋಳಿ ಸಂಭ್ರಮದಲ್ಲಿ ಮನೆಯಲ್ಲಿ ಸಿಹಿ ಮಾಡಲಿಲ್ಲವಾದರೆ ಹೇಗೆ? ಅದಕ್ಕಾಗಿಯೇ ನಾವು ನಿಮಗೆ ಇಂದು ಮಧ್ಯಾಹ್ನ ಒಂದು ವಿಶೇಷ ಅಡುಗೆಯನ್ನು ತಯಾರಿಸಲು ತಿಳಿಸಿಕೊಡುತ್ತಿದ್ದೇವೆ. ಅದು ಅಕ್ಕಿ ಕೇಸರಿಬಾತ್ ರೆಸಿಪಿ. ಇದು ಮಾಡಲು ಸುಲಭ ಮತ್ತು ರುಚಿಯು ಅಧಿಕ.

ಇದೆಲ್ಲಕ್ಕಿಂತ ಮಿಗಿಲಾಗಿ ಇದರಲ್ಲಿ ಅಧಿಕ ಕ್ಯಾಲೊರಿಗಳು ಸಹ ಇರುತ್ತವೆ. ಹೋಳಿ ಆಡಿ ಕರಗಿ ಹೋಗಿರುವ ನಿಮ್ಮ ಶಕ್ತಿಯನ್ನು ಮತ್ತೆ ಪಡೆಯಲು ಇದು ಅತ್ಯಾವಶ್ಯಕ. ಜೊತೆಗೆ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಸಹ ಇದನ್ನು ಸೇವಿಸುವುದು ಒಳ್ಳೆಯದಲ್ಲ. 2015 ರ ಹೋಳಿಗಾಗಿ ಅಕ್ಕಿ ಕೇಸರಿ ಬಾತ್ ಮಾಡಲು ನೀವು ತಯಾರಾಗಿದ್ದೀರಲ್ಲವೆ ಬನ್ನಿ ಅದನ್ನು ಹೇಗೆ ತಯಾರಿಸುವುದು ಎಂದು ಬೇಗ ನೋಡಿಕೊಂಡು ಬರೋಣ.

10 Minute Rice Kesari Bhaat Recipe For Holi

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 20 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಅಕ್ಕಿ - 1 ಕಪ್ (ನೆನೆಸಿದಂತಹುದು)


*ತುಪ್ಪ- ¼ ಕಪ್
*ಒಣ ದ್ರಾಕ್ಷಿ- 3 ಟೀ. ಚಮಚ
*ಗೋಡಂಬಿ - 2 ಟೀ. ಚಮಚ
*ಏಲಕ್ಕಿ ಪುಡಿ - ½ ಟೀ. ಚಮಚ
*ಸಕ್ಕರೆ - ¾ cup
*ಕೇಸರಿ - ನಾಲ್ಕೈದು ಎಳೆ ಅಲಂಕಾರಕ್ಕಾಗಿ
*ನೀರು - 1 ಕಪ್

ತಯಾರಿಸುವ ವಿಧಾನ
*ಒಂದು ತಳ ಆಳವಿರುವ ಬಾಣಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಕಾಯಿಸಿ. ಇನ್ನು ಒಣ ದ್ರಾಕ್ಷಿಯನ್ನು ಹಾಕಿ ಹುರಿದುಕೊಳ್ಳಿ. ಇದು ಮುಗಿದ ಮೇಲೆ ಅದನ್ನು ತೆಗೆದು, ಗೋಡಂಬಿಯನ್ನು ಹಾಕಿ ಹುರಿದುಕೊಳ್ಳಿ. ಅವುಗಳು ಕಂದು ಬಣ್ಣಕ್ಕೆ ತಿರುಗುವವರೆಗು ಉರಿದುಕೊಳ್ಳಿ.

*ಇದು ಮುಗಿದ ಮೇಲೆ, ಬಾಣಲೆಯಿಂದ ಹೊರ ತೆಗೆಯಿರಿ. ಅದೇ ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಮತ್ತೆ ಹಾಕಿ ಮತ್ತು ಅದರ ಮೇಲೆ ಅಕ್ಕಿಯನ್ನು ಹಾಕಿ. ಅಕ್ಕಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಇದರ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ. ಇನ್ನೂ ಸ್ವಲ್ಪ ಸಮಯ ಇದನ್ನು ಹುರಿದುಕೊಳ್ಳಿ. ಜೊತೆಗೆ ಒಂದು ಚೂರು ಕೇಸರಿ ಎಳೆಗಳನ್ನು ಅದಕ್ಕೆ ಹಾಕಿ.

*ಈಗ ಇದಕ್ಕೆ ನೀರನ್ನು ಹಾಕಿ, ಕಡಿಮೆ ಉರಿಯಲ್ಲಿ ಅಕ್ಕಿಯನ್ನು ಬೇಯಲು ಬಿಡಿ. ನೀರೆಲ್ಲ ಹಿಂಗುವವರೆಗೆ ಕಾಯಿರಿ. ಈಗ ಇದಕ್ಕೆ ಸಕ್ಕರೆ ಮತ್ತು ನೀರನ್ನು ಹಾಕಿ. ಸಕ್ಕರೆಯು ಅನ್ನದ ಜೊತೆಗೆ ಕರಗಲು ಬಿಡಿ. ಉರಿಯನ್ನು ಕಡಿಮೆ ಮಾಡಿಕೊಳ್ಳಿ. ಈಗ ಅಕ್ಕಿ ಕೇಸರಿ ಬಾತ್ ಮೇಲೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ.

ಪೋಷಕಾಂಶದ ಸಲಹೆ
ತೂಕ ಇಳಿಸಿಕೊಳ್ಳುವವರಿಗೆ ಇದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಅಧಿಕ ಕ್ಯಾಲೋರಿಗಳು ಇರುತ್ತವೆ.

ಸಲಹೆ
ಅನ್ನ ಬೇಯುವಾಗ ಅಥವಾ ಬೇಯುವ ಮುನ್ನ ಸಕ್ಕರೆಯನ್ನು ಹಾಕಬೇಡಿ. ಏಕೆಂದರೆ ಇದರಿಂದ ಸಕ್ಕರೆಯು ಅನ್ನವನ್ನು ಬೇಯಲು ಅಡ್ಡಿ ಮಾಡುತ್ತದೆ. ಹಾಗಾಗಿ ಅನ್ನ ಆದ ನಂತರ ಸಕ್ಕರೆ ಹಾಕಿ.

English summary

10 Minute Rice Kesari Bhaat Recipe For Holi

Holi 2015 should be celebrated with grandeur. To prepare this rice kesari bhaat recipe for Holi 2015, take a look at the recipe below. The highlight - it is not time consuming.
X
Desktop Bottom Promotion