For Quick Alerts
ALLOW NOTIFICATIONS  
For Daily Alerts

ಉದ್ದಿನ ಬೇಳೆಯ ಚಕ್ಕುಲಿ ರೆಸಿಪಿ

|

ಇಲ್ಲಿ ನಾವು ಉದ್ದಿನ ಬೇಳೆ ಬಳಸಿ ಮಾಡುವ ಚಕ್ಕುಲಿಯ ರೆಸಿಪಿ ನೀಡಿದ್ದೇವೆ. ಹೆಚ್ಚು ಸಾಮಗ್ರಿಗಳಾಗಲೀ, ಸಮಯವಾಗಲೀ ಇದನ್ನು ತಯಾರಿಸಲು ಬೇಕಾಗಿಲ್ಲ. ಮನೆಯಲ್ಲೇ ತಯಾರಿಸುವುದರಿಂದ ಆರೋಗ್ಯಕ್ಕೂ ಹಿತಕರ. ನಾಲಗೆಗೂ ರುಚಿಕರ.

ಉದ್ದಿನ ಬೇಳೆಯ ಚಕ್ಕುಲಿ

Urda Dal Chakkuli Recipe

ಬೇಕಾಗುವ ಸಾಮಗ್ರಿಗಳು:
ಉದ್ದಿನಬೇಳೆ - 1/2 ಕಪ್
ಅಕ್ಕಿ ಹಿಟ್ಟು - ಎರಡೂವರೆ ಕಪ್
ಖಾರದ 2 ಚಮಚ
ಜೀರಿಗೆ 1 ಚಮಚ
ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

* ಉದ್ದಿನಬೇಳೆಯನ್ನು 1 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿಕೊಂಡು, ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.

* ರುಬ್ಬಿದ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ.

* ಈಗ ರುಬ್ಬಿಕೊಂಡ ಉದ್ದಿನ ಹಿಟ್ಟಿಗೆ ಉಪ್ಪು, ಖಾರದ ಪುಡಿ, ಜೀರಿಗೆ, ಅಕ್ಕಿಹಿಟ್ಟು ಸೇರಿಸಿ ಗಟ್ಟಿಯಾಗಿ ಕಲೆಸಿ. ಹಿಟ್ಟು ಸ್ವಲ್ಪ ನೀರು-ನೀರಾಗಿದ್ದರೆ ಇನ್ನೂ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ ಕಲೆಸಿ.

* ಕಲೆಸಿಕೊಂಡ ಹಿಟ್ಟನ್ನು ಚಕ್ಕುಲಿ ಒರಳಿನಲ್ಲಿ ಒತ್ತಿ, ಚಕ್ಕುಲಿಗಳನ್ನು ತಯಾರಿಸಿ ಕಾದ ಎಣ್ಣೆಯಲ್ಲಿ ಗರಿಯಾಗಿ ಕರಿದರೆ ರುಚಿರುಚಿಯಾದ ಚಕ್ಕುಲಿ ರೆಡಿ.

English summary

Urda Dal Chakkuli Recipe

Chakkuli, is an evening snack recipe made with rice flour and urda dal. Addictive South Indian snack that goes well with a cup of tea
X
Desktop Bottom Promotion