For Quick Alerts
ALLOW NOTIFICATIONS  
For Daily Alerts

ಮೈ ಮನಸ್ಸಿಗೆ ಮುದ ನೀಡುವ ಗೋಬಿ ಡ್ರೈ ರೆಸಿಪಿ

|

ಈ ಮಧ್ಯಾಹ್ನ ನಾವು ನಿಮಗಾಗಿ ಕೆಲವೊಂದು ವಿಶೇಷವಾದ ಮತ್ತು ಸ್ವಾದಿಷ್ಟವಾದ ಚಿಲ್ಲಿ ಗೋಬಿ ಡ್ರೈ ಫ್ರೈ ರೆಸಿಪಿಯನ್ನು ತಯಾರಿಸುವ ಬಗೆಯನ್ನು ಹೇಳಿ ಕೊಡುತ್ತಿದ್ದೇವೆ. ಈ ಗೋಬಿ ಡ್ರೈ ಫ್ರೈ ರೆಸಿಪಿ ಮಾಡುವ ಬಗೆಯನ್ನು ನಾವು ನಿಮಗಾಗಿ ತಿಳಿಸಿಕೊಡಲಿದ್ದೇವೆ. ಈ ಸ್ಟಾರ್ಟರ್ ರೆಸಿಪಿಯು ಗರಿ ಗರಿಯಾಗಿರುತ್ತದೆ ಮತ್ತು ನಿಮ್ಮ ಬಾಯಿಗೆ ಸ್ವಾದವನ್ನು ಸಹ ನೀಡುತ್ತದೆ. ರುಚಿಕರವಾದ ಈ ಡ್ರೈ ಫ್ರೈ ರೆಸಿಪಿಯನ್ನು ಸವಿಯಲು ಯಾವುದೇ ಗ್ರೇವಿಯ ಅಗತ್ಯವಿಲ್ಲ. ಮನೆಯಲ್ಲಿಯೆ ಆನಂದಿಸಿ ಗೋಬಿ ಮಂಚೂರಿ ರುಚಿ

Veg Starter: Chilli Gobi Dry Fry Recipe

*ಪ್ರಮಾಣ: ಮೂವರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 16 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 10 ನಿಮಿಷಗಳು

ಬೇಕಾಗುವ ಪದಾರ್ಥಗಳು
*ಗೋಬಿ - 1 (ಕತ್ತರಿಸಿದಂತಹುದು)
*ಕಡಲೆ ಹಿಟ್ಟು - 4 ಟೀ.ಚಮಚ
*ಕಾರ್ನ್ ಫ್ಲೋರ್- 1 ಟೀ.ಚಮಚ
*ಬೇಕಿಂಗ್ ಸೋಡಾ - ¼ ಟೀ.ಚಮಚ


*ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್) - 1 ಕಟ್ಟು (ಸಣ್ಣಗೆ ಕತ್ತರಿಸಿದಂತಹುದು)
*ಕೊತ್ತೊಂಬರಿ ಪುಡಿ - 1 ಟೀ.ಚಮಚ
*ಚಾಟ್ ಮಸಾಲ - 1 ಟೀ.ಚಮಚ
*ಜೀರಿಗೆ ಪುಡಿ - 1 ಟೀ.ಚಮಚ
*ಮೆಣಸಿನ ಕಾಯಿ ಪುಡಿ - 1 ಟೀ.ಚಮಚ
*ಸೋಯಾ ಸಾಸ್ - ½ ಟೀ.ಚಮಚ
*ವಿನಿಗರ್- ½ ಟೀ.ಚಮಚ
*ಬೆಳ್ಳುಳ್ಳಿ - 1 (ಟೀ.ಚಮಚ)
*ಶುಂಠಿ - 1 ಟೀ.ಚಮಚ(ಕತ್ತರಿಸಿದಂತಹುದು)
*ಎಣ್ಣೆ - 1 ಟೀ.ಚಮಚ
*ರುಚಿಗೆ ತಕ್ಕಷ್ಟು ಉಪ್ಪು
*ನೀರು - 2 ಕಪ್‍ಗಳು

ಮಾಡುವ ವಿಧಾನ
*ಒಂದು ಅಗಲ ತಳವಿರುವ ಮೈಕ್ರೋವೇವ್ ಓವೆನ್ ಬಟ್ಟಲನ್ನು ತೆಗೆದುಕೊಳ್ಳಿ. ಅದಕ್ಕೆ ಕಡಲೆ ಹಿಟ್ಟು, ಕಾರ್ನ್ ಸ್ಟಾರ್ಚ್, ಬೇಕಿಂಗ್ ಪುಡಿ, ಧನಿಯಾ ಪುಡಿ, ಮೆಣಸಿನ ಕಾಯಿ ಪುಡಿ, ಸೋಯಾ ಸಾಸ್, ವಿನೀಗರ್, ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
*ಎಲ್ಲಾ ಪದಾರ್ಥಗಳನ್ನು ದೊಡ್ಡದಾದ ಚಮಚದ ಸಹಾಯದಿಂದ ಕಲೆಸಿ ಕೊಡಿ. ಈ ಬಟ್ಟಲಿಗೆ ಒಂದು ಕಪ್ ನೀರನ್ನು ಹಾಕಿ ಮತ್ತು ಪುಡಿಗಳನ್ನೆಲ್ಲವನ್ನು ಒಂದು ಮೃದುವಾದ ಬಜ್ಜಿ ಹಿಟ್ಟಿನಂತೆ ಕಲೆಸಿಕೊಳ್ಳಿ.
*ಈಗ ಇದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿ ಮತ್ತು ಮೊಟ್ಟೆಯನ್ನು ಕಲೆಸುವ ಸಾಧನದಿಂದ ಮಿಶ್ರಣವನ್ನು ಚೆನ್ನಾಗಿ ಕಲೆಸಿಕೊಡಿ.


*ಯಾವಾಗ ಈ ಪದಾರ್ಥಗಳೆಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿದ ಮೇಲೆ ಅದಕ್ಕೆ ಕತ್ತರಿಸಿದ ಗೋಬಿಯನ್ನು ಹಾಕಿ. ನಂತರ ಅದನ್ನು ಮುಚ್ಚಿಡಿ. ಇದನ್ನು ಆದಷ್ಟು ಗಟ್ಟಿಯಾದ ಪೇಸ್ಟ್‌ನಂತೆ ಮಾಡಿಕೊಳ್ಳಬೇಡಿ.
*ಇನ್ನು ಒಂದು ದೊಡ್ಡದಾದ ಬಾಣಲೆಯನ್ನು ಗ್ಯಾಸ್ ಸ್ಟೌವ್ ಮೇಲೆ ಇಟ್ಟು, ಅದಕ್ಕೆ ಎಣ್ಣೆಯನ್ನು ಉಯ್ದುಕೊಳ್ಳಿ (ಡೀಪ್ ಫ್ರೈ ಮಾಡಿಕೊಳ್ಳಲು ಇದು ಅನುಕೂಲವಾಗಿರಲಿ)
*ಯಾವಾಗ ಎಣ್ಣೆಯು ಕಾಯುತ್ತದೆಯೋ, ಆಗ ಅದಕ್ಕೆ ನಿಧಾನವಾಗಿ ಗೋಬಿಯನ್ನು ಹಾಕಿ. ಈ ಗೋಬಿಯು ಹೊಂಬಣ್ಣಕ್ಕೆ ಬರುವವರೆಗೆ ಇದನ್ನು ಚೆನ್ನಾಗಿ ಡೀಪ್ ಫ್ರೈ ಮಾಡಿ.
*ಗೋಬಿಯಲ್ಲಿರುವ ಎಣ್ಣೆಯನ್ನು ಬಸಿಯಲು ಅದನ್ನು ಟಿಶ್ಯೂ ಪೇಪರ್ ಮೇಲೆ ಇಡಿ. 15 ನಿಮಿಷಗಳ ನಂತರ, ಗೋಬಿಯನ್ನು ಮತ್ತೆ ಡೀಪ್ ಫ್ರೈ ಮಾಡಿ. ಎಣ್ಣೆ ಬಸಿಯಲು ಪಕ್ಕದಲ್ಲಿಡಿ.
*ಇದರ ಮೇಲೆ ಈ*ಗ ಸ್ವಲ್ಪ ಚಾಟ್ ಮಸಾಲವನ್ನು ಹಾಕಿ. ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಈರುಳ್ಳಿ ಹೂವಿನಿಂದ ಅಲಂಕಾರ ಮಾಡಿ. ಈಗ ಬಿಸಿ ಬಿಸಿಯಾದ ಗೋಬಿಯನ್ನು ಚಿಲ್ಲಿ ಸಾಸ್ ಜೊತೆಗೆ ಸವಿಯಲು ನೀಡಿ.

ಪೋಷಕಾಂಶದ ಸಲಹೆ
ಒಂದು ವೇಳೆ ನೀವು ತೂಕವನ್ನು ಇಳಿಸಿಕೊಳ್ಳಲು ಆಲೋಚಿಸಿದಲ್ಲಿ, ಈ ಪದಾರ್ಥವು ನಿಮಗೆ ಸೂಕ್ತವಲ್ಲ. ಇದು ಡೀಪ್ ಫ್ರೈ ಆದ ಪದಾರ್ಥವಾಗಿದ್ದು, ಇದು 100 ಕ್ಯಾಲೋರಿಗಿಂತ ಅಧಿಕ ಪೋಷಕಾಂಶವನ್ನು ಹೊಂದಿರುತ್ತದೆ.

ಸಲಹೆ
ಗೋಬಿಯನ್ನು ನೀವು ತಯಾರಿಸುವ ಮೊದಲು ಅದನ್ನು ಉಪ್ಪು ನೀರಿನಲ್ಲಿ ನೆನೆಸುವುದನ್ನು ಮರೆಯಬೇಡಿ.

English summary

Veg Starter: Chilli Gobi Dry Fry Recipe

The chilli gobi dry recipe is one of the best ways to start your afternoon lunch. This starter recipe is filling and above all the crispy nature of this recipe is what will make you indulge. have a look
X
Desktop Bottom Promotion