For Quick Alerts
ALLOW NOTIFICATIONS  
For Daily Alerts

ಟೇಸ್ಟಿ ಸ್ನ್ಯಾಕ್ಸ್:ಆಲೂ ವೆಡ್ಜಸ್

|

ನಿಮ್ಮ ಮನೆಯಲ್ಲಿ ಮೈಕ್ರೋ ಓವನ್ ಇದ್ದರೆ ಈ ರೆಸಿಪಿ ಟ್ರೈ ಮಾಡಬಹುದು. ಈ ಆಲೂ ಕ್ರಿಸ್ಪಿ ಸ್ನ್ಯಾಕ್ಸ್ ತಿನ್ನಲು ಬಲು ರುಚಿ, ಮಾಡುವ ವಿಧಾನ ಕೂಡ ತುಂಬಾ ಸರಳವಾಗಿದೆ. ಇದರ ರುಚಿ ಒಮ್ಮೆ ಸವಿದಿರಿ ಅಂದರೆ ವಾರದಲ್ಲಿ ಒಮ್ಮೆಯಾದರೂ ಈ ಸ್ನ್ಯಾಕ್ಸ್ ಮಾಡಿಯೇ ಮಾಡುವಿರಿ.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು

ಆಲೂಗಡ್ಡೆ 4

ಆಲೀವ್ ಎಣ್ಣೆ 4 ಚಮಚ

ರುಚಿಗೆ ತಕ್ಕ ಉಪ್ಪು

ಕರಿ ಮೆಣಸಿನ ಪುಡಿ

ಒಣ ಮೆಣಸಿನ ಬೀಜ 1 ಚಮಚ(Red chili flakes)

2 ಚಮಚ ಕೊತ್ತಂಬರಿ ಸೊಪ್ಪು

ಬೆಳ್ಳುಳ್ಳಿ ಪೇಸ್ಟ್ 1 ಚಮಚ

 ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

* ಮೈಕ್ರೋಓವನ್ ಅನ್ನು 150 ಡಿಗ್ರಿ C ಗೆ ಬಿಸಿ ಮಾಡಿ ಇಡಬೇಕು.

ಸ್ನ್ಯಾಕ್ಸ್

ಸ್ನ್ಯಾಕ್ಸ್

* parchment ಪೇಪರ್ ಅನ್ನು ಬೇಯಿಸುವ ತಟ್ಟೆಗೆ ಹಾಕಿ.

ಸ್ನ್ಯಾಕ್ಸ್

ಸ್ನ್ಯಾಕ್ಸ್

* ಈಗ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಅದನ್ನು ಒರೆಸಿ, ಅದನ್ನು ಉದ್ದುದ್ದವಾಗಿ, ತೆಳುವಾಗಿ ಕತ್ತರಿಸಿ.

ಸ್ನ್ಯಾಕ್ಸ್

ಸ್ನ್ಯಾಕ್ಸ್

* ಈಗ ಕತ್ತರಿಸಿದ ಆಲೂಗಡ್ಡೆಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮಿಕ್ಸ್ ಮಾಡಿ, ಬೇಕಿಂಗ್ ಟ್ರೇ (ಬೇಯಿಸುವ ತಟ್ಟೆ)ಗೆ ಹಾಕಿ 15-20 ನಿಮಿಷ ಬೇಯಿಸಿ.

ಸ್ನ್ಯಾಕ್ಸ್

ಸ್ನ್ಯಾಕ್ಸ್

* ಈಗ ಮೈಕ್ರೋ ಓವನ್ ನಿಂದ ಟ್ರೇಯನ್ನು ಹೊರತೆಗೆದು, ಒಮ್ಮೆ ಮಗುಚಿ ಹಾಕಿ ಮತ್ತೆ 10-12 ನಿಮಿಷ ಬೇಯಿಸಿದಾಗ ಆಲೂಗಡ್ಡೆ ಕಂದು ಬಣ್ಣಕ್ಕೆ ಬರುತ್ತದೆ.

ಸ್ನ್ಯಾಕ್ಸ್

ಸ್ನ್ಯಾಕ್ಸ್

* ಈಗ ರೆಡಿಯಾದ ಆಲೂಫ್ರೈಯನ್ನು ಮಯೋನೈಸ್ ಅಥವಾ ಕೆಚಪ್ ಜೊತೆ ಟೇಸ್ಟ್ ಮಾಡಿ.

English summary

Tasty Snacks: Potato Wedges

If your kids demanding daily for some of the snacks, then why can't you try this easy Potato Wedges.
X
Desktop Bottom Promotion