For Quick Alerts
ALLOW NOTIFICATIONS  
For Daily Alerts

ಗರಿ ಗರಿ ಸಂಜೆಯ ಸ್ನ್ಯಾಕ್ಸ್ ರೆಸಿಪಿ ಅವಲಕ್ಕಿ ಫ್ರೈ

|

ಸಂಜೆಯ ಟೀ ಜೊತೆಗೆ ಬಾಯಾಡಿಸಲು ನಾವು ಏನಾದರೂ ತಿಂಡಿ ಮಾಡಲು ಉತ್ಸುಕರಾಗಿರುತ್ತೇವೆ. ಸ್ನ್ಯಾಕ್ಸ್ ಹೆಚ್ಚು ಎಣ್ಣೆಪಸೆಯದಾಗಿರದೇ ನಮ್ಮ ಡಯೆಟ್ ಮೇಲೆ ಪ್ರಭಾವ ಬಿರದೇ ಲೈಟ್ ವೈಟ್ ಆಗಿದ್ದರೆ ಎಷ್ಟು ಚೆನ್ನ ಅಲ್ಲವೇ?

ಸಂಜೆಯ ತಿಂಡಿ ಸಿಂಪಲ್ ಆಗಿದ್ದರೂ ಅದರ ರುಚಿ ನಮ್ಮ ನಾಲಗೆಯಲ್ಲಿ ಹಾಗೆಯೇ ಇರಬೇಕು. ಹಾಗಿದ್ದರೆ ಅಂತಹ ಟೇಸ್ಟೀ ರೆಸಿಪಿಯನ್ನು ಮಾಡುವುದು ಸುಲಭದ ಮಾತಾಗಿದೆ. ಇಂದಿನ ಲೇಖನದಲ್ಲಿ ನಾವು ನೀಡಿರುವ ಅವಲಕ್ಕಿ ರೆಸಿಪಿ ಇಂತಹ ಟೇಸ್ಟೀ ಮನತಣಿಸುವ ಫುಡ್ ಆಗಿದೆ. ಬೆಳಗ್ಗಿನ ಉಪಹಾರ ಅಥವಾ ಸಂಜೆಯ ಟೀ ಗೂ ಸಮಾನವಾಗಿ ಹೊಂದಿಕೊಳ್ಳುವ ಈ ಅವಲಕ್ಕಿ ರೆಸಿಪಿ ನಿಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಲಿದೆ.

ಅವಲಕ್ಕಿಗೆ ಹುಳಿ, ಬೆಲ್ಲ, ಉಪ್ಪು ತೆಂಗಿನ ತುರಿಯನ್ನ ಸೇರಿಸಿ ಎಣ್ಣೆಯೊಂದಿಗೆ ಚೆನ್ನಾಗಿ ಫ್ರೈ ಮಾಡಿ ತಯಾರು ಮಾಡಲಾಗುವ ಈ ಪೋಹಾ ಫ್ರೈ ನಿಮ್ಮ ನಾಲಗೆಗೆ ರಸಗವಳ ಎಂದರೆ ತಪ್ಪಲ್ಲ. ಇದರ ರುಚಿಯನ್ನು ನಿಮಗೆ ಮರೆಯಲೂ ಸಾಧ್ಯವಿಲ್ಲ ಅಂತಹ ಅಸಾಧಾರಣ ರುಚಿಯನ್ನು ಈ ಪೋಹಾ ಹೊಂದಿದೆ. ಹಾಗಿದ್ದರೆ ಈ ಪೋಹಾವನ್ನು ತಯಾರಿಸಲು ನೀವು ಉತ್ಸುಕರಾಗಿದ್ದಲ್ಲಿ ರೆಸಿಪಿಯನ್ನು ಬರೆದುಕೊಳ್ಳಿ.

Tasty Poha Recipe For evening snacks

ರುಚಿಕರವಾದ ಹೊಸ ಆಲೂಗಡ್ಡೆ ಪಕೋರಾ ರೆಸಿಪಿ

ಪ್ರಮಾಣ - 2
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು:
*ಅವಲಕ್ಕಿ - ಅರ್ಧ ಕಿಲೋ
*ಬೆಲ್ಲ - ಸಣ್ಣ ತುಂಡು
*ಹುಳಿ - ಒಂದು ಸಣ್ಣ ತುಂಡು
*ತೆಂಗಿನ ತುರಿ - ಒಂದು ಕಪ್
*ಎಣ್ಣೆ - 2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಕರಿಬೇವಿನೆಲೆ - ಮುಷ್ಟಿಯಷ್ಟು
* ಹಸಿ ಮೆಣಸು - 3 (ಸಣ್ಣಗೆ ಕತ್ತರಿಸಲಾರುವ)
*ಟೊಮೇಟೊ -1 (ಸಣ್ಣಗೆ ಕತ್ತರಿಸಲಾಗಿರುವ)

ತಯಾರಿ ವಿಧಾನ:
1. ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬೆಲ್ಲ, ಹುಳಿ, ತೆಂಗಿನ ಕಾಯಿ, ಟೊಮೇಟೊ ಹಾಗೂ ಹಸಿ ಮೆಣಸನ್ನು ಚೆನ್ನಾಗಿ ಹುರಿದುಕೊಳ್ಳಿ.
2. ತದನಂತರ ಇದನ್ನು ಮಿಕ್ಸಿಯಲ್ಲಿ ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ.
3. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದೇ ಮಿಶ್ರಣಕ್ಕೆ ಅವಲಕ್ಕಿ ಸೇರಿಸಿ.
4. ಬೇಕಿದ್ದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅವಲಕ್ಕಿಯನ್ನು ಚೆನ್ನಾಗಿ ಮಸಾಲೆಯೊಂದಿಗೆ ಬೆರೆಸಿ
5. ಉಪ್ಪು ಟೇಸ್ಟ್ ಮಾಡಿಕೊಳ್ಳಿ. ಬೇಕಿದ್ದಲ್ಲಿ ಸ್ವಲ್ಪ ಉಪ್ಪು ಸೇರಿಸಿ.
6. ನಂತರ 5 ನಿಮಿಷಗಳಷ್ಟು ಕಾಲ ಹಾಗೆಯೇ ಬಿಡಿ.
7. ಪೂರ್ತಿ ಆದ ನಂತರ ಕರಿಬೇವಿನ ಒಗ್ಗರಣೆಯನ್ನು ಅವಲಕ್ಕಿ ಫ್ರೈ ಗೆ ನೀಡಿ.
ನಿಮ್ಮ ಟೇಸ್ಟೀ ಅವಲಕ್ಕಿ ಫ್ರೈ ರೆಸಿಪಿ ಸವಿಯಲು ಸಿದ್ಧವಾಗಿದೆ. ಸಂಜೆಯ ಚಹಾಕ್ಕೆ ಇದೊಂದು ಪರ್ಫೆಕ್ಟ್ ಸ್ನ್ಯಾಕ್ಸ್ ಗ್ಯಾರಂಟಿ!

English summary

Tasty Poha Recipe For evening snacks

This lovely poha recipe is one of a kind. It is delicious and can be easily enjoyed with a hot cup of coffee or light tea too. Boldsky, shares with you this easy poha recipeas this recipe will only take around 10 to 15 minutes to prepare.
X
Desktop Bottom Promotion