For Quick Alerts
ALLOW NOTIFICATIONS  
For Daily Alerts

ಹದವಾಗಿ ಬೆರೆತ ಮಸಾಲೆಯೊಂದಿಗೆ ಸ್ವಾದಭರಿತ ನಿಪ್ಪಟ್ಟು ಮಸಾಲೆ

|

ಸಂಜೆಯ ಧಾರಾಕಾರ ಮಳೆಯೊಂದಿಗೆ ನೆನೆದು, ಬಳಲಿ ಬೆಂಡಾಗಿ ಮಕ್ಕಳು ಮನೆಯವರು ಬಂದಾಗ ನಿಮ್ಮ ಮುಖ ಕೂಡ ಬಾಡುತ್ತದೆ. ಅವರಿಗಾಗಿ ಏನಾದರೂ ಹೊಸತನ್ನು ಮಾಡಿಡಬೇಕೆಂಬ ನಿಮ್ಮ ಬಯಕೆ ಪುಟಿದೇಳುತ್ತದೆ. ಆದರೂ ಯಾವಾಗಲೂ ಒಂದೇ ಬಗೆಯ ರುಚಿ ಮಾಡಿ ತಯಾರಿಸುವವರು, ತಿನ್ನುವವರು ಬೇಸರಗೊಂಡಿರುತ್ತಾರೆ ಅಲ್ಲವೇ?

ಅದಕ್ಕಾಗಿಯೇ ನಾವಿಲ್ಲಿ ಬಾಯಲ್ಲಿ ನೀರೂರಿಸುವ ಹದವಾಗಿ ಬೆರೆತ ಮಸಾಲೆಗಳನ್ನೊಳಗೊಂಡು ತರಕಾರಿಗಳ ಸುವಾಸನೆಯೊಂದಿಗೆ ಬಂದಿರುವ ನಿಪ್ಪಟ್ಟು ಮಸಾಲೆಯನ್ನು ನಿಮ್ಮ ಮುಂದಿರಿಸುತ್ತಿದ್ದೇವೆ. ಇದು ದೇಹಕ್ಕೆ ಆರೋಗ್ಯವನ್ನು ನೀಡುವುದರೊಂದಿಗೆ ನಿಮಗೆ ಕೊಲೆಸ್ಟ್ರಾಲ್ ಚಿಂತೆಯನ್ನು ಉಂಟುಮಾಡುವುದಿಲ್ಲ.

Tasty Nippatu masala recipe for evening snacks

ನಿಪ್ಪಟ್ಟು ಮಸಾಲೆ ಚಾಟ್ ಅನ್ನು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು. ಇದು ದಣಿದ ದೇಹಕ್ಕೆ ತಂಪನ್ನು ನೀಡುವುದರ ಜೊತೆಗೆ ಸಂಜೆಯ ರುಚಿಯಾದ ಚಹಾ ತಿಂಡಿಯನ್ನು ಒದಗಿಸುತ್ತದೆ. ಮನೆಯಲ್ಲೇ ತಯಾರಿಸುವುದರಿಂದ ಅನಾರೋಗ್ಯದ ಚಿಂತೆ ಕೂಡ ಬೇಡ. ಇದನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳು ಕೂಡ ನಿಮಗೆ ಏನೂ ಕಷ್ಟವಿಲ್ಲದೆ ದೊರೆಯುವುದರಿಂದ ನಿಮಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಕೂಡ ಇರುವುದಿಲ್ಲ.

ಮಳೆಗಾಲದ ಚುಮುಚುಮು ಚಳಿಗೆ ಆಹ್ಲಾದವನ್ನುಂಟು ಮಾಡುವ ಈ ಚಾಟ್ ರೆಸಿಪಿ ನಿಮ್ಮ ಬಾಯಲ್ಲಿ ಸ್ವಾದದ ಸವಿಯನ್ನು ಉಳಿಯುವಂತೆ ಮಾಡುವುದು ಖಂಡಿತ. ಹಾಗಿದ್ದರೆ ತಡ ಮಾಡದೇ ನಾವು ಕೆಳಗೆ ನೀಡಿರುವ ಖಾದ್ಯದ ತಯಾರಿ ವಿಧಾನದ ಮೇಲೆ ಸುಮ್ಮನೆ ಕಣ್ಣಾಡಿಸಿ ನಿಮಗೆ ಕ್ಷಣದಲ್ಲಿ ಈ ಸ್ವಾದಮಯ ರೆಸಿಪಿಯನ್ನು ತಯಾರಿಸಬಹುದಾಗಿದೆ.

ರುಚಿ ರುಚಿಯಾದ ಕಡ್ಲೆಬೇಳೆ ಆಂಬೋಡೆ ರೆಸಿಪಿ!

ಪ್ರಮಾಣ: 2
ಸಿದ್ಧತಾ ಸಮಯ: 15 ನಿಮಿಷ

ಸಾಮಾಗ್ರಿಗಳು
*ನಿಪ್ಪಟ್ಟು - 3 ಅಥವಾ 4
*ಟೊಮೇಟೊ - 1
*ಮಂಡಕ್ಕಿ/ಹುರಿಯಕ್ಕಿ - 1 ಕಪ್
*ಹುರಿದ ಕಡಲೆ - 3 ಚಮಚ
*ಚಾಟ್ ಮಸಾಲಾ - 1 ಚಮಚ
*ಹಸಿಮೆಣಸಿನ ಚಟ್ನಿ - 1/2 ಚಮಚ
*ಮೆಣಸಿನ ಹುಡಿ - 1/2 ಚಮಚ
*ಈರುಳ್ಳಿ - 1
*ಕೊತ್ತಂಬರಿ ಸೊಪ್ಪು - 3 ಎಸಳು
*ಕ್ಯಾರೇಟ್ - 1 (ತುರಿದದ್ದು)
*ಲಿಂಬೆ ರಸ - ಕೆಲವು ಹನಿ
*ಸೇವ್ (ಬೇಕಿದ್ದಲ್ಲಿ) 1/2 ಕಪ್

ಮಾಡುವ ವಿಧಾನ
*ಮೊದಲಿಗೆ ನಿಪ್ಪಟ್ಟನ್ನು ತಟ್ಟೆಯಲ್ಲಿರಿಸಿ
*ಕ್ಯಾರೇಟ್, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನಂತರ ಸ್ವಲ್ಪ ಉಪ್ಪು, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
*ಟೊಮೇಟೊವನ್ನು ದಪ್ಪನೆ ವೃತ್ತಾಕಾರದಲ್ಲಿ ಕತ್ತರಿಸಿಕೊಳ್ಳಿ ಇದನ್ನು ನಿಪ್ಪಟ್ಟಿನ ಮೇಲಿರಿಸಿ ಇದಕ್ಕೆ ಹಸಿಮೆಣಸಿನ ಚಟ್ನಿ, ಸ್ವಲ್ಪ ಮೆಣಸಿನ ಹುಡಿ, ಚಾಟ್ ಮಸಾಲಾವನ್ನು ಹಾಕಿ.
*ನಂತರ ಕ್ಯಾರೇಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಣವನ್ನು ಇದರ ಮೇಲೆ ಉದುರಿಸಿ, ಕೊನೆಗೆ ಲಿಂಬೆ ಹನಿಯನ್ನು ಹಿಂಡಿ.
*ಕೂಡಲೇ ಮಂಡಕ್ಕಿ/ಹುರಿಯಕ್ಕಿಯನ್ನು ಮೇಲ್ಭಾಗದಲ್ಲಿ ಹಾಕಿ.
*ರುಚಿಯಾದ ನಿಪ್ಪಟ್ಟು ಮಸಾಲೆ ಖಾದ್ಯ ಸವಿಯಲು ಸಿದ್ಧವಾಗಿದೆ. ಸಂಜೆಯ ಹದವಾದ ಚಹಾ ಕಾಫಿಯೊಂದಿಗೆ ಗರಿಗರಿಯಾಗಿ ಸೇವಿಸಲು ನಿಪ್ಪಟ್ಟು ಮಸಾಲೆ ಉತ್ತಮವಾಗಿದೆ.

English summary

Tasty Nippatu masala recipe for evening snacks

Nippattu masala one of the delicious snacks recipe which fills your hungry stomach healthily. For this snack you don't need to spend more time, easily we can do this recipe with home made ingredients. So try this tempting snack of nippattu masala with hot tea.
X
Desktop Bottom Promotion