For Quick Alerts
ALLOW NOTIFICATIONS  
For Daily Alerts

ರುಚಿಯಾದ ಮರಗೆಣಸಿನ ಖಾದ್ಯ

|

ಈ ಹಿಂದೆ ಮಸಾಲೆ ಹಾಕಿ ಮಾಡುವ ಮರಗೆಣಸಿನ ಖಾದ್ಯ ಬಗ್ಗೆ ತಿಳಿಸಿದ್ದೆ. ಈ ಖಾದ್ಯ ಕೂಡ ಸ್ವಲ್ಪ ಅದೇ ರೀತಿಯಿದ್ದರೂ ರುಚಿಯಲ್ಲಿ ಸ್ವಲ್ಪ ಭಿನ್ನವಾಗಿರುವುದು, ಅಲ್ಲದೆ ಈ ಮರಗೆಣಸಿನ ಖಾದ್ಯ ಮಾಡುವುದು ಕೂಡ ತುಂಬಾ ಸುಲಭ.

ಮರಗೆಣಸನ್ನು ಬೇಯಿಸಿ, ಜಸ್ಟ್ ಒಗ್ಗರಣೆ ಕೊಟ್ಟು ಮಾಡುವ ಈ ಖಾದ್ಯ ರುಚಿಕರವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಪದಾರ್ಥ:

* ಮರಗೆಣಸು-1 ಕೆಜಿ (ಸಿಪ್ಪೆ ತೆಗೆದು ತೊಳೆದು ಕತ್ತರಿಸಿರಬೇಕು)
* 3/4 ಚಮಚ ಅರಿಶಿಣ ಪುಡಿ
* ಉಪ್ಪು
* 3-4 ಹಸಿ ಮೆಣಸಿನಕಾಯಿ
*2 ಈರುಳ್ಳಿ
* ಕರಿಬೇವು
* ಅರ್ಧ ಚಮಚ ಸಾಸಿವೆ
* 2 ಚಮಚ ಎಣ್ಣೆ

ತಯಾರಿಸುವ ವಿಧಾನ:

* ಕುಕ್ಕರ್ ನಲ್ಲಿ ಮರಗೆಣಸು ಹಾಕಿ, ಬೇಯಲು ತಕ್ಕ ನೀರು (ನೀರು ಸ್ವಲ್ಪ ಅಧಿಕವೇ ಇರಲಿ) ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 2 ವಿಶಲ್ ವರೆಗೆ ಬೇಯಿಸಿ. ನಂತರ ನೀರನ್ನು ಬಸಿಯಿರಿ.

* ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಬೇವು ಹಾಕಬೇಕು.

* ನಂತರ ಈರುಳ್ಳಿ , ಹಸಿ ಮೆಣಸು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಅರಿಶಿಣ ಹಾಕಿ ಮತ್ತೆ 2 ನಿಮಿಷ ಹುರಿಯಿರಿ.

*ಈಗ ಬೇಯಿಸಿದ ಗೆಣಸನ್ನು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಗೆಣಸಿನ ಸ್ನ್ಯಾಕ್ಸ್ ರೆಡಿ.

English summary

Tapioca Snakcs Recipe

Tapioca snacks recipe is very easy to make. For this you have to boil the tapioc a and season it. Tasty tapioca snacks will be ready.
X
Desktop Bottom Promotion