For Quick Alerts
ALLOW NOTIFICATIONS  
For Daily Alerts

ಸಂಜೆಯ ಚಹಾದ ಸ್ವಾದವನ್ನು ಹೆಚ್ಚಿಸುವ ತರಕಾರಿ ಬೋಂಡಾ

|

ಸಂಜೆಯ ತಿಂಡಿ ಸೊಗಸಾಗಿದ್ದರೆ ಅದನ್ನು ಸವಿಯುವ ಮನಸ್ಸು ಕೂಡ ಪ್ರಫುಲ್ಲವಾಗಿರುತ್ತದೆ. ಸಂಜೆಯ ಬಿಸಿ ಚಹಾದ ರುಚಿಯನ್ನು ಇನ್ನಷ್ಟು ಅಮೋಘಗೊಳಿಸುವ ತಿಂಡಿ ಇದ್ದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಷ್ಟು ಸಂಭ್ರಮ ಮನದಲ್ಲಿ ಮೂಡುತ್ತದೆ. ಗರಿಗರಿಯಾದ ತಿಂಡಿಯ ರುಚಿಯು ಸವಿಯಾದ ಚಹಾದೊಂದಿಗೆ ಸೇರಿ ನಮ್ಮನ್ನು ಖುಷಿಗೊಳಿಸುವ ಸಂತಸವನ್ನು ಅನುಭವಿಸಿಯೇ ತೀರಬೇಕು. ಇಂದಿನ ಲೇಖನದಲ್ಲಿ ಕೂಡ ಇಂತಹುದೇ ಅಮೋಘ ರುಚಿಯನ್ನು ಉಣಬಡಿಸುವ ಸ್ವಾದಿಷ್ಟ ತಿಂಡಿಯೊಂದಿಗೆ ನಾವು ಬಂದಿದ್ದು ಅದುವೇ ತರಕಾರಿ ಬೋಂಡಾ ಆಗಿದೆ.

ಇದೊಂದು ಎಣ್ಣೆ ತಿಂಡಿಯಾಗಿದ್ದರೂ ಎಲ್ಲಾ ತರಕಾರಿಗಳನ್ನು ಸಮ್ಮಿಶ್ರಗೊಳಿಸಿ ಸಿದ್ಧಪಡಿಸುವ ತರಕಾರಿ ಬೋಂಡಾ ನಿಮಗೆ ಆರೋಗ್ಯವನ್ನೂ ನೀಡುತ್ತದೆ ಮತ್ತು ನಾಲಿಗೆಗೆ ರುಚಿಯನ್ನೂ ಹೆಚ್ಚಿಸುತ್ತದೆ. ಎಲ್ಲಾ ತರಕಾರಿಗಳ ಹದವಾದ ಮಿಶ್ರಣವನ್ನು ಈ ಬೋಂಡಾ ಒಳಗೊಂಡಿರುವುದರಿಂದ ಎಲ್ಲಾ ತರಕಾರಿಗಳ ಪೋಷಕಾಂಶಗಳನ್ನು ನೀವು ಯಥೇಚ್ಛವಾಗಿ ಪಡೆಯಬಹುದಾಗಿದೆ.

 Tasty Snacks in Evening: Veg Bonda Recipe

ಇಂದಿನ ಲೇಖನದಲ್ಲಿ ಈ ತರಕಾರಿ ಬೋಂಡಾ ಮಾಡುವ ಸರಳವಾದ ತಯಾರಿ ವಿಧಾನವನ್ನು ನಾವು ಇಲ್ಲಿ ನೀಡುತ್ತಿದ್ದು ಇದನ್ನು ತಯಾರಿಸಲು ನಿಮಗೆ ಕೆಲವೇ ಕೆಲವು ನಿಮಿಷಗಳು ಸಾಕು. ಹಾಗಿದ್ದರೆ ಇಲ್ಲಿ ನಾವು ನೀಡಿರುವ ಸರಳವಾದ ತಯಾರಿ ವಿಧಾನವನ್ನು ತಿಳಿದುಕೊಂಡು ರುಚಿಯಾದ ತರಕಾರಿ ಬೋಂಡಾ ಸವಿಯನ್ನು ಸವಿಯಿರಿ.

ಮಳೆಗಾಲದ ಸ್ಪೆಷಲ್-ಸವಿರುಚಿಯ ಸ್ನ್ಯಾಕ್ಸ್

ಪ್ರಮಾಣ: 5
ಸಿದ್ಧತೆಗೆ ಬೇಕಾದ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಬೇಕಾಗುವ ಸಾಮಾಗ್ರ:
*ಆಲೂಗಡ್ಡೆ 4
*ಬೀಟ್‌ರೋಟ್ - 1/2 ಕಪ್
*ಸಣ್ಣದಾಗಿ ಹೆಚ್ಚಿದ ಬೀನ್ಸ್ - 2 ಕಪ್
*ಕ್ಯಾರೇಟ್ - 2 ಕಪ್
*ಬಟಾಣಿ - 2 ಕಪ್‌ಗಳು
*ಹಸಿಮೆಣಸು - 2
*ಮಧ್ಯಮ ಗಾತ್ರದ ಈರುಳ್ಳಿ - 1/2
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಮೆಣಸಿನ ಪುಡಿ - 1 ಚಮಚ
*ಅರಶಿನ ಪುಡಿ - ಸ್ವಲ್ಪ
*ಇಂಗಿನ ಪುಡಿ - ಸ್ವಲ್ಪ
*ಜೀರಿಗೆ ಪುಡಿ - 1/2 ಚಮಚ
*ಗರಮ್ ಮಸಾಲಾ - 1/2 ಚಮಚ
*ತಾಜಾ ಲಿಂಬೆ ರಸ -

ಇತರ ಸಾಮಾಗ್ರಿಗಳು
*ಕಡಲೆ ಪುಡಿ - 3 ಕಪ್‌ಗಳು
*ಅಕ್ಕಿ ಪುಡಿ - 1/4 ಕಪ್
*ಇಂಗಿನ ಪುಡಿ - 1/4 ಚಮಚ
*ಮೆಣಸಿನ ಪುಡಿ - 2 ಚಮಚ
*ಬೇಕಿಂಗ್ ಸೋಡಾ - ಸ್ವಲ್ಪ
*ಎಣ್ಣೆ - ಕರಿಯಲು

ಮಾಡುವ ವಿಧಾನ:
* ಮೊದಲಿಗೆ ಬಟಾಣಿಯನ್ನು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ 2-3 ಬಾರಿ ಅವುಗಳನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ.
* ಕ್ಯಾರೇಟ್ ಬೀನ್ಸ್, ಬೀಟ್‌ರೂಟ್‌ಗಳನ್ನು ಸಣ್ಣಗೆ ಹೆಚ್ಚಿಕೊಳ್ಳಿ
*ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಸಳು, ಹಸಿಮೆಣಸನ್ನು ಕೂಡ ಸಣ್ಣಗೆ ಹೆಚ್ಚಿಕೊಳ್ಳಿ
*ಆಲೂಗಡ್ಡೆ, ನೆನೆಸಿದ ಬಟಾಣಿ, ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಕುಕ್ಕರ್‌ನಲ್ಲಿ ಸಾಕಷ್ಟು ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. (3 ವಿಶಲ್ ಸಾಕು)
*ಕುಕ್ಕರ್ ತಣಿದ ಒಡನೆ ಆಲೂಗಡ್ಡೆ ಮತ್ತು ಇತರ ತರಕಾರಿಗಳನ್ನು ಬಸಿದುಕೊಂಡು ಒಂದು ಪಾತ್ರೆಗೆ ಹಾಕಿ.
*ಇನ್ನು ಆಲೂಗಡ್ಡೆಯ ಹೊರಭಾಗದ ಸಿಪ್ಪೆಯನ್ನು ತೆಗೆದು ಅದನ್ನು ಚೆನ್ನಾಗಿ ಹಿಸುಕಿಕೊಳ್ಳಿ
*ನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೊದಲಿಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹುರಿದುಕೊಳ್ಳಿ. ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನೆಲೆ, ಇಂಗು, ಅರಶಿನ, ಹಸಿಮೆಣಸನ್ನು ಹಾಕಿ 3-4 ನಿಮಿಷಗಳ ಕಾಲ ಮಂದ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಗರಮ್ ಮಸಾಲಾವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
*ಈಗ ಮುಂಚಿತವಾಗಿ ಹಿಸುಕಿಕೊಂಡಿರುವ ತರಕಾರಿಗಳು, ಆಲೂಗಡ್ಡೆ, ಬಟಾಣಿ, ಉಪ್ಪು,ಲಿಂಬೆ ರಸ, ಮೆಣಸಿನ ಪುಡಿಯನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು 1-2 ನಿಮಿಷಗಳ ಕಾಲ ಹುರಿಯಿರಿ. ತದನಂತರ ಒಂದು ಪಾತ್ರೆಗೆ ಕಡಲೆ ಪುಡಿ, ಇಂಗು, ಮೆಣಸಿನ ಪುಡಿ, ಅಕ್ಕಿ ಪುಡಿ, ಸ್ವಲ್ಪ ಬೇಕಿಂಗ್ ಪೌಡರ್ ಮತ್ತು ಬೇಕಾದಷ್ಟು ನೀರನ್ನು ಹಾಕಿಕೊಂಡು ಸ್ವಲ್ಪ ದಪ್ಪನೆಯ ಹಿಟ್ಟನ್ನಾಗಿ ತಯಾರಿಸಿಕೊಳ್ಳಿ.
* ಇನ್ನು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, ನಂತರ ಈ ತರಕಾರಿ ಮಿಶ್ರಣವನ್ನು ಉಂಡೆ ಮಾಡಿಕೊಂಡು ಕಡಲೆ ಹಿಟ್ಟಿಗೆ ಮುಳುಗಿಸಿ ಮತ್ತು ಕರಿಯುವ ಎಣ್ಣೆಗೆ ಇದನ್ನು ಹಾಕಿ. ಬೋಂಡಾದ ಎರಡೂ ಬದಿಗಳನ್ನು ಚೆನ್ನಾಗಿ ಕರಿದುಕೊಳ್ಳಿ. ತರಕಾರಿ ಬೋಂಡಾ ಸವಿಯಲು ಸಿದ್ಧವಾಗಿದೆ. ಕೆಚಪ್ ಅಥವಾ ಚಟ್ನಿಯೊಂದಿಗೆ ಈ ಬೋಂಡಾ ರೆಸಿಪಿ ಸ್ವಾದಿಷ್ಟ ರುಚಿಯನ್ನು ನಿಮ್ಮ ನಾಲಿಗೆಗೆ ಉಣಬಡಿಸುತ್ತದೆ.

English summary

Tasty Snacks in Evening: Veg Bonda Recipe

vegetable bonda is one of the healthy snacks which treats your evening tremendous and tasty. All the vegetables combining here to make a good food. with sip of tea this bonda recipe giving good mood also.
X
Desktop Bottom Promotion