For Quick Alerts
ALLOW NOTIFICATIONS  
For Daily Alerts

ಧಾರವಾಡದ ದೂಧ್‌ ಪೇಡಾ ಅಥವಾ ಹಾಲಿನ ಪೇಡೆ

By * ರೇಖಾ ಹರಿದಾಸ್, ಹುಬ್ಬಳ್ಳಿ
|
Doodh Peda
ದೂಧ್ ಪೇಡಾ ಧಾರವಾಡ ಪೇಡೆಯಷ್ಟು ಫೇಮಸ್ ಅಲ್ಲದಿದ್ದರೂ ರುಚಿಯಲ್ಲಿ ಯಾವ ಸಿಹಿ ತಿನಿಸಿಗೂ ಕಡಿಮೆಯೇನಿಲ್ಲ. ಮಾರ್ಕೆಟಿಂಗ್ ಕೊರತೆಯಿಂದ ಜನಪ್ರಿಯತೆಯಲ್ಲಿ ಕೊಂಚ ಹಿಂದೆ ಬಿದ್ದಿದೆಯಷ್ಟೆ. ಮೇಲಕ್ಕೆ, ಎಲ್ಲೆಲ್ಲಿಯೂ ಸಿಗುತ್ತದೆ. ಧಾರವಾಡ ಪೇಡೆಯನ್ನು ಅಂಗಡಿಗೆ ಹೋಗಿಯೇ ಕೊಳ್ಳಬೇಕು, ಆದರೆ, ದೂಧ್ ಪೇಡೆಯನ್ನು ಮನೆಯಲ್ಲಿಯೇ ಮಾಡಿ ಮೆಲ್ಲಬಹುದು. ಸಂತಸದ ಗಳಿಗೆಗಳನ್ನು ಆಚರಿಸಿಕೊಳ್ಳಲು ದೂಧ್ ಪೇಡೆ ತಯಾರಿಸಿ.

ಬೇಕಾಗುವ ಸಾಮಾನು :

ಹಾಲು- 2 ಲೀಟರ್‌
ಸಕ್ಕರೆ- 1/ 4 ಕೇಜಿ
ಘಮಕ್ಕೆ- ರುಚಿಗೆ ತಕ್ಕಷ್ಟು ಏಲಕ್ಕಿ ಪುಡಿ

ಮಾಡುವ ವಿಧಾನ :

ಹಾಲನ್ನು ಒಂದು ಸ್ಟೀಲ್‌ ಪಾತ್ರೆಯಲ್ಲಿ ಹಾಕಿ ಕುದಿಯಲು ಬಿಡಿ. ಕುದಿಯುವ ಹಾಲಿನಲ್ಲಿ ಸೌಟ್‌ ಹಾಕಿ ತಿರುವುತ್ತಾ ಇರಬೇಕು. ಹಾಲು ಗಟ್ಟಿಯಾಗುತ್ತಾ ಬರುವಾಗ ಎಡೆಬಿಡದೆ ಕಲಕುತ್ತಿರಬೇಕು. ಈ ಹಾಲು, ಖೋವಾ ರೂಪದಲ್ಲಿ ಗಟ್ಟಿಯಾದ ನಂತರ ಕೆಳಗಿಳಿಸಿ, ತಣ್ಣಗಾಗಲು ಬಿಡಿ.

ನಂತರ ಸಕ್ಕರೆಗೆ 1 ಕಪ್‌ ನೀರು ಹಾಕಿ ಪಾಕಕ್ಕಿಡಿ. ಪಾಕ ಹದಕ್ಕೆ ಬಂದ ಮೇಲೆ, ಖೋವಾವಾದ ಹಾಲನ್ನು ಪಾಕಕ್ಕೆ ಬೆರೆಸಿ, ಉಂಡೆ ಮಾಡಿ, ಬೇಕಾದ ಆಕಾರಕ್ಕೆ ತಟ್ಟಿಕೊಳ್ಳಿ. ಗಟ್ಟಿಯಾಗದಿದ್ದಲ್ಲಿ ಸ್ವಲ್ಪ ಹೊತ್ತು ಒಲೆಯ ಮೇಲಿಟ್ಟು ಮತ್ತೊಮ್ಮೆ ಬೆಚ್ಚಗೆ ಮಾಡಿ. ನಂತರ ಪ್ರಯತ್ನಿಸಿ. 2 ಲೀಟರ್‌ ಹಾಲಿನಲ್ಲಿ ಸುಮಾರು 30 ಪೇಡಾ ಮಾಡಬಹುದು.

ದೂಧ್‌ ಪೇಡ ತುಂಬಾ ರುಚಿಕರ. ಆರೋಗ್ಯಕ್ಕೂ ಒಳ್ಳೆಯದು. ಪೇಡಾದ ಮೇಲೆ ಬಾದಾಮಿ ತುಂಡುಗಳನ್ನು ಉದುರಿಸಿದರೆ ಇನ್ನೂ ಚೆನ್ನ.

ಚಿಕ್ಕಮಕ್ಕಳಿಗೆ ಅಚ್ಚುಮೆಚ್ಚಾಗಿರುವ ಮಿಲ್ಕಿ ಬಾರ್ ತಯಾರಿಸಿವುದು ಹೇಗೆಂದು ನಂತರ ತಿಳಿಸುತ್ತೇನೆ. ನಿಮಗೂ ಗೊತ್ತಿದ್ದರೆ ತಿಳಿಸಿರಿ.

English summary

Milk peda | Doodh Pheda | ದೂಧ್‌ ಪೇಡಾ | ಹಾಲಿನ ಪೇಡೆ

Doodh Pheda or Milk Pheda can be prepared within no time. This sweet recipe can be served at all occasions.
X
Desktop Bottom Promotion