For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಬೇಲ್ ಪುರಿ ರೆಸಿಪಿ

By Manohar.V
|

ಚಾಟ್ಸ್ ಐಟಂಗೆ ಹೆಸರುವಾಸಿಯಾಗಿರುವ ಬೇಲ್ ಪುರಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಸಂಜೆಯ ಸಮಯದಲ್ಲಿ ಮನಸ್ಸು ಏನಾದರೂ ಚುರಿಮುರಿ ತಿಂಡಿ ತಿನ್ನಬೇಕು ಎಂದೆನಿಸುತ್ತದೆ, ಅದರಲ್ಲೂ ರಜಾ ದಿನಗಳಲ್ಲಿ ಅಥವಾ ವೀಕೆಂಡ್ ದಿನಗಳಲ್ಲಿ ಅಂತೂ ಇಂತಹ ತಿಂಡಿಗಳಿಗಾಗಿ ಹೋಟೆಲ್‌ಗಳನ್ನು ಸುತ್ತುವುದು ಸರ್ವೇ ಸಾಮಾನ್ಯ.

ಬೇಲ್ ಪುರಿಯನ್ನು ಹೋಟೆಲ್ ಅಥವಾ ರಸ್ತೆ ಬದಿಯಲ್ಲಿರುವ ಅಂಗಡಿಯಲ್ಲಿ ತಿನ್ನುವುದಕ್ಕಿಂತ, ಸಂಜೆಯ ಸಮಯದಲ್ಲಿ ಮನೆಯಲ್ಲಿ ತಯಾರಿ ಮಾಡಿದರೆ ಅದರ ರುಚಿ, ಖಾರ ನಿಮ್ಮ ಖಾದ್ಯದ ಸ್ವಾದವನ್ನು ಇನ್ನಷ್ಟು ರುಚಿಕರವನ್ನಾಗಿಸುತ್ತದೆ. ಹಾಗಾದರೆ ಇನ್ನು ಏಕೆ ತಡ ? ಬನ್ನಿ ಇಂದು ನಾವು ಬೇಲ್ ಪುರಿ ಮಾಡುವ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

Yummy Chaat recipe

ಬೇಕಾಗುವ ಸಾಮಾಗ್ರಿ :
ಮೂರು ಕಪ್ ಮಂಡಕ್ಕಿ
ಸಣ್ಣ ಟೊಮೆಟೋ - 1/2
ಆಲೂಗಡ್ಡೆ - 1/2
ಸಣ್ಣ ಈರುಳ್ಳಿ - 1/2
ಕೊತೊಂಬರಿ ಸೊಪ್ಪು - ಸ್ವಲ್ಪ
ತುರಿದ ಕ್ಯಾರೇಟ್ - 2 ಟೇ ಸ್ಫೂನ್
ರುಚಿಗೆ ತಕ್ಕಷ್ಟು ಉಪ್ಪು
ಚಾಟ್ ಮಸಾಲಾ - 1/2 ಟೀ ಸ್ಪೂನ್
ಸಿಹಿ ಚಟ್ನಿ - 1 ಟೀ ಸ್ಪೂನ್
ಗ್ರೀನ್ ಚಟ್ನಿ - 2 ಟೀ ಸ್ಪೂನ್
ಪಾಪಡಿಸ್ - 4 ರಿಂದ 5
ಕಡಲೆ ಬೀಜ - 3- 4 ಚಮಚ

ಮಾಡುವ ವಿಧಾನ:
ಮೂರು ಕಪ್‌ನಷ್ಟು ಮಂಡಕ್ಕಿಯನ್ನು 1 ರಿಂದ 3 ನಿಮಿಷದವರೆಗೆ ಮೈಕ್ರೊವೇವ್‌ನಲ್ಲಿ ಬಿಸಿ ಮಾಡಿ ತದನಂತರ ಅದನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ. ಬಟಾಟೆಯನ್ನು ಕುಕ್ಕರ್‌ನಲ್ಲಿ ಬೇಯಿಸಿ, ಬಟಾಟೆ ಚೆನ್ನಾಗಿ ಬೆಂದು ಕುಕ್ಕರ್ ಆಫ್ ಮಾಡಿದ ನಂತರ, ಅದರ ಸಿಪ್ಪೆಯನ್ನು ತೆಗೆಯಿರಿ, ಹಾಗೂ ಅದನ್ನು ಸಣ್ಣಗೆ ಕತ್ತರಿಸಿ,

ಇನ್ನೊಂದು ಪಾತ್ರೆಯಲ್ಲಿ ತುರಿದ ಕ್ಯಾರೇಟ್, ಕತ್ತರಿಸಲಾಗಿರುವ ಟೊಮ್ಯಾಟೊ, ನೀರುಳ್ಳಿ, ಕೊತ್ತೊಂಬರಿ ಸೊಪ್ಪು ಇವುಗಳೆಲ್ಲವನ್ನು ಒಂದು ಪಾತ್ರೆಗೆ ಹಾಕಿ, ತದನಂತರ ಇದರ ಮೇಲೆ ಚಾಟ್ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಇವುಗಳೆಲ್ಲವನ್ನು ಇನ್ನೊಂದು ಪಾತ್ರಗೆ ಹಾಕಿ, ಅದರ ಮೇಲೆ. ಗ್ರೀನ್ ಚಟ್ನಿ, ಸಹಿ ಚಟ್ನಿ, ರುಚಿಗೆ ತಕ್ಕಷ್ಟು ಉಪ್ಪು, ಕಡಲೆ ಬೀಜವನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಮಂಡಕ್ಕಿ, ಪುಡಿ ಮಾಡಲಾಗಿರುವ ಪಾಪಡಿ, ಸೇವ್, ಇವುಗಳೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ರುಚಿ ರುಚಿಯಾಗಿರುವ ಬೇಲ್ ಪುರಿ ರೆಡಿ...! ಅಲ್ಲದೆ ಕೂಡಲೇ ಇದನ್ನು ತಟ್ಟೆಗೆ ಬಡಿಸಿಕೊಳ್ಳಿ.

English summary

Yummy Chaat recipe

One of the best snack's at evening times is the Bhel puri. In weekend or Holiday time, every one need to spend their time through snacks, expecially chaats item.
Story first published: Monday, December 23, 2013, 14:24 [IST]
X
Desktop Bottom Promotion