For Quick Alerts
ALLOW NOTIFICATIONS  
For Daily Alerts

ಗೋಬಿ 65 ರೆಸಿಪಿ: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!!

|

ಗೋಬಿ ಮಂಚೂರಿ ಅಂದರೆ ಸಾಕು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಇಷ್ಟ ಪಟ್ಟು ತಿನ್ನುವ ಸ್ನ್ಯಾಕ್ಸ್, ಆದರೆ ಇಂತಹ ರುಚಿಕರವಾದ ರೆಸಿಪಿಯನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಿದರೆ ಅದರ ರುಚಿ ಇನ್ನಷ್ಟು ಮಸ್ತಾಗಿರುತ್ತದೆ ಅಲ್ಲವೇ? ಬನ್ನಿ ಇಂದು ಬೋಲ್ಡ್‌ಸ್ಕೈ ಸುಲಭವಾಗಿ ಮಾಡಬಹುದಾದ ಗೋಬಿ 65 ರೆಸಿಪಿಯನ್ನು ಹೇಳಿ ಕೊಡುತ್ತಿದ್ದೇವೆ.

ಆದರೆ ಗೋಬಿಯಲ್ಲಿರುವ ಹಲವಾರು ಕೀಟಾಣುಗಳನ್ನು ಸ್ವಚ್ಛಗೊಳಿಸಲು ನಿಮಗೆ ಸ್ವಲ್ಪ ಹೆಚ್ಚಿನ ಮುತುವರ್ಜಿ ಬೇಕಾಗುತ್ತದೆ. ಆದ್ದರಿಂದ ಗೋಬಿಯನ್ನು ಮೊದಲು ನೀವು 20 ನಿಮಿಷ ಬೆಚ್ಚಗಿನ ನೀರಿನಲ್ಲಿ ನೆನೆಸಿ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳಿ. ಮೈ ಮನಸ್ಸಿಗೆ ಮುದ ನೀಡುವ ಚಿಲ್ಲಿ ಗೋಬಿ ಡ್ರೈ ರೆಸಿಪಿ

Yummy Tummy: Gobi 65 Dry Recipe!

ಪ್ರಮಾಣ: ನಾಲ್ವರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
ಅಡುಗೆಗೆ ತಗುಲುವ ಸಮಯ: 15 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಗೋಬಿ - 1 ಪೂರ್ಣವಾದುದು ( ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ)
*ಮೊಸರು - 100 ಮಿಲೀ
*ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 2 ಟೀ.ಚಮಚ
*ಕಾರ್ನ್‌ಫ್ಲೋರ್ - 2 ಟೀ.ಚಮಚ
ಲಿಂಬೆ ರಸ - 1/2 ಟೀ.ಚಮಚ
*ಗರಂ ಮಸಾಲ ಪುಡಿ - 1 ಟೀ.ಚಮಚ
*ಖಾರದ ಪುಡಿ - 1 ಟೀ.ಚಮಚ
*ಕರಿ ಮೆಣಸು ಪುಡಿ - 1/2 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ಕಿತ್ತಳೆ ಬಣ್ಣದ ಫುಡ್ ಕಲರ್ - ಒಂದು ಚಿಟಿಕೆ
*ಉರಿಯಲು ಎಣ್ಣೆ

ತಯಾರಿಸುವ ವಿಧಾನ
*ಹೂಕೋಸನ್ನು ಅರ್ಧ ಬೇಯುವವರೆಗೆ ಚೆನ್ನಾಗಿ ಬೇಯಿಸಿ. ಇದು ಮುಗಿದ ಮೆಲೆ ಅದನ್ನು ಎತ್ತಿ ಪಕ್ಕದಲ್ಲಿಡಿ.
*ಇನ್ನು ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಗರಂ ಮಸಾಲ ಪುಡಿ, ಖಾರದ ಪುಡಿ, ಮೆಣಸಿನ ಪುಡಿ, ಫುಡ್ ಕಲರ್ ಮತ್ತು ಲಿಂಬೆರಸವನ್ನು ಬಟ್ಟಲಿನಲ್ಲಿ ಹಾಕಿಕೊಳ್ಳಿ. ಈ ಮಿಶ್ರಣವು ಗಟ್ಟಿಯಾಗಿರಬಾರದು ಹಾಗೆಯೇ ತೆಳ್ಳಗಿರಬಾರದು.
*ಈಗ ಗೋಬಿಯನ್ನು ಈ ಮಿಶ್ರಣದಲ್ಲಿ ನೆನೆಸಿ 10 ನಿಮಿಷ ಹಾಗೆಯೇ ಬಿಡಿ.
*ತದನಂತರ ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕೋಸನ್ನು ಡೀಪ್ ಫ್ರೈ ಮಾಡಲು ಕಾಯಿಸಿಕೊಳ್ಳಿ. ಅದರಲ್ಲಿ ಗೋಬಿಯನ್ನು ಡೀಪ್ ಫ್ರೈ ಮಾಡಿ.
*ಗೋಬಿ ಡ್ರೈ ಫ್ರೈ ಮೇಲೆ ಕೊತ್ತಂಬರಿಯನ್ನು ಅಲಂಕಾರಕ್ಕಾಗಿ ಹಾಕಿ. ಜೊತೆಗೆ ಸ್ವಲ್ಪ ಲಿಂಬೆರಸವನ್ನು ಹಿಂಡಿಕೊಳ್ಳಿ.

ಪೋಷಕಾಂಶದ ಸಲಹೆ
*ಗೋಬಿಯು ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಮತ್ತು ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ. ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

ಮತ್ತೊಂದು ಸಲಹೆ
ಗೋಬಿಯನ್ನು ಮಾಡುವ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಕೋಸನ್ನು ನೆನೆಸುವುದನ್ನು ಮರೆಯಬೇಡಿ. ಇದು ಬಿಸಿಯಾದರೆ ಗೋಬಿಯು ಗರಿಗರಿಯಂತೆ ಬರುವುದಿಲ್ಲ.

English summary

Yummy Tummy: Gobi 65 Dry Recipe!

Boldsky shares with you an easy gobi 65 recipe which you can enjoy as a starter or as a side dish. Here is how you prepare gobi 65 dry. Take a look at this easy and yummy recipe and do let us know how your dish came out!
Story first published: Thursday, March 26, 2015, 19:53 [IST]
X
Desktop Bottom Promotion