For Quick Alerts
ALLOW NOTIFICATIONS  
For Daily Alerts

ರುಚಿ ರುಚಿಯಾದ ಪನ್ನೀರ್ ಟಿಕ್ಕಾ-ಸ್ಟಾಟರ್ಸ್ ರೆಸಿಪಿ

|

ಪನ್ನೀರ್ ಟಿಕ್ಕಾ ರುಚಿಕರವಾದ ವೆಜ್ ಸ್ಟಾಟರ್ಸ್ ಆಗಿದೆ. ಇದನ್ನು ತರಕಾರಿ ಜೊತೆ ಟಿಕ್ಕಾ ಮಾಡಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದಕ್ಕೆ ಬಳಸುವ ಸಾಮಾಗ್ರಿಗಳು ಹಾಗೂ ಇದನ್ನು ಮಾಡುವ ವಿಧಾನದಿಂದ ಈ ಸ್ಟಾಟರ್ಸ್ ತುಂಬಾ ಆರೋಗ್ಯಕರವಾಗಿದೆ.

ಪನ್ನೀರ ಟಿಕ್ಕಾವನ್ನೂ ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಟೊಮೆಟೊ ಹಾಗೂ ಕ್ಯಾಪ್ಸಿಕಂ ಜೊತೆ ತಯಾರಿಸುವ ಪನ್ನೀರ್ ಟಿಕ್ಕಾದ ರೆಸಿಪಿ ನೀಡಿದ್ದೇವೆ ನೋಡಿ:

Tandoori Paneer Tikka Recipe

ಬೇಕಾಗುವ ಸಾಮಾಗ್ರಿಗಳು
* ಪನ್ನೀರ್ 250 ಗ್ರಾಂ
* ದುಂಡು ಮೆಣಸಿನಕಾಯಿ 1
* ಟೊಮೆಟೊ 1
* ಬೆಣ್ಣೆ 1 ಚಮಚ

ಪೇಸ್ಟ್ ಗೆ
* ಮೊಸರು 1 ಕಪ್ (ಗಟ್ಟಿ ಮೊಸರು)
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1ಚಮಚ
* ಜೀರಿಗೆ ಪುಡಿ 1 ಚಮಚ
* ಕರಿ ಮೆಣಸಿನ ಪುಡಿ ಅರ್ಧ ಚಮಚ
* ಚಿಟಿಕೆಯಷ್ಟು ಆಮ್ ಚೂರ್
* ಮೆಂತೆ ಪುಡಿ ಅರ್ಧ ಚಮಚ
* ನಿಂಬೆ ರಸ 1 ಚಮಚ
* ರುಚಿಗೆ ತಕ್ಕ ಉಪ್ಪು


ತಯಾರಿಸುವ ವಿಧಾನ:

* ಪೇಸ್ಟ್ ಗೆ ಹೇಳಿರುವ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಕಲೆಸಿ. ಈಗ ಈ ಮಿಶ್ರಣವನ್ನು ಎರಡು ಬಟ್ಟಲಿಗೆ ಹಾಕಿ. ಒಂದು ಬಟ್ಟಲಿಗೆ ಪನ್ನೀರ್ ಹಾಕಿ, ಮತ್ತೊಂದು ಬಟ್ಟಲಿಗೆ ದುಂಡು ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಮಿಶ್ರ ಮಾಡಿ ಅರ್ಧ ಗಂಟೆ ಇಡಿ.

* ನಂತರ skewers(ಟಿಕ್ಕಾ ಮಾಡಲು ಬಳಸುವ ತಂತಿ) ಗೆ ಪನ್ನೀರ್ ಮತ್ತು ಟೊಮೆಟೊವನ್ನು ಚುಚ್ಚಿ, ಪನ್ನೀರ್ ಗೆ ಬೆಣ್ಣೆ ಸವರಿ ಗ್ಯಾಸ್ ನಲ್ಲಿ ತಿರುಗಿಸುತ್ತಾ ಸುಡಿ. ಪನ್ನೀರ್ ಸುಟ್ಟು, ಕಪ್ಪಾಗುವಷ್ಟು ಹೊತ್ತು ಹಿಡಿಯಬೇಡಿ. ಸ್ವಲ್ಪ ಕಂದು ಬಣ್ಣ ಬರುವಾಗಲೇ ತೆಗೆಯಿರಿ.

ಇಷ್ಟು ರುಚಿ-ರುಚಿಯಾದ ಪನ್ನೀರ್ ಟಿಕ್ಕಾ ರೆಡಿ.

English summary

Tandoori Paneer Tikka Recipe |Variety Of Snacks Recipe | ತಂದೂರಿ ಪನ್ನೀರ್ ಟಿಕ್ಕಾ ರೆಸಿಪಿ | ಅನೇಕ ಬಗೆಯ ತಿಂಡಿಯ ರೆಸಿಪಿ

If you are on a diet, use low-fat paneer. You can even replace paneer with tofu. The best part about this starter vegetarian recipe is, the marinade adds a different taste and flavour to tandoori paneer tikka. Want to try it? Check out the recipe.
X
Desktop Bottom Promotion